ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಲವರ್ಧನೆ| ಸಣ್ಣ 5 ಉಗ್ರರ ಗುಂಪುಗಳನ್ನು ಒಂದೂಡಿಸಿದ ತಾಲಿಬಾನ್| ಅಲ್ ಖೈದಾ ಮೇಲುಸ್ತುವಾರಿಯಲ್ಲಿ ತಾಲಿಬಾನಿಗಳ ಕೆಲಸ| ಇದರ ಫಲವಾಗಿ 3 ತಿಂಗಳಲ್ಲಿ 300 ಭಯೋತ್ಪಾದಕ ದಾಳಿ
ವಿಶ್ವಸಂಸ್ಥೆ(ಫೆ.07): ಆಫ್ಘಾನಿಸ್ತಾನದಲ್ಲಿ ಈ ಹಿಂದೆ ಆಳ್ವಿಕೆ ನಡೆಸಿ ಪತನಗೊಂಡಿದ್ದ ತಾಲಿಬಾನ್ ಈಗ ಮತ್ತೆ ಬಲವರ್ಧಿಸಿಕೊಳ್ಳತೊಡಗಿದೆ ಎಂಬ ಆತಂಕಕಾರಿ ವಿಚಾರವನ್ನು ವಿಶ್ವಸಂಸ್ಥೆಯ ವರದಿಯೊಂದು ಬಹಿರಂಗಪಡಿಸಿದೆ.
ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಆಷ್ಘಾನಿಸ್ತಾನದಲ್ಲಿದ್ದ ಸಣ್ಣಸಣ್ಣ ಉಗ್ರರ ಗುಂಪುಗಳನ್ನು ಒಂದುಗೂಡಿಸತೊಡಗಿದೆ. ಇದರ ಫಲವಾಗಿ, ಕಳೆದ 3 ತಿಂಗಳಲ್ಲಿ ಈ ಸಂಘಟನೆ ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಸುಮಾರು 100 ಭಯೋತ್ಪಾದಕ ಕೃತ್ಯ ಎಸಗಿದೆ ಎಂದು ವಿಶ್ವಸಂಸ್ಥೆಯ ದಿಗ್ಬಂಧನ ಮೇಲುಸ್ತುವಾರಿ ತಂಡದ 27ನೇ ವರದಿ ತಿಳಿಸಿದೆ.
ತಾಲಿಬಾನ್ ಸಂಘಟನೆಯ ಚಟುವಟಿಕೆಯ ಮೇಲುಸ್ತುವಾರಿಯನ್ನು ಅಲ್ ಖೈದಾ ಸಂಘಟನೆ ವಹಿಸಿಕೊಂಡಿದೆ. ಈ ಮೇಲುಸ್ತುವಾರಿಯಲ್ಲಿ ತಾಲಿಬಾನಿಗಳಿಗೆ ಶೆಹರಾರಯರ್ ಮಸೂದ್ ಗುಂಪು, ಜಮಾತ್-ಉಲ್-ಅಹ್ರಾರ್, ಹಿಜ್‌್ಬ-ಉಲ್ ಅಹ್ರಾರ್, ಅಮ್ಜದ್ ಫಾರೂಖಿ ಗುಂಪು ಹಾಗೂ ಉಸ್ಮಾನ್ ಸಯೀಫುಲ್ಲಾ ಗುಂಪು (ಹಿಂದಿನ ಲಷ್ಕರ್ ಎ ಝಂಗ್ವಿ) ಕಳೆದ ಜುಲೈನಲ್ಲೇ ನಿಷ್ಠೆ ವ್ಯಕ್ತಪಡಿಸಿವೆ. ಈ ಮೂಲಕ ಈ ಐದೂ ಗುಂಪುಗಳು ತಾಲಿಬಾನ್ ಜತೆ ಮೈತ್ರಿ ಮಾಡಿಕೊಂಡಿವೆ ಎಂದು ವರದಿ ವಿವರಿಸಿದೆ.