ಹಳೇ ಪಿಂಚಣಿ ವ್ಯವಸ್ಥೆ ಮರಳದಿದ್ದರೆ ಮೇ. 1 ರಿಂದ ದೇಶದ ಎಲ್ಲಾ ರೈಲುಗಳು ಬಂದ್‌, ರೈಲ್ವೆ ಯೂನಿಯನ್‌ ಎಚ್ಚರಿಕೆ!

By Santosh NaikFirst Published Mar 1, 2024, 4:17 PM IST
Highlights

ಜೆಎಫ್‌ಆರ್‌ಒಪಿಎಸ್‌ನ ಭಾಗವಾಗಿರುವ ಇತರ ಸರ್ಕಾರಿ ನೌಕರರ ಹಲವಾರು ಒಕ್ಕೂಟಗಳು ಸಹ ರೈಲ್ವೆ ಕಾರ್ಮಿಕರೊಂದಿಗೆ ಮುಷ್ಕರ ನಡೆಸಲಿವೆ.

ನವದೆಹಲಿ (ಮಾ.1):  ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆ (ಜೆಎಫ್‌ಆರ್‌ಒಪಿಎಸ್) ಅಡಿಯಲ್ಲಿ ಒಂದಾಗಿರುವ ರೈಲ್ವೆ ನೌಕರರು ಮತ್ತು ಕಾರ್ಮಿಕರ ಹಲವಾರು ಒಕ್ಕೂಟಗಳು, ಹಳೆಯ ಪಿಂಚಣಿಯನ್ನು ಯೋಜನೆಯನ್ನು ಮರಳಿ ಜಾರಿಗೆ ತರದೇ ಇದ್ದಲ್ಲಿ ಮೇ 1 ರಿಂದ ದೇಶಾದ್ಯಂತ ಎಲ್ಲಾ ರೈಲು ಸೇವೆಗಳನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿವೆ. "ಹೊಸ ಪಿಂಚಣಿ ಯೋಜನೆ' ಬದಲಿಗೆ 'ವ್ಯಾಖ್ಯಾನಿತ ಖಾತರಿ ಹಳೆಯ ಪಿಂಚಣಿ ಯೋಜನೆಯನ್ನು' ಮರುಸ್ಥಾಪಿಸುವ ನಮ್ಮ ಬೇಡಿಕೆಗೆ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿಲ್ಲ.  ಈಗ ಪ್ರತಿಭಟನೆ ಮಾಡುವುದರ ಹೊರತಾಗಿ ನಮಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಜೆಎಫ್‌ಆರ್‌ಓಪಿಎಸ್‌ (JFROPS) ಸಂಚಾಲಕ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ.

ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಿಶ್ರಾ, “ಜೆಎಫ್‌ಆರ್‌ಒಪಿಎಸ್ ಅಡಿಯಲ್ಲಿ ವಿವಿಧ ಫೆಡರೇಶನ್‌ಗಳ ಪ್ರತಿನಿಧಿಗಳು ಜಂಟಿಯಾಗಿ ನಾವು ಮಾರ್ಚ್ 19 ರಂದು ರೈಲ್ವೇ ಸಚಿವಾಲಯಕ್ಕೆ ಅಧಿಕೃತವಾಗಿ ನೋಟಿಸ್ ನೀಡುವುದಾಗಿ ಒಪ್ಪಿಕೊಂಡಿದ್ದೇವೆ,. ಉದ್ದೇಶಿತ ದೇಶವ್ಯಾಪಿ ಮುಷ್ಕರದ ಬಗ್ಗೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ದಿನವಾದ ಮೇ 1 ರಂದು ಎಲ್ಲಾ ರೈಲು ಸೇವೆಗಳು ವ್ಯತ್ಯಯವಾಗಲಿದೆ ಎಂದು ತಿಳಿಸಲಿದ್ದೇವೆ' ಎಂದಿದ್ದಾರೆ. ಮಿಶ್ರಾ ಅವರ ಪ್ರಕಾರ, ಜೆಎಫ್‌ಆರ್‌ಒಪಿಎಸ್‌ನ ಭಾಗವಾಗಿರುವ ಇತರ ಸರ್ಕಾರಿ ನೌಕರರ ಹಲವಾರು ಒಕ್ಕೂಟಗಳು ಸಹ ರೈಲ್ವೆ ಕಾರ್ಮಿಕರೊಂದಿಗೆ ಮುಷ್ಕರ ನಡೆಸಲಿವೆ.

ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲಾ ಸೇವೆ ನೀಡುವ ಸೂಪರ್‌ App ಸಿದ್ಧ ಮಾಡ್ತಿದೆ ಭಾರತೀಯ ರೈಲ್ವೇಸ್‌!

JFROPS ಹೊರಡಿಸಿದ ಪತ್ರಿಕಾ ಟಿಪ್ಪಣಿಯಲ್ಲಿ, "ಎಲ್ಲಾ ಘಟಕ ಸಂಸ್ಥೆಗಳು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಮುಷ್ಕರದ ಸೂಚನೆಯನ್ನು ತಮ್ಮ ಆಡಳಿತಗಳಿಗೆ ಸೂಕ್ತವಾದ ರೀತಿಯಲ್ಲಿ ತಿಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲು ವಿನಂತಿಸಲಾಗಿದೆ."  ಓಪಿಎಸ್‌ ಕಾರ್ಮಿಕರ ಹಿತಾಸಕ್ತಿಯಲ್ಲಿದ್ದರೂ, ಹೊಸ ಪಿಂಚಣಿ ಯೋಜನೆಯು ಅವರ ಉದ್ಯೋಗಿಗಳ ಕಲ್ಯಾಣವನ್ನು ಕಾಳಜಿ ವಹಿಸುವುದಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.

ಒಲಾ ಜೊತೆ ಐಆರ್‌ಸಿಟಿಸಿ ಒಪ್ಪಂದ, ರೈಲ್ವೇಸ್‌ ಆ್ಯಪ್‌ನಿಂದಲೇ ಪ್ರಯಾಣಿಕರು ಕ್ಯಾಬ್‌ ಬುಕ್‌ ಮಾಡ್ಬಹುದು!

click me!