ಶಬರಿಮಲೆಗೆ ಪ್ರವೇಶ ಯತ್ನ, ಪೊಲೀಸ್ ಕಮಿಷನರ್ ಕಚೇರಿ ಎದುರೇ ಮಹಿಳೆ ಕಣ್ಣಿಗೆ ಪೆಪ್ಪರ್ ಸ್ಪ್ರೇ!

By Web Desk  |  First Published Nov 26, 2019, 12:09 PM IST

ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶ ವಿವಾದ| ದೇಗುಲ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳೆಯ ಮೇಲೆ ಪೆಪ್ಪರ್ ಸ್ಪ್ರೇ ದಾಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ


ಕೊಚ್ಚಿ[ನ.26]: ಶಬರಿಮಲೆ ಮಂದಿರಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳಾ ಕಾರ್ಯಕರ್ತೆಯ ಮೇಲೆ ವ್ಯಕ್ತೊಯೊಬ್ಬ ದಾಳೀ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. 

ಮಹಿಳಾ ಕಾರ್ಯಕರ್ತೆ ಬಿಂದು ಅಮ್ಮಿನಿ ಎಂಬಾಕೆ ಶಬರಿಮಲೆ ಅಯ್ಯಪ್ಪ ಮಂದಿರಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಈ ವೆಳೆ ಪೊಲೀಸ್ ಕಮಿಷನರ್ ಕಚೇರಿ ಎದುರು ಬಿಂದು ಮೇಲೆ ಅನಾಮಿಕ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾರೆ. ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು ಆತ ಪರಾರಿಯಾಗಿದ್ದಾನೆ. 

Tap to resize

Latest Videos

ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಬಿಂದು ತನ್ನ ಮುಖ ಮುಚ್ಚಿ ಓಡಿ ಹೋಗುತ್ತಿರುವುದನ್ನು ನೋಡಬಬಹುದಾಗಿದೆ. ಸದ್ಯ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

Horrific Visuals from

Red chilli spray / pepper spray attack against Bindu Ammini out side the Kochi commissioner office. She was there to seek police protection to visit Shabarimala Temple.

Bindu managed to visit
last year pic.twitter.com/ZYF449TJb9

— Dr. B. Balagopal (@balunair99)

ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಕೂಡಾ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳವಾರದಂದು ಕೇರಳಕ್ಕೆ ಆಗಮಿಸಿದ್ದಾರೆ. ದೇಸಾಯಿ ಹಾಗೂ ಅನ್ಯ ಮಹಿಳಾ ಕಾರ್ಯಕರ್ತರು ಮಂಗಳವಾರದಂದು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿಂದ ಅವರನ್ನು ಕೊಚ್ಚಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಗಿದೆ. ಸಂವಿಧಾನ ದಿನದಂದು ತಾವು ಶಬರಿಮಲೆ ದೇಗುಲದಲ್ಲಿ ಪೂಜೆ ಮಾಡುವುದಾಗಿ ತಿಳಿಸಿದ್ದಾರೆ.

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!