ರಾಹುಲ್ ಗಾಂಧಿ ‘ಟ್ಯೂಬ್‌ಲೈಟ್’|ಲೋಕಸಭೆಯಲ್ಲಿ ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದ ಮೋದಿ
ನವದೆಹಲಿ[ಫೆ.07]: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ‘ಟ್ಯೂಬ್‌ಲೈಟ್’ಗೆ ಹೋಲಿಸುವ ಮೂಲಕ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಧಾನಮಂತ್ರಿಗಳು ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವಾಗ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಹೀಗೆಯೇ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡುತ್ತಲೇ ಇದ್ದರು. ಆಗ ಅರ್ಧ ಗಂಟೆ ಬಳಿಕ ರಾಹುಲ್ ಗಾಂಧಿ ಅವರು ನಿರುದ್ಯೋಗದ ಬಗ್ಗೆ ಮೋದಿ ಅವರನ್ನು ಪ್ರಶ್ನೆ ಮಾಡಿದರು.
NPR ಕುರಿತ ‘ಸತ್ಯ’ ಬಿಚ್ಚಿಟ್ಟ ಮೋದಿ: ಬೆಚ್ಚಿ ಬಿದ್ದ ಸದನ!
Loved the style of Modi Ji. kaun hai ??? pic.twitter.com/GNAEMsMSwI
— Ashish Kohli 🇮🇳 (@dograjournalist)ಇದಕ್ಕೆ ಉತ್ತರಿಸಿದ ಮೋದಿ, ‘ನಾನು 30-40 ನಿಮಿಷದಿಂದ ಮಾತನಾಡುತ್ತಿದ್ದೇನೆ. ನನ್ನ ಮಾತುಗಳು ಇನ್ನೊಂದು ಕಡೆ ತಲುಪಲು ಇಷ್ಟೊಂದು ಸಮಯ ಬೇಕಾಯಿತು. ಹಲವು ಟ್ಯೂಬ್‌ಲೈಟ್‌ಗಳು ಹೀಗೆಯೇ ಇರುತ್ತವೆ’ ಎಂದು ರಾಹುಲ್ ಹೆಸರೆತ್ತದೇ ಟಾಂಗ್ ನೀಡಿದರು. ಆಗ ಬಿಜೆಪಿ ಸದಸ್ಯರು ನಗೆಗಡಲಲ್ಲಿ ತೇಲಿದರು.
1947ರಲ್ಲಿ ಕಾಂಗ್ರೆಸ್ ಮತಾಂಧವಾಗಿತ್ತು, ಈಗ ಸೆಕ್ಯುಲರ್ ಆಗಿದೆ: ಮೋದಿ!
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ