ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಓಣಂ ಹಬ್ಬದ ಆಚರಣೆಯ ಭಾಗವಾಗಿ ಹಿಜಾಬ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ.
ಓಣಂ ಹಬ್ಬವನ್ನು ಕೇರಳ ಸೇರಿ ದೇಶದ ಬಹುತೇಕ ಕಡೆ ಆಚರಿಸಲಾಗುತ್ತದೆ. ಪ್ರಮುಖವಾಗಿ, ಕೇರಳದಲ್ಲಿ ಹೆಚ್ಚು ಸಂಭ್ರಮದಿಂದ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ. ಅದರಲ್ಲೂ, ಕಳೆದ 2 ವರ್ಷಗಳಿಂದ ಕೋವಿಡ್ - 19 ಕಾರಣಕ್ಕೆ ಹೆಚ್ಚು ಸೀಮಿತ ಆಚರಣೆಗಳು ನಡೆದಿದ್ದವು. ಈ ಹಿನ್ನೆಲೆ, ಈ ಬಾರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 8 ರವರೆಗೆ ಈ ಆಚರಣೆಗಳು 10 ದಿನಗಳ ಕಾಲ ನಡೆದಿವೆ. ಈ ನಡುವೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿದ ಬೆನ್ನಲ್ಲೇ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದ್ದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯೂ ನಡೆಯುತ್ತಿದೆ. ಆದರೆ, ಕೇರಳದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿದ ಹೈಸ್ಕೂಲ್ ಬಾಲಕಿಯರು ಡ್ಯಾನ್ಸ್ ಮಾಡಿದ್ದು, ಈ ಬಹುಸಾಂಸ್ಕೃತಿಕತೆಯನ್ನು ಹಲವು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಹಿಜಾಬ್ ಧರಿಸಿ ಓಣಂ ಆಚರಿಸಿದ ವಿದ್ಯಾರ್ಥಿನಿಯರು
ಸಾಮಾಜಿಕ ಜಾಲತಾಣದಾದ್ಯಂತ ಓಣಂ ಶುಭಾಶಯಗಳ ಹಾಗೂ ಆಚರಣೆಯ ವಿಡಿಯೋಗಳು ಹರಿದಾಡುತ್ತಿವೆ. ಆದರೆ, ಈ ಒಂದು ವಿಡಿಯೋ, ಬಹುತೇಕ ಎಲ್ಲರ ಗಮನವನ್ನೂ ಸೆಳೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರ್ ಪ್ರದೇಶದ ಹೈಸ್ಕೂಲ್‌ನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಓಣಂ ಆಚರಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಂಡೂರ್ ಸರ್ಕಾರಿ ವಿದ್ಯಾರ್ಥಿನಿಯರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರು ಸೀರೆ ಹುಟ್ಟು ಮ್ಯೂಸಿಕ್ ಪ್ಲೇ ಮಾಡಿಕೊಂಡು ತಮ್ಮ ಸಹಪಾಠಿಗಳ ಜತೆ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಶಾಲೆಯಲ್ಲಿ ನಡೆದ ಓಣಂ ಆಚರಣೆಯ ವೇಳೆ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೇರಳದ ಸ್ಪೆಷಲ್ ಹಬ್ಬದೂಟ 'ಓಣಂ ಸದ್ಯ'; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ?
ಓಣಂ ಕೇರಳದ ಅತಿದೊಡ್ಡ ವಾರ್ಷಿಕ ಹಬ್ಬ
ಓಣಂ ಕೇರಳದ ಅತಿ ದೊಡ್ಡ ವಾರ್ಷಿಕ ಹಬ್ಬವಾಗಿದ್ದು, ಇದನ್ನು ರಾಜ್ಯಾದ್ಯಂತ ಜಾತಿ, ಧರ್ಮ ಹಾಗೂ ವಗ್ದ ಭೇದವಿಲ್ಲದೆ ಆಚರಿಸಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್ ಹಾಗೂ ಸ್ಥಳೀಯ ಸಂಪ್ರದಾಯ ಮತ್ತು ಪದ್ಧತಿಗಳ ಆಧಾರದ ಮೇಲೆ ಈ ಹಬ್ಬದ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. 10 ದಿನಗಳ ಕಾಲ ಓಣಂ ಆಚರಣೆ ನಡೆಯುತ್ತದೆ. ಚಿಂಗಮ್ ಮಾಸ (ಆಗಸ್ಟ್ / ಸೆಪ್ಟೆಂಬರ್) ನಲ್ಲಿ ಅಥಮ್ ಆಸ್ಟರಿಸಮ್ ಮೂಲಕ ಆರಂಭವಾಗುವ ಹಬ್ಬ, ತಿರು ಓಣಂ ದಿನದಂದು ಅಂತ್ಯವಾಗುತ್ತದೆ. ಆ ದಿನ ಓಣಂ ಅನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 30 ರಂದು ಓಣಂ ಹಬ್ಬ ಆರಂಭವಾಗಿದ್ದು, 10 ದಿನಗಳ ಕಾಲ ನಡೆಯುವ ಹಬ್ಬ ಸೆಪ್ಟೆಂಬರ್ 8 ರವರೆಗೆ ನಡೆಯುತ್ತದೆ.
Onam 2022: ಕೇರಳದ ಹಬ್ಬಕ್ಕೆ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ ನಟಿಯರು