ನೆಹರು-ಎಡ್ಡಿನಾ ಖಾಸಗಿ ಪತ್ರ ಸೋನಿಯಾ ವಶ: ವಾಪಸ್‌ ನೀಡಲು ರಾಹುಲ್‌ಗೆ ಪ್ರಧಾನಿ ಮ್ಯೂಸಿಯಂ ಪತ್ರ

By Kannadaprabha News  |  First Published Dec 17, 2024, 4:54 AM IST

ಕಳೆದ ಸೆಪ್ಟೆಂಬರ್‌ನಲ್ಲೇ ಸೋನಿಯಾಗೆ ಒಮ್ಮೆ ಪತ್ರ ಬರೆದಿದ್ದ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ (ಪಿಎಂಎಂಎಲ್)ದ ಅಧಿಕಾರಿಗಳು ಇದೀಗ ಅದೇ ವಿಷಯದ ಕುರಿತು ರಾಹುಲ್‌ಗೆ ಪತ್ರ ಬರೆದಿದ್ದಾರೆ. 


ನವದೆಹಲಿ(ಡಿ.17):  ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ನಿ ಎಡೀನಾಗೆ ಬರೆದದ್ದೂ ಸೇರಿದಂತೆ ಅವರ ಹಲವು 'ಖಾಸಗಿ ಪತ್ರಗಳನ್ನು' 2008ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ವಶಕ್ಕೆ ಪಡೆದಿದ್ದರು. ಈಗ ಈ ಪತ್ರಗಳನ್ನು ಮರಳಿಸುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. 

ಇದೇ ಕುರಿತು ಕಳೆದ ಸೆಪ್ಟೆಂಬರ್‌ನಲ್ಲೇ ಸೋನಿಯಾಗೆ ಒಮ್ಮೆ ಪತ್ರ ಬರೆದಿದ್ದ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ (ಪಿಎಂಎಂಎಲ್)ದ ಅಧಿಕಾರಿಗಳು ಇದೀಗ ಅದೇ ವಿಷಯದ ಕುರಿತು ರಾಹುಲ್‌ಗೆ ಪತ್ರ ಬರೆದಿದ್ದಾರೆ. 

Tap to resize

Latest Videos

ಸಂವಿಧಾನ ಹಾಳು ಮಾಡಿದ್ದೇ ಕಾಂಗ್ರೆಸ್: ನೆಹರು ಕುಟುಂಬದ ಮೇಲೆ ಪ್ರಧಾನಿ ಮೋದಿ ಅಕ್ರೋಶ

ನೆಹರು ಅವರು ಆಲ್ಬರ್ಟ್ ಐನ್‌ಸ್ಟೀನ್, ಜಯಪ್ರಕಾಶ್ ನಾರಾಯಣ್, ಎಡೀನಾ ಮೌಂಟ್ ಬ್ಯಾಟನ್, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್, ಅರುಣಾ ಅಸಫ್ ಅಲಿ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಪತ್ರಗಳನ್ನು ಬರೆದಿದ್ದರು. ಆದರೆ 'ಇವುಗಳು ಖಾಸಗಿ ಪತ್ರಗಳು. ಸಾರ್ವಜನಿಕ ಪ್ರದರ್ಶನಬೇಡ' ಎಂದು 2008ರಲ್ಲಿ ಸೋನಿಯಾ ಅವರು ತಕರಾರು ಮಾಡಿದ್ದರು. ಹೀಗಾಗಿ ಅವರ ಸೂಚನೆ ಮೇರೆಗೆ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲ ಯದಿಂದ ಈ ಖಾಸಗಿ ಪತ್ರಗಳನ್ನು ತೆಗೆದು ಸೋನಿಯಾರಿಗೆ ರವಾನಿಸಲಾಗಿತ್ತು.

• ಕೊನೆಯ ವೈಸ್‌ರಾಯ್ ಎಡ್ವನಾ ಸೇರಿ ಹಲವು ಗಣ್ಯರಿಗೆ ಖಾಸಗಿ ಪತ್ರ ಬರೆದಿದ್ದ ನೆಹರು 
• ಇವು ಖಾಸಗಿ ಸ್ವರೂಪದ ಪತ್ರಗಳಾಗಿದ್ದು, ಸಾರ್ವ ಜನಿಕ ಪ್ರದರ್ಶನ ಬೇಡ ಎಂದಿದ್ದ ಸೋನಿಯಾ 
• 2008ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ನೆಹರು ಖಾಸಗಿ ಪತ್ರ ಸೋನಿಯಾಗೆ ಹಸ್ತಾಂತರ . ಆ ಪತ್ರಗಳನ್ನು ಮರಳಿಸುವಂತೆ ಸೋನಿಯಾ ಗಾಂಧಿಯವರಿಗೆ ಸೆಪ್ಟೆಂಬರ್‌ನಲ್ಲೇ ಪತ್ರ ಬರೆದಿದ್ದ ಪ್ರಧಾನಮಂತ್ರಿ ಮ್ಯೂಸಿಯಂ
 • ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈಗ ಸೋನಿಯಾ ಪುತ್ರ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಕೋರಿದ ಅಧಿಕಾರಿಗಳು

click me!