
ಕೊಚ್ಚಿ (ಅ.11): ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾಗಿ ಪಾಕಿಸ್ತಾನದ ಧ್ವಜವನ್ನು ಹಾಕಲಾಗಿದೆ ಎನ್ನುವ ವಿಚಾರದಲ್ಲಿ ಸ್ವತಃ ಲುಲು ಮಾಲ್ ಸ್ಪಷ್ಟ ನೀಡಿದೆ. ಲುಲು ಮಾಲ್‌ನಲ್ಲಿ ಕ್ರಿಕೆಟ್ ವಿಶ್ವಕಪ್‌ನ ಅಂಗವಾಗಿ ನೇತುಹಾಕಲಾಗಿರುವ ಧ್ವಜಗಳಿಗೆ ಸಂಬಂಧಿಸಿದ ವೈರಲ್ ಚಿತ್ರಗಳು ನಕಲಿ ಎಂದು ಲುಲು ಗ್ರೂಪ್ ಹೇಳಿದೆ. ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಕೊಚ್ಚಿ ಲುಲು ಮಾಲ್ ನಲ್ಲಿ ಕ್ರಿಕೆಟ್ ಪಂದ್ಯದ ಆರಂಭದ ದಿನವೇ ಆಯಾ ದೇಶಗಳ ಧ್ವಜಗಳನ್ನು ನೇತು ಹಾಕಲಾಗಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ಲುಲು ಮಾಹಿತಿ ನೀಡಿದ್ದು, ಲುಲು ಮಾಲ್‌ನ ಬಗ್ಗೆ ಕೆಲವೊಂದು ಸುಳ್ಳು ಸಂಗತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ನಿಜವಾಗಿರುವುದಿಲ್ಲ ಎಂದು ಕಂಪನಿ ಹೇಳಿದೆ. ಮಾಲ್ ಮಧ್ಯದಲ್ಲಿ, ಎಲ್ಲಾ ಧ್ವಜಗಳನ್ನು ಛಾವಣಿಯ ಮೇಲೆ ಒಂದೇ ಎತ್ತರದಲ್ಲಿ ನೇತುಹಾಕಲಾಗಿದೆ. ಮೇಲಿನಿಂದ ಅಥವಾ ಬದಿಯಿಂದ ಧ್ವಜಗಳ ಚಿತ್ರಗಳನ್ನು ತೆಗೆದಾಗ, ಆ ಬದಿಯಲ್ಲಿರುವ ಧ್ವಜಗಳು ದೊಡ್ಡದಾಗಿ ಕಾಣುತ್ತವೆ. ಆದರೆ ಕೆಳಗಿನಿಂದ ಚಿತ್ರಗಳನ್ನು ತೆಗೆದುಕೊಳ್ಳುವಾಗ, ಎಲ್ಲಾ ಧ್ವಜಗಳು ಒಂದೇ ಸೈಜ್‌ನಲ್ಲಿರುವುದಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ ಎಂದು ಲುಲು ಮಾಲ್ ತಿಳಿಸಿದೆ. ಇಂತಹ ತಪ್ಪು ಮತ್ತು ಸುಳ್ಳು ಪ್ರಚಾರದಿಂದ ದೂರವಿರುವಂತೆಯೂ ಲುಲು ಗ್ರೂಪ್ ವಿನಂತಿ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗಿರುವ ಒಂದು ಚಿತ್ರದಲ್ಲಿ ಭಾರತದ ಧ್ವಜ ಚಿಕ್ಕದಾಗಿ, ಪಾಕಿಸ್ತಾನದ ಧ್ವಜವನ್ನು ದೊಡ್ಡದಾಗಿ ಇರುವಂತೆ ಹೇಳಲಾಗಿದೆ. ಫೋಟೋ ತೆಗೆದುಕೊಂಡ ಸ್ಥಳದಿಂದ ನೀವು ಯಾವುದೇ ದೇಶದ ಧ್ವಜ ನೋಡಿದರೂ ಅದು ದೊಡ್ಡದಾಗಿ ಕಾಣುತ್ತದೆ. ಆದರೆ, ಕೆಳಗಿನಿಂದ ನೋಡಿದಾಗ ಎಲ್ಲಾ ದೇಶದ ಧ್ವಜಗಳು ಒಂದೇ ಸೈಜ್‌ನಲ್ಲಿದೆ. ಪಾಕಿಸ್ತಾನದ ಧ್ವಜವನ್ನು ದೊಡ್ಡದಾಗಿ ಹಾಕಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು.
ಲುಲೂ ಮಾಲ್‌ನಲ್ಲಿ ಭಾರತದ ತಿರಂಗಗಿಂತ ದೊಡ್ಡ ಪಾಕಿಸ್ತಾನ ಧ್ವಜ, ಹೆಚ್ಚಿದ ಆಕ್ರೋಶ!
ಭಾರತದ ಧ್ವಜ ಸಂಹಿತೆಯ ಪ್ರಕಾರ, ನಮ್ಮ ದೇಶದ ಧ್ವಜ ಎದುರು ಬೇರೆ ಯಾವುದೇ ದೇಶದ ಧ್ವಜಗಳನ್ನು ದೊಡ್ಡದಾಗಿ ಹಾಕುವಂತಿಲ್ಲ. ಅದಲ್ಲದೆ, ಭಾರತದ ತ್ರಿವರ್ಣ ಧ್ವಜಕ್ಕಿಂತ ಮೇಲೆ ಯಾವುದೇ ದೇಶದ ಧ್ವಜಗಳನ್ನು ಹಾರಿಸುವಂತಿಲ್ಲ. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನವರು ಇದನ್ನು ಶೇರ್ ಮಾಡಿಕೊಂಡಿದ್ದಲ್ಲದೆ, ಲುಲು ಮಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಲುಲು ಮಾಲ್ ಮಹಿಳೆಯರ ಟಾಯ್ಲೆಟ್ 'ಕಳ್ಳ ಕಿಂಡಿ'ಯಲ್ಲಿ ಮೊಬೈಲ್ ಇಟ್ಟಿದ್ದ ಬುರ್ಖಾ ಧರಿಸಿದ್ದ ಟೆಕ್ಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ