ಕೊರೋನಾ ಎದುರಿಸಲು ಭಾರತಕ್ಕಿರುವ ಸಮಸ್ಯೆಗಳೇನು?

By Kannadaprabha News  |  First Published Mar 18, 2020, 4:47 PM IST

ಮಾರ​ಕ ಕೊರೋನಾ ವೈರಸ್ಸಿಗೆ ಇಡೀ ಜಗ​ತ್ತು ಬೆಚ್ಚಿ ಬಿದ್ದಿದೆ. ಭಾರ​ತ​ದಲ್ಲೂ ಸೋಂಕಿ​ತರ ಸಂಖ್ಯೆ 147ಕ್ಕೆ ತಲು​ಪಿದೆ. ಕೊರೋನಾ ಸೋಂಕು ತಡೆ​ಗ​ಟ್ಟುವಲ್ಲಿ ಜನ​ಸಂಖ್ಯೆಯೇ ಭಾರ​ತ​ಕ್ಕಿರುವ ದೊಡ್ಡ ಸವಾಲು. ಈ ಹಿನ್ನೆ​ಲೆ​ಯಲ್ಲಿ ಕೊರೋನಾ ತಡೆ​ಗ​ಟ್ಟಲು ಭಾರ​ತ​ಕ್ಕಿ​ರುವ ಸವಾ​ಲು​ಗ​ಳೇ​ನು ಎಂಬ ವರದಿ ಇಲ್ಲಿ​ದೆ.


ಭಾರ​ತ​ದಲ್ಲಿ ಸೋಂಕಿ​ತರ ಸಂಖ್ಯೆ ಇನ್ನೂ ಹೆಚ್ಚುವ ಅಪಾಯ ಇದೆ!

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತ ಇದು​ವ​ರೆಗೆ 6,00,000ಕ್ಕೂ ಹೆಚ್ಚು ಜನ​ರನ್ನು ಸ್ಕ್ರೀನಿಂಗ್‌​ಗೆ ಒಳ​ಪ​ಡಿ​ಸಿ​ದೆ. ಇದೇ ಕಾರ​ಣ​ದಿಂದ ವಿಶ್ವ ಆರೋಗ್ಯ ಸಂಸ್ಥೆಯು ‘ದೇ​ಶವು ತುರ್ತಾಗಿ ಮತ್ತು ಪಾರ​ದ​ರ್ಶ​ಕ​ವಾಗಿ ಪ್ರತಿ​ಕ್ರಿ​ಯಿ​ಸು​ತ್ತಿದೆ ಎಂದು ಶ್ಲಾಘಿ​ಸಿದೆ. ಆದಾಗ್ಯೂ ಸೋಂಕಿ​ನಿಂದ ಈಗಾ​ಗಲೇ ಇಬ್ಬರು ಮೃತ​ಪ​ಟ್ಟಿದ್ದು, ಸೋಂಕಿ​ತರ ಸಂಖ್ಯೆ 147ಕ್ಕೆ ಏರಿ​ಕೆ​ಯಾ​ಗಿದೆ. ಹಾರ್ವರ್ಡ್‌ ಗ್ಲೋಬಲ್‌ ಇನ್‌​ಸ್ಟಿ​ಟ್ಯೂಟ್‌ ಡೈರೆ​ಕ್ಟರ್‌ ಡಾ.ಆಶಿಶ್‌ ಝಾ ಈ ಸಂಖ್ಯೆ ಇನ್ನೆ​ರಡು ವಾರ​ಗ​ಳಲ್ಲಿ ಹೆಚ್ಚ​ಬ​ಹುದು, ಸೋಂಕಿ​ತ​ರನ್ನು ಇದು​ವ​ರೆಗೆ ಸರಿ​ಯಾಗಿ ಗುರು​ತಿ​ಸಿ​ಲ್ಲ ಎಂದು ಆತಂಕ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

Latest Videos

ಸ್ಕ್ರೀನಿಂಗ್‌ ಮಾಡಿ​ದ​ವರ ನಿಗಾಕ್ಕೆ ಕ್ವಾರಂಟೈನ್‌ ಹೋಮ್‌ಗ​ಳಿ​ಲ್ಲ

ಚೀನಾ​ದಲ್ಲಿ ಕೊರೋನಾ ಭೀಕ​ರತೆ ಹೆಚ್ಚಾ​ಗು​ತ್ತಿ​ದ್ದಂತೆಯೇ ಎಚ್ಚೆತ್ತ ಭಾರತ ಸರ್ಕಾರ ಚೀನಾದ ವೀಸಾ​ಗ​ಳನ್ನು ರದ್ದು ಪಡಿ​ಸಿತ್ತು. ಅಷ್ಟೇ ಅಲ್ಲದೆ ಹಲವು ದೇಶ​ಗಳ ವೀಸಾ​ಗ​ಳನ್ನು ಏಪ್ರಿಲ್‌ 15ರ ವರೆಗೆ ಅಮಾ​ನತು ಮಾಡಿ​ದೆ. ಹಾಗೆಯೇ ಭಾರ​ತೀ​ಯರೂ ಸೇರಿ​ದಂತೆ ಚೀನಾ, ಇಟಲಿ, ಇರಾನ್‌, ರಿಪ​ಬ್ಲಿ​ಕ್‌ ಆಫ್‌ ಕೊರಿಯಾ, ಫ್ರಾನ್ಸ್‌, ಸ್ಪೇನ್‌ ಮತ್ತು ಜರ್ಮ​ನಿಗೆ ಫೆಬ್ರ​ವರಿ 15ರ ನಂತರ ಭೇಟಿ ನೀಡಿ​ರು​ವ ಎಲ್ಲ​ರನ್ನೂ 14 ದಿನ​ಗಳ ಕಾಲ ಕ್ವಾರ​ಂಟೇನ್‌ ಹೋಂ (ಪ್ರ​ತ್ಯೇಕ ಕೊಠ​ಡಿ​)ನಲ್ಲಿ ಇಟ್ಟು ನಿಗಾ ವಹಿ​ಸ​ಲಾ​ಗು​ತ್ತಿದೆ. ಇದುವ​ರೆಗೆ 21 ಏರ್‌​ಪೋರ್ಟ್‌ ಮತ್ತು 77 ಬಂದ​ರಿ​ನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಪ್ರಯಾ​ಣಿ​ಕ​ರನ್ನು ಸ್ಕ್ರೀನಿಂಗ್‌ಗೆ ಒಳ​ಪ​ಡಿ​ಸ​ಲಾ​ಗಿದೆ. ಈ ಸಂಖ್ಯೆಗೆ ಹೋಲಿ​ಸಿ​ದರೆ ನಮ್ಮ ದೇಶ​ದ​ಲ್ಲಿ​ರುವ ಕ್ವಾರಂಟೇನ್‌ ಹೋಂಗಳ ಸಂಖ್ಯೆ ಕಡಿಮೆ. ಇದೇ ಕಾರ​ಣ​ದಿಂದಾಗಿ ಇನ್ನೂ ಹೆಚ್ಚು ಜನ​ರಿಗೆ ಸೋಂಕು ತಗು​ಲ​ಬ​ಹು​ದು ಎಂಬು​ದು ಕೆಲ ತಜ್ಞರ ಅಭಿ​ಪ್ರಾಯ.

ಮಲಿನ ಗಾಳಿಯಿಂದ ಮತ್ತಷ್ಟು ಸೋಂಕು ಹರ​ಡುವ ಸಾಧ್ಯ​ತೆ

ಈಗಾ​ಗಲೇ ಆರೋಗ್ಯ ಸ್ಥಿತಿ ಹದ​ಗೆ​ಟ್ಟಿ​ರುವ ವಯೋ​ವೃ​ದ್ಧ​ರಲ್ಲಿ ಅಂದರೆ ಉಸಿ​ರಾ​ಟದ ಸಮಸ್ಯೆ, ಮಧು​ಮೇಹ, ಹೃದಯ ಸಂಬಂಧೀ ಕಾಯಿಲೆ ಇರು​ವ​ವ​ವ​ರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿ​ಸಿ​ಕೊ​ಳ್ಳು​ತ್ತ​ದೆ ಅಥವಾ ಅಂಥ​ವ​ರಲ್ಲಿ ಬಹು​ಬೇಗ ಹರ​ಡು​ತ್ತ​ದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ಹೃದಯ ಸಮಸ್ಯೆ ಮತ್ತು ಮಧುಮೇಹ ಇರುವ ಜನರೂ ಕೂಡ ಹೆಚ್ಚಿನ ಸಂಖ್ಯೆಯ​ಲ್ಲಿ​ದ್ದಾ​ರೆ. ಇನ್ನೊಂದು ದೊಡ್ಡ ಆತಂಕ ಎಂದರೆ ಇಲ್ಲಿನ ಮಲಿ​ನ​ಯುಕ್ತ ಗಾಳಿ. ಇದ​ರಿಂದಾಗಿ ಈಗಾ​ಗಲೇ ಹಲ​ವರು ಉಸಿ​ರಾ​ಟದ ತೊಂದರೆ ಅನು​ಭ​ವಿ​ಸು​ತ್ತಿ​ದ್ದಾ​ರೆ. ಇಂಥ​ವರಿಗೂ ಕೊರೋನಾ ಸೋಂಕು ಬಹು​ಬೇಗ ತಗು​ಲು​ತ್ತ​ದೆ.

ಕೊರೋ​ನಾ ಚಿಕಿ​ತ್ಸೆಗೆ ಅಗ​ತ್ಯ ಇ​ರುವ ಸೌಲಭ್ಯ ನಮ್ಮ​ಲ್ಲಿದೆಯೇ?

ಭಾರ​ತ​ದಲ್ಲಿ ಕೊರೋನಾ ಇನ್ನಷ್ಟುಭೀತಿ ಹುಟ್ಟಿ​ಸು​ತ್ತದೆ ಎನ್ನಲು ಮತ್ತೊಂದು ಕಾರಣ ಇಲ್ಲಿನ ಬಡ​ತನ. ವಿಶ್ವ ಬ್ಯಾಂಕ್‌ ಪ್ರಕಾರ ಭಾರ​ತ​ದಲ್ಲಿ 17.6 ಕೋಟಿ ಜನರು ಕಡು​ಬ​ಡ​ವ​ರು. ಅಲ್ಲ​ದೆ ವರ​ದಿ​ಯೊಂದರ ಪ್ರಕಾರ ಕೊರೋನಾ ಸೋಂಕಿ​ತ​ರಿಗೆ ಮತ್ತು ಶಂಕಿ​ತ​ರಿ​ಗೆ ಸರ್ಕಾರಿ ಆಸ್ಪ​ತ್ರೆ​ಗಳಲ್ಲಿ ಮಾತ್ರ ಉಚಿ​ತ ಪರೀಕ್ಷೆ ದೊ​ರೆ​ಯು​ತ್ತಿದೆ. ಅವು​ಗ​ಳ​ಲ್ಲಿ ಬಹು​ತೇಕ ಸರ್ಕಾರಿ ಆಸ್ಪ​ತ್ರೆ​ಗ​ಳಲ್ಲಿ ಸೌಲ​ಭ್ಯ​ಗಳ ಕೊರತೆ ತಾಂಡ​ವ​ವಾ​ಡು​ತ್ತಿ​ದೆ. ಇನ್ನು ಖಾಸಗಿ ಆಸ್ಪ​ತ್ರೆ​ಗಳು ಬಡ​ವ​ರಿಗೆ ನಿಲು​ಕದ ನಕ್ಷತ್ರ. ಹೆಚ್ಚಿನ ಸಂಖ್ಯೆ​ಯಲ್ಲಿ ಕೊರೋನಾ ಸೋಂಕು ತಗು​ಲಿ​ದರೆ ಭಾರ​ತದ ಆಸ್ಪ​ತ್ರೆ​ಗ​ಳಲ್ಲಿ ಬೆಡ್‌​ ಕೊರತೆ ಉಂಟಾ​ಗ​ಬ​ಹು​ದು. ಭಾರ​ತದ ಬಹು​ತೇಕ ಆಸ್ಪ​ತ್ರೆ​ಗಳು ರೋಗಿ​ಗ​ಳಿಂದ ತುಂಬಿ ತುಳು​ಕು​ತ್ತ​ವೆ. ಅಲ್ಲಿ ರೋಗಿ​ಗ​ಳಿಗೆ ತಕ್ಕಷ್ಟುಸಿಬ್ಬಂದಿಯೂ ಇಲ್ಲ, ಬೆಡ್‌​ಗ​ಳೂ ಇಲ್ಲ. ಇನ್ನೊಂದು ಮಹತ್ವದ ಮಾಹಿತಿ ಎಂದರೆ ಕರ್ನಾಟಕದಲ್ಲಿ ಪ್ರತಿ 507 ಜನರಿಗೆ ಒಬ್ಬ ವೈದ್ಯ ಇದ್ದಾನೆ, ಅದೂ ಸರ್ಕಾರಿ ವೈದ್ಯ ಅಲ್ಲ! ಖಾಸಗಿ ಆಸ್ಪತ್ರೆ ವೈದ್ಯರನ್ನೂ ಸೇರಿಸಿದ ಲೆಕ್ಕ ಇದು! ಇಷ್ಟಾ​ಗಿಯೂ ಕರ್ನಾಟಕ ಈ ಸ್ಥಿತಿ ಅತ್ಯುತ್ತಮ ಎನ್ನಲಾಗುತ್ತಿದೆ. ಜಾರ್ಖಂಡ್‌, ಉತ್ತರ ಪ್ರದೇಶಗಳ ಸ್ಥಿತಿ ಇನ್ನಷ್ಟುಗಂಭೀರವಾಗಿದೆ.

ಸ್ಯಾನಿ​ಟೈ​ಸರ್‌ ಇರಲಿ, ಗ್ರಾಮೀಣ ಪ್ರದೇ​ಶ​ದ​ಲ್ಲಿ ಸೋಪು, ನೀರೇ ಇಲ್ಲ!

ವೈರಸ್‌ ನಿಯಂತ್ರ​ಣಕ್ಕೆ ಹ್ಯಾಂಡ್‌ ಸ್ಯಾನಿ​ಟೈ​ಸರ್‌ ಬಳಕೆ ಮಾಡ​ಬೇ​ಕಂದು ಸರ್ಕಾ​ರವೇ ಸಲಹೆ ನೀಡಿದೆ. ಆದರೆ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇ​ಶ​ದ 50.7% ಜನರಿಗೆ ಸೋಪು, ನೀರಿ​ನಂಥ ಮೂಲ​ಭೂತ ಸೌಲ​ಭ್ಯ​ಗಳೇ ಇಲ್ಲ. ಹಾಗೆಯೇ ನಗರ ಪ್ರದೇ​ಶದ 20.2% ಪ್ರದೇಶ ಅಂದರೆ ಒಟ್ಟು ಜನ​ಸಂಖ್ಯೆಯ 40.5 % ಜನರಿಗೂ ಈ ಮೂಲ​ಭೂತ ಸೌಲ​ಭ್ಯ​ಗ​ಳಿ​ಲ್ಲ.

ಹಾದಿ ತಪ್ಪಿ​ಸುವ ಸುಳ್ಳು ಸುದ್ದಿ​ಗ​ಳು ದೊಡ್ಡ ಸಮಸ್ಯೆ

ಕೊರೋನಾ ಸೋಂಕಿ​ಗಿಂತಾ ಹೆಚ್ಚಾಗಿ ಅದ​ರ ಬಗೆಗೆ ಉಂಟಾ​ಗಿ​ರುವ ಭಯವೇ ಹೆಚ್ಚು ಅಪಾ​ಯ​ಕಾ​ರಿ​ಯಾ​ಗಿ ಪರಿ​ವ​ರ್ತ​ನೆ​ಯಾ​ಗು​ತ್ತಿದೆ. ಇದ​ಕ್ಕೆ ಪುಷ್ಠಿ ನೀಡು​ವಂತೆ ಆಯುಷ್‌ ಸಚಿ​ವಾ​ಲಯ ಇತ್ತೀ​ಚೆಗೆ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಆಯು​ರ್ವೇದ, ಯುನಾನಿ​ಯಂತಹ ಪರಾರ‍ಯಯ ಔಷ​ಧ​ಗ​ಳನ್ನು ಬಳ​ಸ​ಬ​ಹುದು ಎಂದಿ​ತ್ತು. ಆದರೆ ಆರೋಗ್ಯ ತಜ್ಞರು ಹೋಮಿ​ಯೋ​ಪ​ತಿ​ಯಿಂದ ವೈರಸ್‌ ನಿಯಂತ್ರ​ಣಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೆ ಕೆಲ ಜನ​ಪ್ರ​ತಿ​ನಿಧಿಗಳೇ ಗೋಮೂ​ತ್ರ​ದಿಂದ ಕೊರೋನಾ ನಿವಾ​ರ​ಣೆ​ಯಾ​ಗು​ತ್ತದೆ ಎಂಬ ಸುಳ್ಳು​ಸುದ್ದಿ ಹರ​ಡು​ತ್ತಿ​ದ್ದಾರೆ. ಅತ್ತ ಚೀನಾ​ದಲ್ಲಿ 20,000 ಜನ​ರನ್ನು ಕೊಲ್ಲಲು ಚೀನಾ ಸುಪ್ರೀಂಕೋ​ರ್ಟ್‌​ನಿಂದ ಅನು​ಮತಿ ಕೇಳಿದೆ, ಬೆಳ್ಳುಳ್ಳಿ ತಿಂದರೆ ಕೊರೋನಾ ಗುಣ​ಮು​ಖ​ವಾ​ಗು​ತ್ತ​ದೆ ಎಂಬ ಸುಳ್ಳು​ಸುದಿ ವೈರಲ್‌ ಆಗಿದ್ದವು. ​ಸಾಂಕ್ರಾ​ಮಿಕ ರೋಗದ ಸಂದ​ರ್ಭ​ದಲ್ಲಿ ಸುಳ್ಳು​ಸು​ದ್ದಿ​ಗ​ಳನ್ನು ಹುಟ್ಟು​ಹಾಕಿ ಭೀತಿ ಹುಟ್ಟಿ​ಸು​ವುದು ಸಾಮಾನ್ಯ. ಆದರೆ ಭಾರ​ತ​ದಲ್ಲಿ ಅದು ಇನ್ನೂ ಹೆಚ್ಚು ಎಂಬುದು ಅಪಾ​ಯ​ಕಾ​ರಿ.

click me!