
ವಾರಾಣಸಿ (ಡಿ.3): ಅತ್ಯಂತ ಕಠಿಣ ಎಂದು ಹೇಳಲಾಗುವ, ಶುಕ್ಲ ಯಜುರ್ವೇದದ ಮಧ್ಯಮಂಡಿನಿ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣ ಪಠಣವನ್ನು 50 ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಮಹಾರಾಷ್ಟ್ರ ಮೂಲದ ಯುವ ವೇದ ಪಂಡಿತ ವೇದಮೂರ್ತಿ ದೇವವ್ರತ ರೇಖೆ ಪೂರ್ಣಗೊಳಿಸಿದ್ದಾರೆ.
19 ವರ್ಷದ ರೇಖೆ, ವಾರಾಣಸಿಯಲ್ಲಿ ದೇವವ್ರತ ಅವರು, ವೇದ ಶ್ಲೋಕಗಳು ಮತ್ತು ಪವಿತ್ರ ಶ್ಲೋಕಗಳನ್ನು ಒಂದೇ ಒಂದು ತಪ್ಪಿಲ್ಲದೆ ಪಠಿಸಿದ್ದಾರೆ. ಈ ರೀತಿಯ ಯಶಸ್ವಿ ದಂಡಕ್ರಮ ಪಾರಾಯಣ ಪಠಣ ಇತಿಹಾಸದಲ್ಲೇ 3ನೇ ಸಲ. ಅಲ್ಲದೆ, 200 ವರ್ಷ ಬಳಿಕ ಈ ಸಾಧನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಈ ಪ್ರಯತ್ನಕ್ಕೆ ಶೃಂಗೇರಿ ಮಠ ಸಹಕಾರ ನೀಡಿದೆ.
ಇದನ್ನು ವಾರಾಣಸಿ ಸಂಸದರೂ ಆಗಿರುವ ನರೇಂದ್ರ ಮೋದಿ ಶ್ಲಾಘಿಸಿದ್ದು, ‘ದೇವವ್ರತ ಮಹೇಶ್ ರೇಖೆ ಅವರನ್ನು ಮುಂದಿನ ಪೀಳಿಗೆಯವರು ಸ್ಮರಿಸುತ್ತಾರೆ. ಒಂದೇ ಒಂದು ತಪ್ಪಿಲ್ಲದೆ ಅವರು ಮಂತ್ರ ಪಠಿಸಿದ್ದಾರೆ. ಅವರು ನಮ್ಮ ಗುರು ಸಂಪ್ರದಾಯದ ಅತ್ಯುತ್ತಮ ಉದಾಹರಣೆ. ಕಾಶಿಯ ಸಂಸದನಾಗಿ, ಈ ಪವಿತ್ರ ನಗರದಲ್ಲಿ ಈ ಅಸಾಧಾರಣ ಸಾಧನೆ ನಡೆದಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ