Telangana CM Controversy: 'ಹಿಂದೂಗಳಲ್ಲಿ ಕುಡುಕರಿಗೊಬ್ಬ ದೇವರು..' ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದ

Kannadaprabha News, Ravi Janekal |   | Kannada Prabha
Published : Dec 03, 2025, 08:56 AM IST
one god for drinkers telangana cm revanth reddy remark stire row

ಸಾರಾಂಶ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹಿಂದೂ ಧರ್ಮದಲ್ಲಿರುವ 3 ಕೋಟಿ ದೇವರುಗಳ ಅಸ್ತಿತ್ವ ಮತ್ತು ಉದ್ದೇಶವನ್ನು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಈ ಹೇಳಿಕೆಗೆ ಬಿಜೆಪಿ ಬಿಆರ್‌ಎಸ್‌ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂಗಳಿಗೆ ಅವಮಾನವಾಗಿದೆ ಎಂದು ಆರೋಪಿಸಿವೆ.

ಹೈದರಾಬಾದ್‌ (ಡಿ.3): ‘ಹಿಂದೂಗಳಲ್ಲಿ 3 ಕೋಟಿ ದೇವರುಗಳು ಏಕಿದ್ದಾರೆ? ಒಬ್ಬರು ಅವಿವಾಹಿತರಿಗಾದರೆ, ಇನ್ನೊಬ್ಬರು ಕೋಳಿ ಬಲಿ ಕೊಡಲು, ಮತ್ತೊಬ್ಬರು ಸಾರಾಯಿ ಕುಡಿಯಲು’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಬಿಆರ್‌ಎಸ್‌ ಆಕ್ರೋಶಕ್ಕೆ ಕಾರಣವಾಗಿದೆ.

3 ಕೋಟಿ ದೇವರುಗಳಿವೆಯೇ?

ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ‘ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? 3 ಕೋಟಿ ದೇವರುಗಳಿವೆಯೇ? ಇಷ್ಟೊಂದು ಏಕೆ ಅಸ್ತಿತ್ವದಲ್ಲಿವೆ? ಅವಿವಾಹಿತರಿಗೆ ಒಬ್ಬ ದೇವರು - ಹನುಮಾನ್. 2 ಬಾರಿ ಮದುವೆಯಾಗುವವರಿಗೆ ಇನ್ನೊಬ್ಬ ದೇವರು, ಮದ್ಯಪಾನ ಮಾಡುವವರಿಗೊಬ್ಬ, ಕೋಳಿ ಬಲಿಗೆ ಒಬ್ಬ, ಬೇಳೆ ಮತ್ತು ಅನ್ನಕ್ಕೆ ಒಬ್ಬ ದೇವರಿನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರಿದ್ದಾನೆ’ ಎಂದಿದ್ದಾರೆ.

ಬಿಜೆಪಿ, ಬಿಆರ್‌ಎಸ್‌ ಆಕ್ರೋಶ: 

ರೇವಂತ್ ರೆಡ್ಡಿ ಹೇಳಿಕೆಯಿಂದ ಹಿಂದೂಗಳಿಗೆ ಅವಮಾನವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕು ಮತ್ತು ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಬಿಜೆಪಿ ನಾಯಕ ಚಿಕ್ಕೋಟಿ ಪ್ರವೀಣ್ ಆಗ್ರಹಿಸಿದ್ದಾರೆ. ‘ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೋ, ಅವರನ್ನು ಸಂತುಷ್ಟಗೊಳಿಸಲು ರೆಡ್ಡಿ ಈ ರೀತಿ ಮಾತಾಡುತ್ತಿದ್ದಾರೆ’ ಎಂದು ಬಿಆರ್‌ಎಸ್‌ ಮುಖಂಡ ರಾಕೇಶ್ ರೆಡ್ಡಿ ಅನುಗುಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ರೆಡ್ಡಿ, ‘ದೇವರ ಫೋಟೊ ಮುಂದೆ ಕೈಯೊಡ್ಡುವವರು ಭಿಕ್ಷುಕರೇ ಹೊರತು ಹಿಂದೂಗಳಲ್ಲ. ದೇವರು ಮಂದಿರದಲ್ಲಿರಬೇಕು. ಬಿಜೆಪಿಗರು ದೇವರ ಫೋಟೊವನ್ನು ಬೀದಿಯಲ್ಲಿಟ್ಟು ಮತ ಕೇಳುತ್ತಾರೆ’ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ