
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಬೃಹತ್ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಮೇಲಿಂದ ಮೇಲೆ ಮೆಚ್ಚುಗೆಗೆ ಒಳಗಾಗುತ್ತಿರುವ ಭಾರತಕ್ಕೆ ಇದೀಗ ಅಮೆರಿಕದ ಸಂಸತ್ತಿನ ಅತ್ಯಂತ ಪ್ರಭಾವಿ ಸಮಿತಿಯೊಂದರ ಮುಖ್ಯಸ್ಥರಾಗಿರುವ ಹಿರಿಯ ಸಂಸದ ಮಾರ್ಕ್ ವಾರ್ನರ್ ಕೂಡ ಶಹಬ್ಬಾಸ್ ಹೇಳಿದ್ದಾರೆ. ಇದೇ ವೇಳೆ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾವುದಾದರೂ ಒಂದು ಬದಿಯನ್ನು ಇಂದಲ್ಲಾ ನಾಳೆ ಭಾರತ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಇಂದು ಬಹುದೊಡ್ಡ ಶಕ್ತಿ. ಆ ದೇಶ ತನ್ನ ನೈತಿಕ ಮೌಲ್ಯಗಳ ಮೂಲಕ ಶ್ರೇಷ್ಠತೆಯನ್ನು ಕಂಡುಕೊಂಡಿದೆ. ಚೀನಾದ ಆಕ್ರಮಣಶೀಲತೆ ಹಾಗೂ ಅದರ ಸವಾಲುಗಳ ವಿರುದ್ಧ ಭಾರತ ಧೈರ್ಯವಾಗಿ ನಿಂತಿದೆ. ಉಜ್ಬೆಕಿಸ್ತಾನದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎದುರೇ ಯುದ್ಧದ ವಿರುದ್ಧ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಿಲುವನ್ನು ನಾನು ಶ್ಲಾಘಿಸುತ್ತೇನೆ ಎಂದು ಗುಪ್ತಚರ ವಿಷಯಗಳಿಗೆ ಸಂಬಂಧಿಸಿದ ಸೆನೆಟ್‌ನ ಸೆಲೆಕ್ಟ್ ಕಮಿಟಿ ಚೇರ್ಮನ್ ಮಾರ್ಕ್ ವಾರ್ನರ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್‌ಗೇಟ್ಸ್: ಡಿಜಿಟಲ್ ಕ್ರಾಂತಿ, ಆರೋಗ್ಯ ಕ್ಷೇತ್ರದ ಪ್ರಗತಿಗೆ ಶ್ಲಾಘನೆ
ಇದೇ ವೇಳೆ, ರಷ್ಯಾ-ಉಕ್ರೇನ್ ಯುದ್ಧದ (Russia Ukraine war) ವಿಷಯದಲ್ಲಿ ಭಾರತ ಈವರೆಗೆ ಕೈಗೊಂಡ ಕ್ರಮಗಳು ಸಾಲದು. ಪ್ರಧಾನಿ ಮೋದಿ ವರ್ಷದ ಹಿಂದೆ ಯುದ್ಧದ ವಿರುದ್ಧ ಒಂದು ಹೇಳಿಕೆ ನೀಡಿದ್ದರು. ಈಗ ಇನ್ನಷ್ಟು ಹೆಚ್ಚಿನದನ್ನು ಮಾಡುವ ಅಗತ್ಯವಿದೆ. ಭಾರತ ದೊಡ್ಡ ಶಕ್ತಿಯಾಗಿ ಬೆಳೆದಿರುವುದರಿಂದ ಒಂದು ಹಂತದಲ್ಲಿ ಯಾವುದಾದರೂ ಒಂದು ಬದಿಯನ್ನು ಆಯ್ಕೆ ಮಾಡಿಕೊಳ್ಳಲೇಬೇಕಾಗುತ್ತದೆ ಎಂದೂ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ಸಂಸದರ ನಿಯೋಗದಲ್ಲಿ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ (Jai Shankar) ಮುಂತಾದವರನ್ನು ಭೇಟಿ ಮಾಡಿ ವಾಪಸಾಗಿದ್ದರು.
ಕೇಂಬ್ರಿಜ್‌ನಲ್ಲಿ ರಾಹುಲ್‌ನಿಂದ ಚೀನಾ ಗುಣಗಾನ: ಬಿಜೆಪಿ ತಿರುಗೇಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ