ನಿನ್ನೆ ರಾತ್ರಿ ನಡೆಯಲಿದ್ದ ಸ್ಫೋಟ ಜಸ್ಟ್‌ ಮಿಸ್‌!

Published : Nov 26, 2019, 08:16 AM ISTUpdated : Nov 26, 2019, 05:10 PM IST
ನಿನ್ನೆ ರಾತ್ರಿ ನಡೆಯಲಿದ್ದ ಸ್ಫೋಟ ಜಸ್ಟ್‌ ಮಿಸ್‌!

ಸಾರಾಂಶ

ನಿನ್ನೆ ನಡೆಯಬೇಕಿದ್ದ ದಿಲ್ಲಿ ಸ್ಫೋಟ ಜಸ್ಟ್‌ ಮಿಸ್‌!| ಐಸಿಸ್‌ನಿಂದ ಪ್ರೇರಿತರಾಗಿ ದಾಳಿಗೆ ಸಜ್ಜಾಗಿದ್ದ ಮೂವರು ಯುವಕರ ಬಂಧನ| ನಿನ್ನೆ ರಾತ್ರಿಯೇ ಅಸ್ಸಾಂನಲ್ಲಿ ಸ್ಫೋಟ ಪ್ಲಾನ್‌| ಮೊನ್ನೆಯೇ ಬಂಧನ, ತಪ್ಪಿದ ಅನಾಹುತ| ಅಸ್ಸಾಂನಲ್ಲಿ ದಿಲ್ಲಿ ಪೊಲೀಸ್‌ ಕಾರ್ಯಾಚರಣೆ| 1 ಕೇಜಿ ಸ್ಫೋಟಕ, ಕತ್ತಿ, ಚಾಕು ವಶ

ನವದೆಹಲಿ[ನ.26]: ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌)ನಿಂದ ಪ್ರೇರಿತರಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಅಸ್ಸಾಂನಲ್ಲಿ ಬಾಂಬ್‌ ಸ್ಫೋಟ ನಡೆಸಲು ಸುಧಾರಿತ ಸ್ಫೋಟಕವನ್ನು ಒತೆಯಲ್ಲೇ ಇಟ್ಟುಕೊಂಡು ಸನ್ನದ್ಧರಾಗಿದ್ದ ಮೂವರು ಯುವಕರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ಸೋಮವಾರ ರಾತ್ರಿ ನಡೆಯಬಹುದಾಗಿದ್ದ ಘೋರ ಅನಾಹುತವೊಂದು ತಪ್ಪಿದಂತಾಗಿದೆ.

ಬಂಧಿತ ಮೂವರೂ 20ರ ಪ್ರಾಯದ ಆಸುಪಾಸಿನವರಾಗಿದ್ದಾರೆ. ಈ ಎಲ್ಲರೂ ಅಸ್ಸಾಂನ ಗೋವಲ್‌ಪಾರಾ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಮೇಳದಲ್ಲಿ ಸೋಮವಾರ ರಾತ್ರಿ ಸುಧಾರಿತ ಸ್ಫೋಟಕ ಸಾಧನದ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಈ ದಾಳಿ ಯಶಸ್ವಿಗೊಂಡರೆ, ರಾಷ್ಟ್ರ ರಾಜದಾನಿ ದೆಹಲಿಯ ಹೆಚ್ಚು ಜನನಿಬಿಡ ಪ್ರದೇಶದಲ್ಲೂ ದಾಳಿಗೆ ಸಂಚು ರೂಪಿಸಿದ್ದರು. ದೆಹಲಿ ಪೊಲೀಸರು ಅಸ್ಸಾಂನಲ್ಲಿ ಭಾನುವಾರವೇ ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದಾರೆ. ಒಂದು ಕೆ.ಜಿ. ಸ್ಫೋಟಕ ಸಾಮಗ್ರಿ, ಒಂದು ಕತ್ತಿ, ಒಂದು ಚಾಕು, ಐಸಿಸ್‌ ಕುರಿತಾದ ಉಪಯುಕ್ತ ಮಾಹಿತಿಗಳು, ನಾಲ್ಕು ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಉಗ್ರರ ಕರಿನೆರಳು, PGಯಲ್ಲಿ NIA ತಂಡದಿಂದ ಶೋಧ

ಅಸ್ಸಾಂ ಪೊಲೀಸರ ಜತೆಗೂಡಿ ನಡೆಸಿದ ಜಂಟಿ ಕಾರ್ಯಾಚರಣೆ ಇದಾಗಿದೆ. ಮುಕದೀರ್‌ ಇಸ್ಲಾಮ್‌, ರಂಜಿತ್‌ ಅಲಿ ಹಾಗೂ ಜಮೀಲ್‌ ಲುಯಿತ್‌ ಎಂಬ ಯುವಕರನ್ನು ಬಂಧಿಸಲಾಗಿದೆ. ಇವರೆಲ್ಲಾ ಸಹಪಾಠಿಗಳಾಗಿದ್ದು, ದೆಹಲಿಯಲ್ಲೂ ಕೆಲವು ವ್ಯಕ್ತಿಗಳನ್ನು ಮೂಲಭೂತವಾದಿಗಳನ್ನಾಗಿಸಿದ್ದಾರೆ ಎಂದು ದೆಹಲಿ ಪೊಲೀಸ್‌ ಉಪ ಆಯುಕ್ತ (ವಿಶೇಷ ಘಟಕ) ಪ್ರಮೋದ್‌ ಸಿಂಗ್‌ ಕುಶ್ವಾಹಾ ತಿಳಿಸಿದ್ದಾರೆ. ದೆಹಲಿ ಸ್ಫೋಟಕ್ಕಾಗಿ ಈ ಮೂವರು ಆರೋಪಿಗಳು ದೆಹಲಿಗೆ ಭೇಟಿ ನೀಡಿದ್ದರೇ ಎಂಬುದರ ಆಯಾಮದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರು ಭಾರತೀಯರಿಗೆ ಉಗ್ರ ಪಟ್ಟ ಕಟ್ಟಲು ಪಾಕಿಸ್ತಾನ ಯತ್ನ!

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!