ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!

Published : Oct 27, 2023, 08:47 AM IST
ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!

ಸಾರಾಂಶ

ಬಹುಚರ್ಚಿತ ‘ಒಂದು ದೇಶ ಒಂದು ಚುನಾವಣೆ’ ಯೋಜನೆ ಕಾರ್ಯರೂಪಕ್ಕೆ ತರಬೇಕಾದರೆ, 30 ಲಕ್ಷ ಇವಿಎಂಗಳು ಬೇಕು ಮತ್ತು ಅದಕ್ಕೆ ಅಗತ್ಯ ಸಿದ್ಧತೆ ನಡೆಸಲು ಕನಿಷ್ಠ ಒಂದೂವರೆ ವರ್ಷ ಅವಧಿ ಬೇಕು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ನವದೆಹಲಿ:  ಬಹುಚರ್ಚಿತ ‘ಒಂದು ದೇಶ ಒಂದು ಚುನಾವಣೆ’ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾದರೆ, 30 ಲಕ್ಷ ಇವಿಎಂಗಳು ಬೇಕು ಮತ್ತು ಅದಕ್ಕೆ ಅಗತ್ಯ ಸಿದ್ಧತೆ ನಡೆಸಲು ಕನಿಷ್ಠ ಒಂದೂವರೆ ವರ್ಷ ಅವಧಿ ಬೇಕು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಒಂದು ಮತಯಂತ್ರವು 1 ಕಂಟ್ರೋಲ್‌ ಯೂನಿಟ್‌, ಒಂದು ಬ್ಯಾಲೆಟ್‌ ಯೂನಿಟ್‌ (Ballet Unit) ಮತ್ತು ಒಂದು ಮತ ತಾಳೆ ಯಂತ್ರ ಒಳಗೊಂಡಿರುತ್ತದೆ. ಈ ಲೆಕ್ಕಾಚಾರದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸುಮಾರು 30 ಲಕ್ಷ ಕಂಟ್ರೋಲ್‌ ಯೂನಿಟ್‌, 43 ಲಕ್ಷ ಬ್ಯಾಲೆಟ್‌ ಯೂನಿಟ್‌ ಮತ್ತು 32 ಲಕ್ಷ ವಿವಿಪ್ಯಾಟ್‌ಗಳು ಬೇಕಾಗುತ್ತವೆ.

ಡಿಬಿಟಿಗಾಗಿ ಸರ್ಕಾರಿ ಶಾಲೆಗೆ ಸೇರಿ ಖಾಸಗಿಯಲ್ಲಿ ಓದುತ್ತಿರುವ ಅನುಮಾನ: 20 ಲಕ್ಷ ವಿದ್ಯಾರ್ಥಿಗಳ ವಜಾ

ಒಂದೇ ಬಾರಿ ಲೋಕಸಭಾ (Loksabha) ಮತ್ತು ವಿಧಾನಸಭಾ ಚುನಾವಣೆ (Assembly Election) ನಡೆದರೆ ಮತದಾದರು ಒಮ್ಮೆಯೇ ಎರಡು ಮತಯಂತ್ರಗಳಲ್ಲಿ ಮತ ಚಲಾಯಿಸಬೇಕಾಗುತ್ತದೆ. ಹೀಗಾಗಿ ಒಮ್ಮೆಲೇ ದುಪ್ಪಟ್ಟು ಮತಯಂತ್ರಗಳ ಅವಶ್ಯವಿದ್ದು, ಸುಮಾರು 35 ಲಕ್ಷ ಮತದಾನದ ಘಟಕಗಳ (ತುರ್ತು ಸಂದರ್ಭದಲ್ಲಿ ಇರಿಸಲಾದ ಹೆಚ್ಚುವರಿ ಘಟಕ ಸೇರಿ) ಕೊರತೆಯಿದೆ ಎನ್ನಲಾಗಿದೆ. ಇವುಗಳ ಅಂದಾಜು ತಯಾರು ವೆಚ್ಚ ಸುಮಾರು 15000 ಕೋಟಿ ರು. ಆಗಬಹುದು ಎನ್ನಲಾಗಿದೆ.

ದೇಶದಲ್ಲಿ ಒಂದೇ ಚುನಾವಣೆ ಜಾರಿಗೆ ವರದಿ ಸಲ್ಲಿಸುವಂತೆ ಸರ್ಕಾರವು ಸಮಿತಿ ರಚಿಸಿದ್ದು, ಈಗಾಗಲೇ ಸಮಿತಿಯು 2 ಸಭೆ ನಡೆಸಿದೆ. ಅಲ್ಲದೇ ಇದಕ್ಕಾಗಿ ಕಾನೂನು ಆಯೋಗ ಸೇರಿದಂತೆ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಇದೇ ವೇಳೆ ಏಕಕಾಲದಲ್ಲಿ ಚುನಾವಣೆ ನಡೆದರೆ ಚುನಾವಣಾ ಆಯೋಗದ (Election Commission) ತಯಾರಿ ಹೇಗಿರಬೇಕು ಮತ್ತು ಅದರ ಅವಶ್ಯಕತೆಗಳೇನು ಎಂಬ ಕುರಿತು ಮಾಹಿತಿ ಹೊರಬಿದ್ದಿದೆ.

ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE ಬಿಡುಗಡೆ: ಒನ್ UI 9 ಮತ್ತು ಬಲಿಷ್ಠ AI ವೈಶಿಷ್ಟ್ಯಗಳೊಂದಿಗೆ ಮಾರ್ಕೆಟ್‌ಗೆ ಲಗ್ಗೆ
Gandak River: ನೇಪಾಳದಲ್ಲಿ ಭೀಕರ ಪ್ರವಾಹ, ಅಲ್ಲಿಂದಲೇ ಹರಿದು ಬರುವ ಬಿಹಾರದ ಈ ನದಿ ಮಾತ್ರ ಸೈಲೆಂಟ್! ಆದ್ರೂ ಸರ್ಕಾರ ಅಲರ್ಟ್