ತೆಲಂಗಾಣದಲ್ಲಿ ಆಪರೇಷನ್ ಹಸ್ತ : 6 ಪರಿಷತ್ ಸದಸ್ಯರ ಬಳಿಕ ಮತ್ತೊಬ್ಬ BRS ಶಾಸಕ ಕಾಂಗ್ರೆಸ್‌ಗೆ

By Kannadaprabha News  |  First Published Jul 7, 2024, 12:52 PM IST

ತೆಲಂಗಾಣದ ಬಿಆರ್‌ಎಸ್‌ ಪಕ್ಷದ 6 ವಿಧಾನಪರಿಷತ್‌ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಶನಿವಾರ ಓರ್ವ ವಿಧಾನಸಭಾ ಸದಸ್ಯ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ವಿಪಕ್ಷ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.


ಹೈದರಾಬಾದ್‌: ತೆಲಂಗಾಣದ ಬಿಆರ್‌ಎಸ್‌ ಪಕ್ಷದ 6 ವಿಧಾನಪರಿಷತ್‌ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಶನಿವಾರ ಓರ್ವ ವಿಧಾನಸಭಾ ಸದಸ್ಯ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ವಿಪಕ್ಷ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಈವರೆಗೆ 7 ವಿಧಾನಸಭಾ ಸದಸ್ಯರು ಕೆಸಿಆರ್‌ ಪಕ್ಷ ತ್ಯಜಿಸಿದಂತಾಗಿದೆ.

ಇಲ್ಲಿನ ಜುಬ್ಲಿ ಹಿಲ್ಸ್‌ನಲ್ಲಿರುವ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ರೇವಂತ್‌ ರೆಡ್ಡಿ ಹಾಗೂ ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ ಗದ್ವಾಲ್‌ನ ಶಾಸಕ ಕೃಷ್ಣಮೋಹನ್ ರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಳೆದ ವರ್ಷ 119 ಸ್ಥಾನಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ 39 ಸ್ಥಾನ ಪಡೆದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಈಗ ಬಿಆರ್‌ಎಸ್‌ ಬಲ 32ಕ್ಕೆ ಕುಸಿದಿದೆ.

Tap to resize

Latest Videos

ದೆಹಲಿ ಅಬಕಾರಿ ಹಗರಣ: ನಾನು ಬಿಜೆಪಿ ಕಸ್ಟಡಿಯಲ್ಲಿದ್ದೇನೆ, ಸಿಬಿಐ ಕಸ್ಟಡಿಯಲ್ಲಿ ಅಲ್ಲ: ಕೆ ಕವಿತಾ

ಇದಕ್ಕೂ ಮೊದಲು ಗುರುವಾರ ತಡರಾತ್ರಿ ಬಿಆರ್‌ಎಸ್‌ ಪಕ್ಷದ 6 ವಿಧಾನ ಪರಿಷತ್‌ ಸದಸ್ಯರು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ದಂದೆ ವಿಠಲ್‌, ಭಾನು ಪ್ರಸಾದ್‌ ರಾವ್‌, ಎಮ್.ಎಸ್.ಪ್ರಭಾಕರ್, ಬೊಗ್ಗರಪು ದಯಾನಂದ್, ಯೆಗ್ಗೆ ಮಲ್ಲೇಶಮ್, ಬಸವರಾಜು ಸರಯ್ಯ ಪಕ್ಷಾಂತರವಾಗಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಎರಡು ದಿನಗಳ ದೆಹಲಿ ಭೇಟಿಯಿಂದ ಮರಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಕೆಲವರು ಬಿಆರ್‌ಎಸ್‌ನಿಂದ ಪಕ್ಷಾಂತರವಾಗುವ ಸಾಧ್ಯತೆಯಿದೆ ಎಂದು ಆಗಲೇ ಊಹೆ ಮಾಡಲಾಗಿತ್ತು. ಅದರಂತೆ ನಿನ್ನೆ  ಗದ್ವಾಲ್‌ನ ಶಾಸಕ ಕೃಷ್ಣಮೋಹನ್ ರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ 119 ಸ್ಥಾನಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ 39 ಸ್ಥಾನ ಪಡೆದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಆದರೆ ಈಗ  ಶಾಸಕರ ಪಕ್ಷಾಂತರದಿಂದಾಗಿ ಬಿಆರ್‌ಎಸ್‌ ಬಲ 33ಕ್ಕೆ ಕುಸಿದಿದೆ.

ಕೇಜ್ರಿ ವಿರುದ್ಧ ಟಿಡಿಪಿ ಸಂಸದನ ಸುಳ್ಳು ಸಾಕ್ಷ್ಯ: ಪತ್ನಿ ಸುನೀತಾ ಆರೋಪ

ನವದೆಹಲಿ: ಅಬಕಾರಿ ಲೈಸೆನ್ಸ್‌ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬಂಧನದ ಹಿಂದೆ ಆಳವಾದ ರಾಜಕೀಯ ಸಂಚಿದೆ ಎಂದು ಅವರ ಪತ್ನಿ ಸುನಿತಾ ಕೇಜ್ರಿವಾಲ್‌ ಆರೋಪ ಮಾಡಿದ್ದಾರೆ. ಶನಿವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸುನಿತಾ, ತೆಲುಗು ದೇಶಂ ಪಕ್ಷದ ಸಂಸದ ಮಗುಂಟ ಶ್ರೀನಿವಾಸುಲು ರೆಡ್ಡಿ ನೀಡಿದ ಸಾಕ್ಷ್ಯ ಆಧರಿಸಿ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ತಮ್ಮ ಪುತ್ರ ರಾಘವ ಮುಗುಂಟ ರೆಡ್ಡಿ ಅವರನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಿದ ಬಳಿಕ ಶ್ರೀನಿವಾಸಲು ರೆಡ್ಡಿ ತಮ್ಮ ಹೇಳಿಕೆ ಬದಲಿಸಿದ್ದಾರೆ. ಈ ಸುಳ್ಳು ಸಾಕ್ಷ್ಯಗಳನ್ನು ಆಧರಿಸಿ ಅಬಕಾರಿ ಲೈಸೆನ್ಸ್‌ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಂತದಲ್ಲಿ ಜನತೆ ಕೇಜ್ರಿವಾಲ್‌ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಭಾರೀ ಸೋಲು, ನಾಯಕರ ಸತತ ವಲಸೆ: ಕೆಸಿಆರ್‌ ಪಕ್ಷದ ಕಟ್ಟಡ ವಾಸ್ತು ಬದಲಾವಣೆ

ಇದೆ ವೇಳೆ, ಕೇಜ್ರಿವಾಲ್‌ ಪ್ರಾಮಾಣಿಕ, ಸುಶಿಕ್ಷಿತ ಮತ್ತು ದೇಶಪ್ರೇಮಿ ವ್ಯಕ್ತಿ. ಹೀಗಿರುವಾಗ ದೇಶದ ಜನತೆ ಕೇಜ್ರಿವಾಲ್‌ ಅವರನ್ನು ಬೆಂಬಲಿಸದೇ ಹೋದಲ್ಲಿ ಮುಂದೆ ಯಾವುದೇ ಸುಶಿಕ್ಷಿತ ವ್ಯಕ್ತಿಯೂ ರಾಜಕೀಯ ಸೇರಲು ಮುಂದಾಗುವುದಿಲ್ಲ ಎಂದು ಸುನಿತಾ ಹೇಳಿದ್ದಾರೆ.

click me!