ನೀರಿನಲ್ಲಿ ಮುಳುಗುತ್ತಿದ್ದವನನ್ನು ಕಾಪಾಡಿದ ಆನೆ, ಮಾನವ ಇದಕ್ಕೆ ಅರ್ಹನೇ?

By Suvarna NewsFirst Published Jun 4, 2020, 3:28 PM IST
Highlights

ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿದ ದುರುಳರು| ನರಳುತ್ತಾ ಪ್ರಾಣ ಬಿಟ್ಟ ಆನೆ| ಘಟನೆ ಬೆನ್ನಲ್ಲೇ ವ್ಯಕ್ತಿಯನ್ನು ಕಾಪಾಡಿದ ವ್ಯಕ್ತಿಯ ವಿಡಿಯೋ ವೈರಲ್

ಬೆಂಗಳೂರು(ಜೂ.04): ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸು ತಿಂದು ಸಾವನ್ನಪ್ಪಿತ್ತು. ನದಿಯಲ್ಲಿ ನಿಂತು ನರಳಾಡುತ್ತಾ ಅದು ಪ್ರಾಣ ಬಿಟ್ಟಿತ್ತು. ಈ ಘಟನೆ ಅನೇಕರ ನಿದ್ದೆಗೆಡಿಸಿತ್ತು. ಅಲ್ಲದೇ ಈ ಹಣ್ಣು ತಿನ್ನಿಸಿದವರನ್ನು ಹುಡುಕಿ ಕಠಿಣ ಶಿಕ್ಷೆ ವಿಧಿಸುವ ಒತ್ತಾಯವೂ ಕೇಳಿ ಬಂದಿದೆ. ಗಣ್ಯರಿಂದ ಜನ ಸಾಮಾನ್ಯರವರೆಗೆ ಎಲ್ಲರನ್ನೂ ಆ ತಾಯಾನೆ ನೋವು ಕಂಗೆಡಿಸಿತ್ತು. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಆನೆಯ ಹಳೆ ವಿಡಿಯೋ ಒಂದು ಭಾರೀ ವೈರಲ್ ಆಗಿದೆ.

ಕೇರಳದಲ್ಲಿ ನಡೆದ ಅಮಾನವೀಯ ಘಟನೆ ಬಳಿಕ ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ಮೂಲಕ ಆನೆ ಮಾನವರನ್ನು ಅತಿ ಹೆಚ್ಚು ಪ್ರೀತಿಸುತ್ತದೆ. ಆದರೆ ನಾವು ಮಾನವರು ಅದರ ಪ್ರೀತಿ ಪಡೆಯಲು ಅರ್ಹರಲ್ಲ ಎಂಬ ಸಂದೇಶದೊಂದಿಗೆ ಈ ವಿಡಿಯೋ ಶೇರ್ ಮಾಡಲಾಗುತ್ತಿದೆ.

This baby elephant thought he was drowning and rushed to save him ❤️

We really don't deserve them. 😭 pic.twitter.com/gqgIaNR8tR

— Nature & Animals 🌴 (@AnimalsWorId)

ಹೌದು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೋಡಿದ ಆನೆ ನೀರಿಗಿಳಿದು ಆತನನ್ನು ಕಾಪಾಡುವ ವಿಡಿಯೋ ಇದು. ಪ್ರಾಣ ರಕ್ಷಿಸಿದ ಆನೆಗೆ ಆ ವ್ಯಕ್ತಿ ಧನ್ಯವಾದ ತಿಳಿಸುವ ಧ್ವನಿಯೂ ಈ ವಿಡಿಯೋದಲ್ಲಿ ಕೇಳಿ ಬಂದಿದೆ.

ನೇಚರ್ ಆಂಡ್ ಎನಿಮಲ್ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಕ್ಯಾಪ್ಶನ್‌ನಲ್ಲಿ ಮರಿಯಾನೆ ಮನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಕಾಪಾಡಲು ನೀರಿಗಿಳಿದಿದೆ. ಆದರೆ ವಾಸ್ತವವಾಗಿ ನಾವು ಅದರ ಪ್ರೀತಿಗೆ ಅರ್ಹರಲ್ಲ ಎಂದಿದ್ದಾರೆ.

click me!