ಮೋದಿ ಡಿಗ್ರಿ ಬಗ್ಗೆ ಈಗ ಅನುಮಾನ ಇನ್ನೂ ಜಾಸ್ತಿ ಆಗಿದೆ ಎಂದ ಅರವಿಂದ್‌ ಕೇಜ್ರಿವಾಲ್‌!

By Santosh Naik  |  First Published Apr 1, 2023, 6:34 PM IST

2016ರಲ್ಲಿ ಅಂದಿನ ಕೇಂದ್ರ ಮಾಹಿತಿ ಆಯುಕ್ತರು ದೆಹಲಿ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳಿಗೆ ಮೋದಿ ಪದವಿಗಳ ಬಗ್ಗೆ ಕೇಜ್ರಿವಾಲ್‌ಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಸಿಐಸಿ ಆದೇಶಕ್ಕೆ ತಡೆ ನೀಡಿದ್ದಲ್ಲದೆ, ಈ ಅರ್ಜಿ ಹಾಕಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ 25 ಸಾವಿರ ದಂಡ ವಿಧಿಸಿದೆ.
 


ನವದೆಹಲಿ (ಏ.1): ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿಚಾರದಲ್ಲಿ ಗುಜರಾತ್ ಹೈಕೋರ್ಟ್ ನೀಡಿದ ತೀರ್ಪಿನ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ದೇಶದ ಜನತೆ ವಿಚಾರಿಸುವಂತಿಲ್ಲ ಎಂಬ ಗುಜರಾತ್ ಹೈಕೋರ್ಟ್ ನ ಆದೇಶ ಶುಕ್ರವಾರ ಬಂದಿದೆ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ಕಾರಣ ಇಡೀ ದೇಶವೇ ಈ ಆದೇಶದ ಬಗ್ಗೆ ಅಚ್ಚರಿಪಟ್ಟಿದೆ. ಪ್ರಶ್ನೆಗಳನ್ನು ಕೇಳುವ ಮತ್ತು ಮಾಹಿತಿಯನ್ನು ಹುಡುಕುವ ಸ್ವಾತಂತ್ರ್ಯ ಇರಬೇಕು. ಯಾರಾದರೂ ಕಡಿಮೆ ಶಿಕ್ಷಣ ಪಡೆದರೆ ಅದು ಅಪರಾಧವಲ್ಲ. ಅನಕ್ಷರಸ್ಥರಾಗಿರುವುದು ಅಪರಾಧವಲ್ಲ, ಪಾಪವೂ ಅಲ್ಲ. ನಮ್ಮ ದೇಶದಲ್ಲಿ ತುಂಬಾ ಬಡತನವಿದೆ. ತಮ್ಮ ಮನೆಯ ಪರಿಸ್ಥಿತಿಗಳಿಂದಾಗಿ ಓದಲು ಸಾಧ್ಯವಾಗದ ಅನೇಕ ಜನರಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ತಾವು ಪ್ರಧಾನಿ ಮೋದಿ ಅವರ ಡಿಗ್ರಿ ವಿವರಗಳನ್ನು ಕೇಳಿದ್ದೇಕೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ. ಇದರ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಅರವಿಂದ್‌ ಕೇಜ್ರಿವಾಲ್‌ ಸಂಪೂರ್ಣವಾಗಿ ಹುಚ್ಚರಾಗಿ ಹೋಗಿದ್ದಾರೆ. ಅವರ ನೇರವಾಗಿ ಕೇಳ್ತಿದ್ದಾರೋ, ಪರೋಕ್ಷವಾಗಿ ಕೇಳ್ತಿದ್ದಾರೋ ಗೊತ್ತಿಲ್ಲ. ಆದರೆ, ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ಸ್ವತಃ ಕೋರ್ಟ್‌ ಕೂಡ ಅವರಿಗೆ ಛೀಮಾರಿ ಹಾಕಿದೆ.  ಅವರು ಬಳಸಿರುವ ಭಾಷೆ, ಶೈಲಿ ಮತ್ತು ದೇಹ ಭಾಷೆ ಅತ್ಯಂತ ಕೆಳಮಟ್ಟದ್ದು ಎಂದು ಟೀಕಿಸಿದ್ದಾರೆ.

ಭ್ರಷ್ಟಾಚಾರದ ಮೂಲಕ ಮದ್ಯದ ನೀತಿಯ ಮೇಲೆ ಪ್ರಭಾವ ಬೀರಲು ಮನೀಶ್ ಸಿಸೋಡಿಯಾ ಮಾತ್ರವಲ್ಲದೆ ಆಮ್ ಆದ್ಮಿ ಪಕ್ಷದ ಇತರರು ಕೂಡ ಕಾರಣರಾಗಿದ್ದಾರೆ ಎಂಬುದು ಈಗ ಸತ್ಯಗಳೊಂದಿಗೆ ಹೊರಬರುತ್ತಿದೆ. ಈಗ ಒಂದೋ ಎರಡೋ ನಾಟಕ ಹುಟ್ಟುಹಾಕಿದ್ದಾರೆ. ಹಾಗಾಗಿ ಟಾಪಿಕ್ ಪ್ರಧಾನಿ ಪದವಿಯಲ್ಲ... ಟಾಪಿಕ್ ಅವರ ಭ್ರಷ್ಟಾಚಾರ, ಅದನ್ನು ಮರೆಮಾಚಲು ಈ ನಾಟಕ ಮಾಡ್ತಿದ್ದಾರೆ ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಚರಂಡಿಯ ಗ್ಯಾಸ್‌ನಿಂದ ಚಹಾ ಮಾಡಬಹುದೇ?: ನಮ್ಮ ದೇಶ ಸ್ವತಂತ್ರಗೊಂಡು 75 ವರ್ಷಗಳಾಗಿವೆ. ಇಂದು ಜನರಲ್ಲಿ ಸಾಕಷ್ಟು ಚಡಪಡಿಕೆ ಇದೆ, ದೇಶದ ಅಭಿವೃದ್ಧಿಯನ್ನು ಜನ ಬಯಸುತ್ತಿದ್ದಾರೆ. 21 ನೇ ಶತಮಾನದ ಯುವಕರು ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ವಿದ್ಯಾವಂತರಾಗುವುದು ಬಹಳ ಮುಖ್ಯ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಆದರೆ, ನಮ್ಮ ಪ್ರಧಾನಿ ಹೇಳುವ ಹೇಳಿಕೆಗಳು ದೇಶದಲ್ಲಿ ತಳಮಳಕ್ಕೆ ಕಾರಣವಾಗಿದೆ. ಉದಾಹರಣೆಗೆ, ಮೋದಿ ಚರಂಡಿ ಗ್ಯಾಸ್‌ನಿಂದ ಚಹಾ ತಯಾರಿಸಬಹುದು ಎಂದು ಹೇಳಿದ್ದರು. ಬುದ್ಧಿಇದ್ದವರು, ವಿದ್ಯಾವಂತರು ಈ ರೀತಿ ಮಾಡತನಾಡೋದಿಲ್ಲ. ಮಳೆ ಬರುವಂತಿದ್ದರೆ, ಮೋಡಗಳಿದ್ದರೆ, ಅದರ ಹಿಂದೆ ಏರೋಪ್ಲೇನ್‌ಗಳು ಹೋದರೆ, ರೇಡಾರ್‌ಗಳು ಅವುಗಳನ್ನು ಹಿಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಕೇಳಿದವರು ಏನಂದುಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಡಿಗ್ರಿ ಕೇಳಿದ್ದ ಕೇಜ್ರಿವಾಲ್‌ ಅರ್ಜಿ ವಜಾ: 25 ಸಾವಿರ ದಂಡ

ಇದನ್ನು ದೇಶದ ಯುವಕರು ಕೇಳಿದಾಗ, ವಿಜ್ಞಾನದ ಬಗ್ಗೆ ನಮ್ಮ ಪ್ರಧಾನಿಗೆ ಎಷ್ಟು ಕಡಿಮೆ ತಿಳುವಳಿಕೆ ಇದೆ ಎಂದು ಅಂದುಕೊಳ್ಳುತ್ತಾರೆ. ಪ್ರಧಾನಿ ಕೆನಡಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಇದೇ ರೀತಿಯಲ್ಲಿ ಏನೂ ಮಾತನಾಡಿದ್ದರು. ಪ್ರಧಾನಿಯ ಇಂಥ ಮಾತುಗಳಿಂದ ನಮ್ಮ ದೇಶ ಇಡೀ ಜಗತ್ತಿನ ಮುಂದೆ ಮುಜುಗರ ಅನುಭವಿಸಿದೆ. ಮಕ್ಕಳನ್ನು ಉದ್ದೇಶಿಸಿ ಮಾತನಾಡುವ ವೇಳೆ, ಜಗತ್ತಿನಲ್ಲಿ ಹವಮಾನ ಬದಲಾವಣೆ ಅನ್ನೋದೇ ಇಲ್ಲ ಎಂದಿದ್ದರು. ಆದರೆ, ಹವಮಾನ ಬದಲಾವಣೆ ಅನ್ನೋದು ಜಾಗತಿಕ ಸತ್ಯ. . ಜಾಗತಿಕ ತಾಪಮಾನ ಏನೂ ಅಲ್ಲ ಎಂದು ನಮ್ಮ ಪ್ರಧಾನಿ ಹೇಳಿದರೆ ನಾವು ಅದರ ಮೇಲೆ ಹೇಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

ಅದಾನಿ ಹೆಸರು ಮೋದಿ ಹೂಡಿಕೆ, ತನಿಖೆ ನಡೆಸಿದರೆ ಪ್ರಧಾನಿ ಒಳಗೆ; ಕೇಜ್ರಿವಾಲ್ ಗಂಭೀರ ಆರೋಪ!

ಹೀಗಿದ್ದಾಗ ನಮ್ಮ ದೇಶದ ಪ್ರಧಾನಮಂತ್ರಿ ಎಷ್ಟು ಓದಿದ್ದಾರೆ? ಯಾವ ಪದವಿ ಪಡೆದಿದ್ದಾರೆ ಎನ್ನುವ ಕುತೂಹಲಗಳು ಏಳುವು ಸಹಜ. ಒಂದು ಸಂದರ್ಭದಲ್ಲಿ ಪ್ರಧಾನಿ ಮೋದಿ ತಾವು ಹೆಚ್ಚಿ ಶಿಕ್ಷಿತರಲ್ಲ ಎನ್ನುತ್ತಾರೆ. ದೇಶದ ಪ್ರಧಾನಿ ಶಿಕ್ಷಿತರಾಗಿರುವುದು ಮುಖ್ಯವಲ್ಲವೇ? ಒಂದು ದಿನದಲ್ಲಿ ಅವರು ವಿಜ್ಞಾನ, ಆರ್ಥಿಕತೆಗೆ ಸಂಬಂಧಿಸಿದ ನೂರಾರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಧಾನಿಗೆ ಶಿಕ್ಷಣವಿಲ್ಲದಿದ್ದರೆ, ಅಧಿಕಾರಿಗಳು ಮತ್ತು ಇತರ ಜನರು ಎಲ್ಲಿ ಬೇಕಾದರೂ ಸಹಿ ಮಾಡಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

click me!