ಲಸಿಕೆ ಪಡೆಯದಿದ್ರೆ ಸಂಬಳ ಇಲ್ಲ: ಒಡಿಶಾ ಆರೋಗ್ಯ ಕಾರ‍್ಯಕರ್ತರಿಗೆ ವಾರ್ನಿಂಗ್‌!

Published : Feb 07, 2021, 11:14 AM IST
ಲಸಿಕೆ ಪಡೆಯದಿದ್ರೆ ಸಂಬಳ ಇಲ್ಲ: ಒಡಿಶಾ ಆರೋಗ್ಯ ಕಾರ‍್ಯಕರ್ತರಿಗೆ ವಾರ್ನಿಂಗ್‌!

ಸಾರಾಂಶ

 ಫೆ.10ರ ಒಳಗಾಗಿ ಲಸಿಕೆ ಪಡೆಯದ ಆರೋಗ್ಯ ಸಿಬ್ಬಂದಿ ಮತ್ತು ಅಂಗನವಾಡಿ ಕಾರ‍್ಯಕರ್ತೆಯರ ಸಂಬಳವನ್ನು ತಡೆಹಿಡಿಯಲಾಗುವುದು| ಲಸಿಕೆ ಪಡೆಯದಿದ್ರೆ ಸಂಬಳ ಇಲ್ಲ: ಒಡಿಶಾ ಆರೋಗ್ಯ ಕಾರ‍್ಯಕರ್ತರಿಗೆ ವಾರ್ನಿಂಗ್‌!

ಭುವನೇಶ್ವರ(ಫೆ.07): ಫೆ.10ರ ಒಳಗಾಗಿ ಲಸಿಕೆ ಪಡೆಯದ ಆರೋಗ್ಯ ಸಿಬ್ಬಂದಿ ಮತ್ತು ಅಂಗನವಾಡಿ ಕಾರ‍್ಯಕರ್ತೆಯರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಒಡಿಶಾದ ಕಟಕ್‌ ಜಿಲ್ಲಾಡಳಿತ ಶುಕ್ರವಾರ ಎಚ್ಚರಿಕೆ ನೀಡಿದೆ.

ಲಸಿಕೆ ವಿತರಣೆಯ ಗುರಿ ತಲುಪುವ ಉದ್ದೇಶದಿಂದ ವೇತನ ತಡೆಹಿಡಿಯುವ ಆದೇಶ ನೀಡಿರುವ ಜಿಲ್ಲಾಧಿಕಾರಿ ಭಾಬಣಿ ಶಂಕರ್‌, ಈ ಸಂಬಂಧ ಎಸ್‌ಸಿಬಿ ಮೆಡಿಕಲ್‌ ಕಾಲೇಜು ಪ್ರಾಂಶುಪಾಲರು, ಪಾಲಿಕೆಯ ಕಮಿಷನರ್‌, ಜಿಲ್ಲಾ ಸಾರ್ವಜನಿಕ ಆರೋಗ್ಯ ಅಧಿಕಾರಿ ಮತ್ತು ಸಾಮಾಜಿಕ ಕಲ್ಯಾಣ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

‘ಶೇಕಡಾವಾರು ಲಸಿಕೆ ವಿತರಣೆಯಲ್ಲಿ ಕಟಕ್‌ ರಾಜ್ಯದಲ್ಲಿಯೇ ಕಳಪೆ ಸ್ಥಾನ ಪಡೆದ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ತೀವ್ರ ಮುಜುಗರವನ್ನುಂಟು ಮಾಡಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕಟಕ್‌ ಜಿಲ್ಲಾಡಳಿತದ ಈ ಸೂಚನೆ ಸದ್ಯ ವಿವಾದಕ್ಕೊಳಗಾಗಿದೆ.

ಕಟಕ್‌ನಲ್ಲಿ ಒಟ್ಟು 29,624 ಆರೋಗ್ಯ ಕಾರ‍್ಯಕರ್ತರು ಲಸಿಕೆ ಪಡೆಯಲು ನೋಂದಾಯಿಸಿದ್ದರು. ಈ ಪೈಕಿ ಕೇವಲ 15,965 ಮಂದಿ ಈವರೆಗೆ ಲಸಿಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ