ಕೇರಳದಲ್ಲಿ ಯುಡಿಎಫ್‌ ಬಡವರಿಗೆ ವರ್ಷಕ್ಕೆ 72 ಸಾವಿರ ರು.: ರಾಹುಲ್‌ ಭರವಸೆ!

By Kannadaprabha NewsFirst Published Mar 24, 2021, 11:17 AM IST
Highlights

ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಒದಗಿಸುವ ‘ನ್ಯಾಯ್‌’ ಯೋಜನೆ| ಕೇರಳದಲ್ಲಿ ಯುಡಿಎಫ್‌ ಬಡವರಿಗೆ ವರ್ಷಕ್ಕೆ 72 ಸಾವಿರ ರು.: ರಾಹುಲ್‌ ಭರವಸೆ!

 

ಕೊಟ್ಟಾಯಂ(ಮಾ.24): ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಒದಗಿಸುವ ‘ನ್ಯಾಯ್‌’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಮನ್ನಾರ್‌ಕಾಡ್‌ನಲ್ಲಿ ಆಯೋಜಿಸಿದ್ದ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ನ್ಯಾಯ್‌ ಯೋಜನೆಯ ಯಶಸ್ಸಿನ ಬಗ್ಗೆ ನನಗೆ ವಿಶ್ವಾಸವಿದೆ. ಇದರನ್ವಯ ಬಡ ಕುಟುಂಬಸ್ಥರ ಬ್ಯಾಂಕ್‌ ಖಾತೆಗೆ ವಾರ್ಷಿಕ 72,000 ನೇರವಾಗಿ ತಲುಪಲಿದೆ.

ಆಮೇಲೇನಾಗುತ್ತದೆ ಎಂದು ನಮಗೆಲ್ಲ ಗೊತ್ತಿದೆ. ಇದನ್ನು ಕೇರಳದಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗುತ್ತದೆ. ಇಲ್ಲಿ ಅದು ಸಫಲವಾದರೆ ಕಾಂಗ್ರೆಸ್‌ ಆಡಳಿತದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವ ಉದ್ದೇಶವಿದೆ’ ಎಂದು ಹೇಳಿದರು.

ಈ ವೇಳೆ ಎಐಸಿಸಿ ಪ್ರಧಾನ ಕಾರ‍್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮಾಜಿ ಮುಖ್ಯಮಂತ್ರಿ ಒಮೆನ್‌ ಚಾಂಡಿ ಸೇರಿದಂತೆ ನೂರಾರು ಕಾರ‍್ಯಕರ್ತರು ಹಾಜರಿದ್ದರು.

click me!