ಗೆಲುವಿನ ಧ್ಯೇಯದೊಂದಿಗೆ ಕೊರೋನಾ ವಿರುದ್ಧ ಸಮರ| ಕೊರೋನಾ ಪರಿಹಾರ ನಿಟ್ಟಿನಲ್ಲಿ ಕಾಂಗ್ರೆಸ್ ಏನು ಮಾಡಿದೆ| ಬಿಜೆಪಿ ಪ್ರಶ್ನೆಗೆ ಉತ್ತರಿಸುತ್ತಾ ಕಾಂಗ್ರೆಸ್?
ಭುವನೇಶ್ವರ(ಜೂ.09): ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇಡೀ ಭಾರತ ದೇಶವು ಒಂದೇ ರಾಷ್ಟ್ರ, ಏಕ ವ್ಯಕ್ತಿ ಹಾಗೂ ಏಕ ಸ್ಫೂರ್ತಿಯೊಂದಿಗೆ ಕೊರೋನಾ ವಿರುದ್ಧ ಸಮರ ಸಾರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಾದಿಸಿದ್ದಾರೆ. ಇದೇ ಕಾರಣಕ್ಕಾಗಿ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.
ನಿತೀಶ್ ನಾಯಕತ್ವದಲ್ಲೇ ಬಿಹಾರ ಎಲೆಕ್ಷನ್: ಅಮಿತ್ ಶಾ ಘೋಷಣೆ
ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಒಡಿಶಾವನ್ನುದ್ದೇಶಿಸಿ ಮಾತನಾಡಿ, ‘ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪಕ್ಷಭೇದ ಮರೆತು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿ ಸಲಹೆಗಳನ್ನು ಪಡೆದರು. ಕೊರೋನಾ ಮೆಟ್ಟಿನಿಲ್ಲುವುದೊಂದೇ ಸರ್ಕಾರದ ಗುರಿಯಾಗಿತ್ತು. ಇದೇ ಕಾರಣಕ್ಕೆ ಲಾಕ್‌ಡೌನ್ ಘೋಷಣೆ ಬಳಿಕ ವಲಸೆ ಕಾರ್ಮಿಕರು ಸೇರಿ ಸಂಕಷ್ಟಕ್ಕೀಡಾದವರ ನೆರವಿಗಾಗಿ ರಾಜ್ಯಗಳ ಮಧ್ಯೆ ಉಚಿತ ಶ್ರಮಿಕ್ ರೈಲು ಸೇವೆ, ಆರ್ಥಿಕ ನೆರವು ಸೇರಿ ಹಲವು ಕ್ರಮ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಇದೇನಾಗುತ್ತಿದೆ... ಮಮತಾ ಆ ದೊಡ್ಡ ಆಸೆಗೆ ಅಸ್ತು ಎಂದ ಅಮಿತ್ ಶಾ!
ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಹಕಾರದೊಂದಿಗಿನ ಯಶಸ್ವಿ ಕಾರ್ಯದಿಂದಾಗಿ ಇಂದು ದೇಶದಲ್ಲಿ ಸೋಂಕಿತರ ಪ್ರಕರಣಗಳು ನಿಯಂತ್ರಣ ಹಂತದಲ್ಲಿವೆ. ಆದರೆ, ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಕ್ರಮವನ್ನು ಪ್ರತಿಪಕ್ಷಗಳು ಟೀಕಿಸುವುದನ್ನು ಬಿಟ್ಟರೆ ಕೊರೋನಾ ಸಂಕಷ್ಟಕ್ಕೀಡಾದವರಿಗೆ ಅನುಕೂಲವಾಗುವ ಕೆಲಸವೇನಾದರೂ ಮಾಡಿದೆಯೇ ಎಂದು ಕೇಳಿದ್ದಾರೆ. ಈ ಮೂಲಕ ಸರ್ಕಾರದ ನಡೆಗಳನ್ನು ಕಠಿಣವಾಗಿ ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.