* ಲಸಿಕೆಯೊಂದೇ ಸಾಲದು, ಕೋವಿಡ್ ನಿಯಮ ಪಾಲಿಸಿ
* ಜನರಿಗೆ ಕೇಂದ್ರ ಸರ್ಕಾರದ ಮನವಿ
* ಒಮಿಕ್ರೋನ್ ಸೋಂಕಿತರಲ್ಲಿ ಶೇ.91 ಜನ ಲಸಿಕೆ ಪಡೆದವರು!
ನವದೆಹಲಿ(ಡಿ.26): ಇಡೀ ಜಗತ್ತು ನಾಲ್ಕನೇ ಅಲೆಯ ಕೋವಿಡ್ ಸೋಂಕಿಗೆ ಸಾಕ್ಷಿಯಾಗುತ್ತಿದೆ. ಭಾರತದಲ್ಲಿ ಈವರೆಗೆ 358 ಒಮಿಕ್ರೋನ್ ರೂಪಾಂತರಿ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 183 ಪ್ರಕರಣಗಳ ವಿಶ್ಲೇಷಣೆ ನಡೆಸಲಾಗಿದೆ. ಈ ಪೈಕಿ ಶೇ.91 ಜನರು ಪೂರ್ತಿ ಲಸಿಕೆ ಪಡೆದವರು. ಹೀಗಾಗಿ ಸೋಂಕು ತಡೆಗೆ ಲಸಿಕೆಯೊಂದೇ ಮಾರ್ಗವಲ್ಲ. ಮಾಸ್ಕ್ ಧಾರಣೆ ಹಾಘೂ ಇತರ ಕೋವಿಡ್ ಸನ್ನಡತೆಗಳನ್ನು ಕಟ್ಟುನಿಟ್ಟಾಗಿ ಜನರು ಪಾಲಿಸಲೇಬೇಕು ಎಂದು ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಸಿದೆ.
ವಿಶ್ಲೇಷಣೆಗೆ ಒಳಪಟ್ಟ183 ಒಮಿಕ್ರೋನ್ ಸೋಂಕಿತರ ಪæೖಕಿ 73 ಜನರ ವಿಶ್ಲೇಷಣಾ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇನ್ನು 16 ಮಂದಿ ಲಸಿಕೆಗೆ ಅರ್ಹರಾಗಿಲ್ಲ. ಹೀಗಾಗಿ ಉಳಿದ 94 ಜನರಲ್ಲಿ 87 ಜನರು ಪೂರ್ತಿ ಎರಡೂ ಡೋಸ್ ಲಸಿಕೆ ಪಡೆದವರು (ಶೇ.91). 3 ಜನರು ಬೂಸ್ಟರ್ ಡೋಸ್ ಪಡೆದವರು ಹಾಗೂ ಇನ್ನುಳಿದ 4 ಜನರು ಸಿಂಗಲ್ ಡೋಸ್ ಲಸಿಕೆ ಪಡೆದವರು ಎಂದು ಕೇಂದ್ರ ಹೇಳಿದೆ.
ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ‘ವಿಶ್ವ 4ನೇ ಅಲೆಗೆ ಸಾಕ್ಷಿ ಆಗುತ್ತಿದೆ. ಹೊಸವರ್ಷ, ಕ್ರಿಸ್‌ಮಸ್ ಮುಂತಾದ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ತೀವ್ರ ನಿಗಾ ವಹಿಸಬೇಕು. ನಿರ್ಲಕ್ಷ್ಯಸಲ್ಲದು. ಹಾಗೆಯೇ ಅನಗತ್ಯ ಪ್ರವಾಸ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಮಿಕ್ರೋನ್ 3 ದಿನಕ್ಕೆ ದ್ವಿಗುಣ:
ಭಾರತದಲ್ಲಿ ಈಗಲೂ ಡೆಲ್ಟಾರೂಪಾಂತರಿಯೇ ಪ್ರಧಾನ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಒಮಿಕ್ರೋನ್ ಡೆಲ್ಟಾಜೊತೆ ಜೊತೆಗೇ ವೇಗ ವಾಗಿ ಸಮುದಾಯದಲ್ಲಿ ಹರಡುತ್ತಿದೆ. ಒಂದೂವರೆ ದಿನದಿಂದ ಮೂರು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ವಿಶ್ವವೇ ನಾಲ್ಕನೇ ಅಲೆಯ ಕೋವಿಡ್ ಸೋಂಕಿಗೆ ಸಾಕ್ಷಿಯಾಗುತ್ತಿದೆ. ಒಟ್ಟಾರೆ ಪಾಸಿಟಿವಿಟಿ ದರ ಶೇ.6.1ರಷ್ಟಿದೆ. ಹಾಗಾಗಿ ಮುಂಜಾಗ್ರತೆ ಕೈಗೊಳ್ಳಬೇಕು ಎಂದಿದ್ದಾರೆ.
ಒಮಿಕ್ರೋನ್ ಪೀಡಿತ 358 ಜನರ ಈ ಪೈಕಿ 183 ಪ್ರಕರಣಗಳ ವಿಶ್ಲೇಷಣೆ ನಡೆಸಲಾಗಿದೆ. ಅದರಲ್ಲಿ 121 ಮಂದಿ ವಿದೇಶಿ ಪ್ರವಾಸ ಇತಿಹಾಸ ಹೊಂದಿದ್ದಾರೆ. 44 ಪ್ರಕರಣ ಗಳಲ್ಲಿ ವಿದೇಶಿ ಸೋಂಕಿತರ ಸಂಪರ್ಕ ಹೊಂದಿದ್ದರು. 18 ಸೋಂಕಿತರ ಕುರಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಕೇರಳ, ಮಿಜೋರಂಗೆ ಎಚ್ಚರಿಕೆ:
ಕೇರಳ ಮತ್ತು ಮಿಜೋರಂಗಳÜಲ್ಲಿ ಪಾಸಿಟಿವಿಟಿ ದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. 20 ಜಿಲ್ಲೆಗಳಲ್ಲಿ ವಾರದ ಪಾಸಿಟಿ ವಿಟಿ ದರ ಶೇ.5-10ರಷ್ಟಿದೆ. 2 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಕರ್ನಾಟಕ, ಮಹಾರಾಷ್ಟ್ರ, ಬಂಗಾಳದದಲ್ಲೂ ಹೆಚ್ಚು ಕೇಸು ದಾಖಲಾಗತೊಡಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.