ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್‌ಗೇಟ್ಸ್: ಡಿಜಿಟಲ್ ಕ್ರಾಂತಿ, ಆರೋಗ್ಯ ಕ್ಷೇತ್ರದ ಪ್ರಗತಿಗೆ ಶ್ಲಾಘನೆ

By Kannadaprabha NewsFirst Published Mar 4, 2023, 9:33 AM IST
Highlights

ವಾರದಿಂದ ಭಾರತ ಪ್ರವಾಸದಲ್ಲಿರುವ ಉದ್ಯಮಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ನಿನ್ನೆ ಭೇಟಿಯಾಗಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ನವದೆಹಲಿ: ವಾರದಿಂದ ಭಾರತ ಪ್ರವಾಸದಲ್ಲಿರುವ ಉದ್ಯಮಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ನಿನ್ನೆ ಭೇಟಿಯಾಗಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಜೊತೆಗಿನ ಭೇಟಿಯ ಬಗ್ಗೆ ತಮ್ಮ ಗೇಟ್ಸ್ ನೋಟ್ ವೆಬ್‌ಸೈಟ್‌ನಲ್ಲಿ ಬಿಲ್‌ಗೇಟ್ಸ್ ಬರೆದುಕೊಂಡಿದ್ದಾರೆ. 

ಈ ಭೇಟಿಯ ವೇಳೆ ನಾವು ಭಾರತದ ಅದ್ಭುತ ಪ್ರಗತಿ ಹಾಗೂ ಭಾರತದ ನಾವೀನ್ಯತೆಯೂ ಜಗತ್ತಿಗೆ ಹೇಗೆ  ಉಪಯೋಗಕಾರಿಯಾಗಿದೆ ಎಂಬ  ಬಗ್ಗೆ ಮಾತನಾಡಿದ್ದೇವೆ ಎಂದು ಬಿಲ್ ಗೇಟ್ಸ್ ಹೇಳಿಕೊಂಡಿದ್ದಾರೆ.  ಒಂದು ವಾರದ ಭಾರತ ಪ್ರವಾಸದಲ್ಲಿರುವ ನಾನು ಇಲ್ಲಿ ನಡೆಯುತ್ತಿರುವ ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸತನದ ಕೆಲಸದ ಬಗ್ಗೆ ಕಲಿಯುತ್ತಿದ್ದೇನೆ.  ಹಲವಾರು ಸವಾಲುಗಳನ್ನು ಜಗತ್ತು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದಂತಹ ಕ್ರಿಯಾತ್ಮಕ ಮತ್ತು ಸೃಜನಶೀಲ ಸ್ಥಳಕ್ಕೆ ಭೇಟಿ ನೀಡುವುದು ಸ್ಪೂರ್ತಿದಾಯಕ ವಿಚಾರ ಎಂದು ಭಾರತ ಭೇಟಿ ಬಗ್ಗೆ ಬಿಲ್ ಗೇಟ್ಸ್ (Bill Gates) ಸಂತಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ನನ್ನ ಪ್ರವಾಸದ ಪ್ರಮುಖ ಅಂಶ,   ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಅಸಮಾನತೆಯನ್ನು ಕಡಿಮೆ ಮಾಡಲು ವಿಜ್ಞಾನ ಮತ್ತು ನಾವೀನ್ಯತೆ ಹೇಗೆ ಸಹಾಯ ಮಾಡುತ್ತದೆ ಎಂಬುದರ  ಬಗ್ಗೆ ಮಾತನಾಡುತ್ತಿದ್ದರೆ ಅವರು ಮುಕ್ತವಾಗಿ ಸಮಯ ನೀಡಿದರು ಎಂದು ಗೇಟ್ಸ್ ಹೇಳಿಕೊಂಡಿದ್ದಾರೆ.

ಆರ್‌ಸಿ-ಬಿಲ್‌ ಗೇಟ್ಸ್‌ ಭೇಟಿ : ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ

ಜಗತ್ತನ್ನು ಕಾಡಿದ ಕೋವಿಡ್‌ ಸಾಂಕ್ರಾಮಿಕ (pandemic) ರೋಗದ ಕಾರಣ ಕಳೆದ  ಮೂರು ವರ್ಷಗಳಿಂದ ನಾನು ಜಗತ್ತಿನಾದ್ಯಂತ ಹೆಚ್ಚು ಪ್ರಯಾಣ ಮಾಡಿಲ್ಲ. ಆದರೆ ಪ್ರಧಾನಿ ಮೋದಿ ಮತ್ತು ನಾನು ಸಂಪರ್ಕದಲ್ಲಿದ್ದೆವು, ವಿಶೇಷವಾಗಿ COVID-19 ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಭಾರತದ ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೆವು.  ಭಾರತವು ಸಾಕಷ್ಟು ಸುರಕ್ಷಿತವಾದ, ಪರಿಣಾಮಕಾರಿಯಾದ ಮತ್ತು ಜನರ ಕೈಗೆಟುಕುವ ಲಸಿಕೆಗಳನ್ನು(Vaccines) ತಯಾರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಅವುಗಳಲ್ಲಿ ಕೆಲವು ಲಸಿಕೆಗಳಿಗೆ ಗೇಟ್ಸ್ ಫೌಂಡೇಶನ್‌ ಬೆಂಬಲಿಸಿದೆ. ಭಾರತದಲ್ಲಿ ತಯಾರಿಸಲಾದ ಲಸಿಕೆಗಳು ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಪ್ರಪಂಚದಾದ್ಯಂತ ಇತರ ರೋಗಗಳನ್ನು ತಡೆಗಟ್ಟುತ್ತಿವೆ ಎಂದು ಗೇಟ್ಸ್ ದೇಶದ ಆರೋಗ್ಯ ಕ್ಷೇತ್ರವನ್ನು ಕೊಂಡಾಡಿದ್ದಾರೆ. 

ಭಾರತ ಭವಿಷ್ಯದ ಭರವಸೆ: ಮೈಕ್ರೋಸಾಫ್ಟ್‌ ಸ್ಥಾಪಕ ಬಿಲ್ ಗೇಟ್ಸ್‌ ಪ್ರಶಂಸೆ

ಭಾರತ ಹೊಸ ಜೀವರಕ್ಷಕ ಸಾಧನಗಳನ್ನು ಉತ್ಪಾದಿಸುವುದರ ಜೊತೆಗೆ, ಭಾರತವು ಅವುಗಳನ್ನು ಪೂರೈಸುವಲ್ಲಿಯೂ ಉತ್ತಮವಾಗಿ ಕೆಲಸ ಮಾಡ್ತಿದೆ.  ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು 2.2 ಶತಕೋಟಿಗೂ ಹೆಚ್ಚು ಪ್ರಮಾಣದ COVID ಲಸಿಕೆಗಳನ್ನು (COVID vaccine) ವಿತರಿಸಿದೆ. ಇದರ ಜೊತೆಗೆ  ಸಿದ್ಧಪಡಿಸಿದ  Co-WIN ಎಂಬ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಜನರಿಗೆ ಶತಕೋಟಿ ಲಸಿಕೆಗಳನ್ನು ಖಚಿತಪಡಿಸಿ ನಿಗದಿಪಡಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಲಸಿಕೆ ಹಾಕಿದವರಿಗೆ ಡಿಜಿಟಲ್ ಪ್ರಮಾಣೀಕರಣಗಳನ್ನು ವಿತರಿಸಿತು. ಭಾರತದ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು ಬೆಂಬಲಿಸಲು ಈ ವೇದಿಕೆಯನ್ನು ಈಗ ವಿಸ್ತರಿಸಲಾಗುತ್ತಿದೆ. ಕೋ-ವಿನ್ ಜಗತ್ತಿಗೆ ಮಾದರಿ ಎಂದು ಪ್ರಧಾನಿ ಮೋದಿ ನಂಬಿದ್ದಾರೆ ಮತ್ತು ನಾನು ಇದನ್ನು ಒಪ್ಪುತ್ತೇನೆ ಎಂದು ಗೇಟ್ಸ್ ಬರೆದುಕೊಂಡಿದ್ದಾರೆ. 

ಎಂಥಾ ಕಾಲ ಬಂತಪ್ಪಾ! ಹೆಂಡ್ತಿ ಬಿಟ್ಟ ನಂತರ ರೋಟಿ ಮಾಡ್ತಿದ್ದಾರೆ ಬಿಲಿಯನೇರ್‌ ಬಿಲ್‌ಗೇಟ್ಸ್‌

ಇದಲ್ಲದೇ ಡಿಜಿಟಲ್ ಕ್ರಾಂತಿಯಿಂದಾಗಿ  ಸಾಂಕ್ರಾಮಿಕ ಸಮಯದಲ್ಲಿ 200 ಮಿಲಿಯನ್ ಮಹಿಳೆಯರು ಸೇರಿದಂತೆ 300 ಮಿಲಿಯನ್ ಜನರಿಗೆ ತುರ್ತು ಡಿಜಿಟಲ್ ಪಾವತಿಗಳನ್ನು (digital payments) ವರ್ಗಾಯಿಸಲು ಭಾರತಕ್ಕೆ ಸಾಧ್ಯವಾಯಿತು. ಭಾರತವು ಆರ್ಥಿಕ ಸೇರ್ಪಡೆಗೆ ಆದ್ಯತೆ ನೀಡಿರುವುದರಿಂದ, ಡಿಜಿಟಲ್ ಐಡಿ ವ್ಯವಸ್ಥೆಯಲ್ಲಿ(digital ID system) (ಆಧಾರ್ ) ಹೂಡಿಕೆ ಮಾಡುವುದು ಮತ್ತು ಡಿಜಿಟಲ್ ಬ್ಯಾಂಕಿಂಗ್‌ಗಾಗಿ ಹೊಸ ವೇದಿಕೆಗಳನ್ನು ರಚಿಸುವುದರಿಂದ ಮಾತ್ರ ಇದು ಸಾಧ್ಯವಾಯಿತು. ಹಣಕಾಸಿನ ಸೇರ್ಪಡೆಯು ಅದ್ಭುತ ಹೂಡಿಕೆಯಾಗಿದೆ ಎಂಬುದನ್ನು ಇದು ನೆನಪಿಸುತ್ತದೆ ಹೀಗೆ ಭಾರತದ ಡಿಜಿಟಲ್, ಆರ್ಥಿಕ ಪ್ರಗತಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆದ ಕ್ರಾಂತಿಯನ್ನು ಗೇಟ್ಸ್‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. 

My conversation with Prime Minister left me more optimistic than ever about the progress that India is making in health, development, and climate. https://t.co/igH3ete4gD

— Bill Gates (@BillGates)

 

click me!