
ಅಹಮದಾಬಾದ್ (ಜು.07): ‘ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಕೂಟವು ಬಿಜೆಪಿಯನ್ನು ಸೋಲಿಸಿದ ರೀತಿಯಲ್ಲಿಯೇ ಮುಂದಿನ ಗುಜರಾತ್ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್. ‘ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಪಕ್ಷದ ಅಹಮದಾಬಾದ್ ಕಚೇರಿಯನ್ನು ಒಡೆದು ಹಾಕುವ ಮೂಲಕ ನಮಗೆ ಸವಾಲು ಹಾಕಿದ್ದಾರೆ. ಅವರು ನಮ್ಮ ಕಚೇರಿಯನ್ನು ಕೆಡವಿದ ರೀತಿಯಲ್ಲಿಯೇ ನಾವೆಲ್ಲರೂ ಒಗ್ಗಟ್ಟಾಗಿ ಅವರನ್ನು ಸರ್ಕಾರವನ್ನು ಒಡೆದುಹಾಕಬೇಕು. ಬರೆದಿಟ್ಟುಕೊಳ್ಳಿ, ಕಾಂಗ್ರೆಸ್ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತದೆ. ಅಯೋಧ್ಯೆ ರೀತಿಯಲ್ಲಿಯೇ ಗುಜರಾತ್‌ನಲ್ಲಿಯೂ ಬಿಜೆಪಿ ಮತ್ತು ಮೋದಿಯನ್ನು ಸೋಲಿಸುತ್ತೇವೆ’ ಎಂದಿದರು.
ಸುಳ್ಳು ಸುದ್ದಿ ಹರಡಿದರೆ ಯಾವುದೇ ಪಕ್ಷದವರಾದರೂ ಬಿಡಬೇಡಿ: ಸಿಎಂ ಸಿದ್ದರಾಮಯ್ಯ
ಅಲ್ಲದೇ ಗುಜರಾತ್ ಗೆಲುವಿನ ಬಳಿಕ ಹೊಸ ಆರಂಭವಾಗುತ್ದೆ ಎಂದೂ ಅವರು ಭವಿಷ್ಯ ನುಡಿದರು. ಜುಲೈ 2ರಂದು ಅಹಮದಾಬಾದ್ ಕಾಂಗ್ರೆಸ್ ಕಚೇರಿ ಮೇಲೆ ರಾಹುಲ್ ಗಾಂಧಿ ಅವರ ‘ಹಿಂದೂ ಹೇಳಿಕೆ’ ಖಂಡಿಸಿ ದಾಳಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ರಾಹುಲ್ ಸೇಡಿನ ಮಾತುಗಳನ್ನು ಆಡಿದರು. ಇತ್ತೀಚೆಗೆ ಲೋಕಸಭೆಯಲ್ಲೂ ರಾಹುಲ್, ‘ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದಿದ್ದರು.
ಅಡ್ವಾಣಿ ಆರಂಭಿಸಿದ್ದ ಮಂದಿರ ಚಳವಳಿ ಸೋಲಿಸಿದೆವು: ‘ಅಯೋಧ್ಯೆಯೇ ಕೇಂದ್ರವಾಗಿದ್ದ ಅಡ್ವಾಣಿ ಆರಂಭಿಸಿದ್ದ ಚಳವಳಿಯನ್ನು ಇಂಡಿಯಾ ಒಕ್ಕೂಟವು ಅಯೋಧ್ಯೆಯಲ್ಲೇ ಸೋಲಿಸಿತು’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ಇಂಡಿಯಾ ಕೂಟದ ಅಭ್ಯರ್ಥಿಯು ಬಿಜೆಪಿಯನ್ನು ಸೋಲಿಸಿದ್ದನ್ನುಉಲ್ಲೇಖಿಸಿ ಈ ಮಾತು ಆಡಿದ್ದಾರೆ.
ಮುಡಾದಲ್ಲಿ ಹಗರಣ ಆಗಿಲ್ಲವಾದರೆ ತನಿಖೆ ಯಾಕೆ?: ಎಚ್.ಡಿ.ಕುಮಾರಸ್ವಾಮಿ
ಶನಿವಾರ ಅಹ್ಮದಾಬಾದ್‌ನಲ್ಲಿ ಮಾತನಾಡಿದ ಅವರು, ‘ಅಯೋಧ್ಯೆ ವಿಮಾನ ನಿಲ್ದಾಣವನ್ನು ನಿರ್ಮಿಸಿದಾಗ ಅಯೋಧ್ಯೆಯ ರೈತರು ತಮ—್ಮ ಭೂಮಿಯನ್ನು ಕಳೆದುಕೊಂಡರು, ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಯಿಂದ ಯಾರನ್ನೂ ಆಹ್ವಾನಿಸಲಿಲ್ಲ. ಇದರಿಂದ ಜನ ಅಸಮಾಧಾನಗೊಂಡರು. ಅಯೋಧ್ಯೆಯೇ ಕೇಂದ್ರವಾಗಿದ್ದ ಅಡ್ವಾಣಿ ಆರಂಭಿಸಿದ್ದ ಚಳವಳಿಯನ್ನು ಇಂಡಿಯಾ ಒಕ್ಕೂಟವು ಅಯೋಧ್ಯೆಯಲ್ಲೇ ಸೋಲಿಸಿತು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ