
ನವದೆಹಲಿ[ಫೆ.07]: ದೆಹಲಿ ವಿಧಾನಸಭಾ ಚುನಾವಣಾ ಭರಾಟೆಯ ನಡುವೆಯೇ ಬಹುದೊಡ್ಡ ಕಾರ್ಯಾಚರಣೆ ನಡೆಸಿದ CBI, 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿರುವ ಆರೋಪದಡಿ ಅಧಿಕಾರಿಯೊಬ್ಬರನ್ನು ಬಂಧಿಸಿದೆ. ಈ ಅಧಿಕಾರಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾರ OSD ಎನ್ನಲಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ CBI ಅಧಿಕಾರಿಗಳು ಗೋಪಾಲ ಕೃಷ್ಣ ಮಾಧವ್ ಹೆಸರಿನ ಅಧಿಕಾರಿಯನ್ನು ತಡರಾತ್ರಿ GST ಸಂಬಂಧಿತ ಪ್ರಕರಣದಲ್ಲಿ, 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಗೋಪಾಲ್ ರನ್ನು ವಿಚಾರಣೆಗೆಂದು CBI ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಮನೀಷ್ ಸಿಸೋಡಿಯಾರ ಯಾವುದೇ ಪಾತ್ರವಿಲ್ಲ ಎಂಬುವುದು ವರದಿಗಳಿಂದ ಬಯಲಾಗಿದೆ.
ಮನೋಜ್ ತಿವಾರಿ ಬಳಕುವ ಸೊಂಟ ಇಷ್ಟ: ಕೇಜ್ರಿವಾಲ್ ವ್ಯಂಗ್ಯ!
ಇನ್ನು ಗೋಪಾಲ ಕೃಷ್ಣ ಮಾಧವ್ 2015ರಿಂದ ಸಿಸೋಡಿಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. CBI ಮೂಲಗಳಿಂದ ಈ ಸಂಬಂಧ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಶನಿವಾರ, ಫೆಬ್ರವರಿ 8 ರಂದು ನಡೆಯಲಿದೆ ಚುನಾವಣೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ, ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕ್ಷಣಗಣಗನೆ ಆರಂಭವಾದಾಗಲೇ ನಡೆದಿರುವ ಈ ಪ್ರಕರಣ ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುವದರಲ್ಲಿ ಅನುಮಾನವಿಲ್ಲ. ಈ ಚುನಾವಣೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, 40 ಸಾವಿರ ಜವಾನರನ್ನು ಭದ್ರತೆಗೆ ನೇಮಿಸಲಾಗಿದೆ.
ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ