ಒಂದು ದೇಶ ಒಂದು ಎಲೆಕ್ಷನ್‌ ಬಿಲ್‌ ಸಂಸತ್ತಲ್ಲಿಂದು ಮಂಡನೆ

By Girish Goudar  |  First Published Dec 17, 2024, 5:03 AM IST

‘ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಮಸೂದೆ ಮಂಡಿಸಲಿದ್ದಾರೆ. ಬಳಿಕ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ, ‘ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಇದನ್ನು ವಹಿಸಿ’ ಎಂದು ಕೋರಲಿದ್ದಾರೆ. 


ನವದೆಹಲಿ(ಡಿ.17):  ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು(ಮಂಗಳವಾರ) ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ. ಮಂಡನೆಯ ಬಳಿಕ ಉಭಯ ಸದನಗಳ ಜಂಟಿ ಸಮಿತಿ ಪರಾಮರ್ಶೆಗೆ ಈ ವಿಧೇಯಕವನ್ನು ಹಸ್ತಾಂತರಿಸುವ ನಿರೀಕ್ಷೆ ಇದೆ.

‘ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಮಸೂದೆ ಮಂಡಿಸಲಿದ್ದಾರೆ. ಬಳಿಕ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ, ‘ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಇದನ್ನು ವಹಿಸಿ’ ಎಂದು ಕೋರಲಿದ್ದಾರೆ. ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಅನುಪಾತದ ಆಧಾರದ ಮೇಲೆ ಜಂಟಿ ಸಮಿತಿಯನ್ನು ರಚಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಒಂದು ರಾಷ್ಟ್ರ, ಒಂದು ಚುನಾವಣೆ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಈ ಮುನ್ನ ಸೋಮವಾರ ವಿಧೇಯಕ ಮಂಡಿಸಲು ಉದ್ದೇಶಿಸಲಾಗಿತ್ತು. ಆದರೆ ಪೂರಕ ಅಂದಾಜುಗಳು ಅಂಗೀಕಾರ ಆಗಬೇಕಿದ್ದ ಕಾರಣ ಮಂಡನೆಯನ್ನು ಮುಂದೂಡಲಾಗಿತ್ತು. ಈ ನಡುವೆ, ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸದನದಲ್ಲಿ ಅನುಪಸ್ಥಿತರಿದ್ದ ಕಾರಣಕ್ಕೂ ಸೋಮವಾರ ಮಸೂದೆ ಮಂಡನೆ ಮಾಡಿರಲಿಲ್ಲ ಎಂದು ಮೂಲಗಳು ಹೇಳಿವೆ.

undefined

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಮಸೂದೆ ಮಂಡಿಸಲಿದ್ದಾರೆ. ಬಳಿಕ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ, ‘ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಇದನ್ನು ವಹಿಸಿ’ ಎಂದು ಕೋರಲಿದ್ದಾರೆ. ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಅನುಪಾತದ ಆಧಾರದ ಮೇಲೆ ಜಂಟಿ ಸಮಿತಿಯನ್ನು ರಚಿಸಲಾಗುತ್ತದೆ. 

ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್‌: ಏಕ ಚುನಾವಣೆ ವಿಧೇಯಕ

ನವದೆಹಲಿ:  ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿದೆ. 5 ವರ್ಷಕ್ಕೂ ಮುನ್ನವೇ ಚುನಾಯಿತ ಸರ್ಕಾರ ಬಿದ್ದರೆ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ ಎಂಬ ಮಹತ್ವದ ಅಂಶಗಳು ಇದರಲ್ಲಿದೆ. 5 ವರ್ಷಕ್ಕೂ ಮೊದಲೇ ಸರ್ಕಾರ ಬಿದ್ದರೆ ಸರ್ಕಾರ ಅಪೂರ್ಣವಾಗುತ್ತದೆ. ಉಳಿದ ಅವಧಿಗೆ ಏನು ಮಾಡುತ್ತೀರಿ? ಸರ್ಕಾರ ಇಲ್ಲದೇ ರಾಷ್ಟ್ರಪತಿ ಆಳ್ವಿಕೆ ಹೇರಿ ಆಡಳಿತ ನಡೆಸುತ್ತೀರಾ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳಿದ್ದವು. ಅದಕ್ಕೆ ಉತ್ತರ ನೀಡುವ ಯತ್ನವನ್ನು ಗುರುವಾರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಮಸೂದೆಯಲ್ಲಿ ಮಾಡಲಾಗಿದೆ.

2034ರಲ್ಲಿ ನಡೆಯಲಿದೆ ಒನ್‌ ನೇಷನ್‌, ಒನ್‌ ಎಲೆಕ್ಷನ್‌?

ಮಸೂದೆಯಲ್ಲೇನಿದೆ?: 

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವುದು ಅಗತ್ಯ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪದೇ ಪದೇ ಚುನಾವಣೆ ನಡೆಯುವುದರಿಂದ ಆಗುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಸೂದೆ ಹೇಳಿದೆ. ಈ ವಿಧೇಯಕವು ಸಂವಿಧಾನಕ್ಕೆ ಹೊಸ ಅನುಚ್ಛೇದ ಸೇರ್ಪಡೆಗೊಳಿಸುವುದಲ್ಲದೆ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ರೀತಿಯಲ್ಲಿ ಮೂರು ಅನುಚ್ಛೇದಗಳ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ.

ಒಂದು ವೇಳೆ ಅವಧಿಗೆ ಮುನ್ನವೇ ಸರ್ಕಾರ ಪತನಗೊಂಡರೆ ಮುಂದೇನು ಎಂಬುದಕ್ಕೂ ಈ ವಿಧೇಯಕದಲ್ಲಿ ಉತ್ತರವಿದೆ. ಅಂಥ ಪರಿಸ್ಥಿತಿಯಲ್ಲಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಬಾಕಿ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ. ಅಂದರೆ (ಉದಾಹರಣೆಗೆ) ಸರ್ಕಾರ ಮೂರೇ ವರ್ಷಕ್ಕೆ ಪತನಗೊಂಡರೆ ಮುಂದಿನ ಎರಡು ವರ್ಷಕ್ಕಷ್ಟೇ ಮರು ಚುನಾವಣೆ ನಡೆಯಲಿದೆ. ಹೊಸ ಸರ್ಕಾರ 3 ವರ್ಷ ಪೂರೈಸಿದ ನಂತರ ಮತ್ತೆ ವಿಧಾನಸಭೆ/ಲೋಕಸಭೆ ಚುನಾವಣೆ ಒಟ್ಟಿಗೇ ನಡೆಯಲಿವೆ.

click me!