ನವದೆಹಲಿ(ಡಿ.24): ಭಾರತದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದಲ್ಲಿ 358 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಕೆಲ ಮಹತ್ವದ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಾಗುತ್ತಿದೆ. ಇದೀಗ ಗುಜರಾತ್ ಸರದಿ. ಗುಜರಾತ್‌ನ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿಮಾಡಲಾಗಿದೆ.
ಡಿಸೆಂಬರ್ 25 ರಿಂದ ಗುಜರಾತ್‌ನ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಅಹಮ್ಮದಾಬಾದ್, ವಡೋದರ, ಸೂರತ್, ರಾಜ್‌ಕೋಟ್, ಭಾವ್‌ನಗರ್, ಜಾಮ್ನಗರ್, ಗಾಂಧಿನಗರ ಹಾಗೂ ಜುನಾಘಡದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
Omicron Variant: ರಾಜ್ಯದಲ್ಲಿ ಸೋಂಕು ಸ್ಫೋಟ, ಫೆಬ್ರವರಿಯಲ್ಲಿ 3 ನೇ ಖಚಿತ, ಎಚ್ಚರ ವಹಿಸಿ ಎಂದ ಮೋದಿ
ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ
ಗುಜರಾತ್‌ಗೂ ಮೊದಲು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಒಮಿಕ್ರಾನ್ ಆತಂ ಹೆಚ್ಚಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ಡಿಸೆಂಬರ್ 23 ರಿಂದಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ11 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಒಮಿಕ್ರಾನ್ ಕೇಸ್ ಪತ್ತೆಯಾಗಿಲ್ಲ. ಆದರೂ ಮುನ್ನಚ್ಚೆರಿಕೆಯಾಗಿ ನೈಟ್ ಕರ್ಫ್ಯೂ ಜಾರಿಮಾಡಿದೆ. ಇಂಧೋರ್ ಹಾಗೂ ಬೋಪಾಲ್‌ನಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಈಗಿನಿಂದಲೇ ಅತೀವ ಎಚ್ಚರಿಕೆ ಅತಿ ಅಗತ್ಯ. ನೈಟ್ ಕರ್ಫ್ಯೂ ಹೊರತು ಪಡಿಸಿ ಕೊರೋನಾ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
Omicron Panic: ಶಾಲೆಗಳನ್ನು ಮತ್ತೆ ಮುಚ್ಚಲು ಪೋಷಕರ ಒತ್ತಾಯ?
ಉತ್ತರ ಪ್ರದೇಶದಲ್ಲಿ ನೈಟ್ ಕರ್ಫ್ಯೂ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ನೈಟ್ ಕರ್ಫ್ಯೂ ಜಾರಿಮಾಡಿದೆ. ಡಿಸೆಂಬರ್ 25 ರಿಂದ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಲು ಸೂಚಿಸಲಾಗಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವಿಕೆ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಪಾಲಿಸಲು ಸೂಚಿಸಲಾಗಿದೆ.
ದೆಹಲಿಯಲ್ಲಿ ಕ್ರಿಸ್ಮಸ್ ಆಚರಣೆಗೆ ಬ್ರೇಕ್
ದೆಹಲಿಯಲ್ಲಿ ಇದುವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿಲ್ಲ. ಆದರೆ ಕ್ರಿಸ್ಮಸ್ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಇದರ ಜೊತೆಗೆ ಹೊಸ ವರ್ಷಾಚರಣೆಗೂ ಬ್ರೇಕ್ ಹಾಕಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 50 ರಷ್ಟು ಅವಕಾಶ ಮಾತ್ರ. ದೆಹಲಿಯಲ್ಲಿ 180 ಹೊಸ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಇದರ ಜೊತೆ 64 ಓಮಿಕ್ರಾನ್ ಕೇಸ್ ದಾಖಲಾಗಿದೆ.
Delmicron Variant: ಪಾಶ್ಚಿಮಾತ್ಯ ದೇಶಗಳಲ್ಲಿ ಹೊಸ ರೂಪಾಂತರಿ: ಕೋವಿಡ್ ಹೆಚ್ಚಳಕ್ಕೆ ಡೆಲ್ಮಿಕ್ರೋನ್ ಕಾರಣ!
ಕರ್ನಾಟಕದಲ್ಲೂ ಹೆಚ್ಚಿದ ಆತಂಕ:
ಡಿಸೆಂಬರ್ 23ಕ್ಕೆ ಕರ್ನಾಟಕದಲ್ಲಿ 31 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಅದಲ್ಲೂ ಇತ್ತೀಚೆಗೆ ಹೊಸದಾಗಿ 12 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಹೀಗೆ ಪತ್ತೆಯಾದ 12 ಪ್ರಕರಣಗಳಲ್ಲಿ 5 ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ. ಇದರಿಂದ ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಇದುವರೆಗೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಇದುವರೆಗೆ ನೈಟ್ ಕರ್ಫ್ಯೂ ಸೇರಿದಂತೆ ಇತರೆ ಯಾವುದೇ ನಿರ್ಬಂಧಗಳು ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಆದರೆ ಓಮಿಕ್ರಾನ್ ಪ್ರಕರಣ ಹಾಗೂ ಕೊರೋನಾ ಪ್ರಕರಣ ಇದೇ ರೀತಿ ಹೆಚ್ಚಾದರೆ ಒಂದೊಂದೆ ನಿರ್ಬಂಧಗಳು ಜಾರಿಯಾಗುವುದರಲ್ಲಿ ಅನುಮಾನವಿಲ್ಲ.