Pulwama Attack: ಪುಲ್ವಾಮಾ ದಾಳಿಯ ಕಡೆಯ ಉಗ್ರನೂ ಯೋಧರಿಗೆ ಬಲಿ?

By Kannadaprabha NewsFirst Published Jan 2, 2022, 11:35 AM IST
Highlights

2019ರಲ್ಲಿ 40 ಸಿಆರ್‌ಪಿಎಫ್‌ ಯೋಧರ ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ಕೃತ್ಯದಲ್ಲಿ ಭಾಗಿಯಾಗಿದ್ದ ಜೈಷ್‌-ಎ-ಮೊಹಮ್ಮದ್‌ನ ಮತ್ತೋರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. 

ಶ್ರೀನಗರ (ಜ.2): 2019ರಲ್ಲಿ 40 ಸಿಆರ್‌ಪಿಎಫ್‌ (CRPF) ಯೋಧರ ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ (Pulwama Attack) ಕೃತ್ಯದಲ್ಲಿ ಭಾಗಿಯಾಗಿದ್ದ ಜೈಷ್‌-ಎ-ಮೊಹಮ್ಮದ್‌ನ (Jaish-e-Muhammad) ಮತ್ತೋರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ (Encounter) ಭದ್ರತಾಪಡೆಗಳು ಮೂವರು ಉಗ್ರರನ್ನು ಸಂಹಾರ ಮಾಡಿದ್ದು, ಇದರಲ್ಲಿ ಓರ್ವನ ಚಿತ್ರವು 2019ರಲ್ಲಿ ಪುಲ್ವಾಮಾ ದಾಳಿಯಲ್ಲಿ ಪಾತ್ರ ವಹಿಸಿದ್ದ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಟಾಪ್‌ ಕಮಾಂಡರ್‌ ಸಮೀರ್‌ ದಾರ್‌ (Samir Dar) ಭಾವಚಿತ್ರಕ್ಕೆ ಹೋಲಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವನ ಖಚಿತ ಗುರುತಿಗಾಗಿ ಅವನ ಡಿಎನ್‌ಎ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್‌ (Vijay Kumar) ಅವರು ಶನಿವಾರ ತಿಳಿಸಿದ್ದಾರೆ.

2021ರ ಡಿ.30ರಂದು ಅನಂತ್‌ನಾಗ್‌ ಜಿಲ್ಲೆಯ ನೌಗಾಮ್‌ ದೂರು ಪ್ರದೇಶದಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರರ ಬೇಟೆಯಾಡಿದ್ದ ಭದ್ರತಾ ಪಡೆಗಳು, ಮೂವರು ಉಗ್ರರನ್ನು ಸದೆಬಡಿದಿತ್ತು. ಇದರಲ್ಲಿ ಇಬ್ಬರನ್ನು ಸುಲ್ತಾನ್‌ ಅಲಿಯಾಸ್‌ ರಯೀಸ್‌(ವಿದೇಶಿ ಉಗ್ರ), ನಿಸಾದ್‌ ಅಹ್ಮದ್‌ ಖಾಂಡೆ ಹಾಗೂ ಅಲ್ತಾಫ್‌ ಅಹ್ಮದ್‌ ಶಾ ಎಂದು ಗುರುತಿಸಲಾಗಿದೆ. ಆದರೆ ಇದರಲ್ಲಿ ಒಬ್ಬನ ಮುಖಚರ್ಯೆಯು 2019ರಲ್ಲಿ 40 ಸಿಆರ್‌ಪಿಎಫ್‌ ಯೋಧರ ಬಲಿತೆಗೆದುಕೊಂಡ ಭೀಕರ ಪುಲ್ವಾಮಾ ಕೃತ್ಯದಲ್ಲಿ ಭಾಗವಹಿಸಿದ್ದ ಜೆಇಎಂನ ಟಾಪ್‌ ಕಮಾಂಡರ್‌ ಸಮೀರ್‌ ದಾರ್‌ಗೆ ಹೋಲಿಕೆಯಾಗುತ್ತಿದೆ. ಇದು ಸಮೀರ್‌ ದಾರ್‌ ಎಂದು ಖಚಿತಪಟ್ಟಲ್ಲಿ, ಪುಲ್ವಾಮಾ ಕೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರನ್ನು ಹೊಡೆದುರುಳಿಸಿದಂತಾಗಲಿದೆ.

Srinagar Terror Attack: 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!

ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ:  ಪುಲ್ವಾಮಾ ಭೀಕರ ಉಗ್ರರ ದಾಳಿ ನೋವು ಇನ್ನೂ ಕರಗಿಲ್ಲ. ಭದ್ರತಾ ಪಡೆಗಳ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದಕಾ ದಾಳಿ ಇದಾಗಿತ್ತು. ಇದೀಗ ಈ ದಾಳಿಯನ್ನು ನೆಪಿಸುವ ರೀತಿಯಲ್ಲಿ ಶ್ರೀನಗರದ ಜೆವಾನ್(Zewan Polic camp) ಪೊಲೀಸ್ ಕ್ಯಾಂಪ್ ಬಳಿಯಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಪೊಲೀಸರು ಸಾಗುತ್ತಿದ್ದ ಬಸ್(Police Bus) ಮೇಲೆ ಉಗ್ರರು ದಾಳಿ(Terror attack) ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇನ್ನು 11 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪುಲ್ವಾಮಾ ದಾಳಿ ಸಂಚುಕೋರನ ಹತ್ಯೆ!

ಝೆವಾನ್ ಪೊಲೀಸ್ ಕ್ಯಾಂಪ್‌ನಿಂದ ಹೊರಟ ಪೊಲೀಸ್ ಬಸ್ ಮೇಲೆ ಪಂಥಾ ಚೌಕ್ ಏರಿಯಾ ಬಳಿ ತಲುಪುವಷ್ಟರಲ್ಲೇ ಉಗ್ರರು ಬಸ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ತಮ್ಮಲ್ಲಿರುವ ಆಯುಧ ಕೈಗೆತ್ತಿಕೊಳ್ಳಲು ಅವಕಾಶ ನೀಡಲೇ ಇಲ್ಲ. ಸತತ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್‌ನಲ್ಲಿದ್ದ 14 ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ಇತ್ತ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದಾಳಿ ಕುರಿತು ಕಾಶ್ಮೀರ ಝೋನ್ ಪೊಲೀಸ್ ಮಾಹಿತಿ ಹಂಚಿಕೊಂಡಿಕೊಂಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ಆರತಿಯಲ್ಲಿದ್ದ ಮೋದಿಗೆ ದಾಳಿ ಮಾಹಿತಿ ಸಿಕ್ಕಿದೆ. ಈ ಕುರಿತು ಭದ್ರತಾ ಪಡೆಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

click me!