
ನವದೆಹಲಿ(ಏ.26): ಕೊರೋನಾ ವೈರಸ್ ರೋಗ ತೊಲಗಿಸಲು ವಿಶ್ವಾದ್ಯಂತ ವೈದ್ಯರು ಹಾಗೂ ಸಂಶೋಧಕ ಸಮುದಾಯವು ಔಷಧಿ ಮತ್ತು ಲಸಿಕೆಗಾಗಿ ತಡಕಾಡುತ್ತಿರುವ ನಡುವೆಯೇ, ಯೋಗಗುರು ಬಾಬಾ ರಾಮದೇವ್ ಅವರು ವೈರಸ್‌ನಿಂದ ಪಾರಾಗಲು ಜನರಿಗೆ ಸಲಹೆಗಳನ್ನು ನೀಡಿದ್ದಾರೆ.
‘ಮೂಗಿನಲ್ಲಿ ಸಾಸಿವೆ ಎಣ್ಣೆ ಹಾಕಿಕೊಳ್ಳಬೇಕು. ಆಗ ಉಸಿರಾಟದ ನಾಳದ ಮೂಲಕ ಕೊರೋನಾ ವೈರಸ್ ಹೊಟ್ಟೆಗೆ ಇಳಿಯುತ್ತದೆ. ಆಗ ಹೊಟ್ಟೆಯಲ್ಲಿರುವ ಆ್ಯಸಿಡ್ ಅಂಶವು ವೈರಸ್ ಅನ್ನು ಸಾಯಿಸುತ್ತದೆ’ ಎಂದು ಕಾರ್ಯಕ್ರಮವೊಂದರಲ್ಲಿ ರಾಮದೇವ್ ಹೇಳಿದರು.
ಜಡ್ಜ್ ಮುಂದೆ ಬನಿಯನ್‌ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!
ಇದಲ್ಲದೆ, ‘ಆರೋಗ್ಯವಂತ ಮನುಷ್ಯನು 1 ನಿಮಿಷ ಉಸಿರು ಬಿಗಿಹಿಡಿಯುವ ವಿಶೇಷ ಪ್ರಾಣಾಯಾಮ ಮಾಡಲು ಯಶಸ್ವಿಯಾದರೆ ಆತನಿಗೆ ಕೊರೋನಾ ವೈರಸ್ ಅಂಟಿಲ್ಲ ಎಂಬುದು ದೃಢವಾಗುತ್ತದೆ. ಒಂದು ವೇಳೆ ಹೃದಯರೋಗ, ಡಯಾಬಿಟಿಸ್, ಹೈಪರ್‌ಟೆನ್ಷನ್ ರೋಗಿಗಳು ಹಾಗೂ ವೃದ್ಧರು 30 ನಿಮಿಷ ಉಸಿರು ಬಿಗಿ ಹಿಡಿಯುವ ಪ್ರಾಣಾಯಾಮ ಮಾಡುವಲ್ಲಿ ಯಶ ಕಂಡರೆ ಅವರಿಗೆ ಸೋಂಕು ತಾಗಿಲ್ಲ ಎಂಬುದು ಖಚಿತವಾಗುತ್ತದೆ’ ಎಂದು ತಿಳಿಸಿದರು.
ಯೋಗವನ್ನು ಒಲಿಂಪಿಕ್ಸ್‌ಗೆ ಸೇರಿಸುವುದೇ ಗುರಿ: ಬಾಬಾ ರಾಮ್‌ದೇವ್
ದೇಶದಲ್ಲಿ 26000 ತಲುಪಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಸೋಂಕಿತರ ಸಂಖ್ಯೆ 24,942ಕ್ಕೆ ಏರಿದೆ. 24 ತಾಸುಗಳ ಅವಧಿಯಲ್ಲಿ ದಾಖಲೆಯ 56 ಮಂದಿ (ಶುಕ್ರವಾರ ರಾತ್ರಿಯದ್ದೂ ಸೇರಿ) ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆ 779ಕ್ಕೇರಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ