
ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಜನರು ಮೈಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದಾರೆ. ದೆಹಲಿಯಲ್ಲಿ ಜನವರಿ ತಿಂಗಳಲ್ಲೇ 2 ವರ್ಷದ ಕನಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಳಿತಾಳಲಾರದೇ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ದೆಹಲಿಯಲ್ಲಿ ಉಷ್ಣಾಂಶ 3 ಡಿಗ್ರಿ ತಾಪಮಾನಕ್ಕೆ ಕುಸಿದಿದೆ. ಇದು ಜನವರಿ ತಿಂಗಳಿನಲ್ಲೇ 2 ವರ್ಷದ ಕನಿಷ್ಠವಾಗಿದೆ. ಬಹಳಷ್ಟು ಜನರು ಮನೆಯಿಂದ ಹೊರಗೇ ಬಾರದೇ ಹೀಟರ್‌ಗಳ ಮೊರೆ ಹೋಗಿದ್ದಾರೆ. ಅಲ್ಲದೇ ದೆಹಲಿಯಲ್ಲಿ ತೀವ್ರ ಮಂಜು ಮುಸುಕಿದ್ದು, ಗೋಚರತೆ 0-5 ಮೀ.ಗೆ ಕುಸಿದಿದೆ. ಹಾಗಾಗಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ನಿರಾಶ್ರಿತರಿಗೆ ಟೆಂಟ್ ತೆರೆಯಲಾಗಿದೆ.
ಪಂಜಾಬ್ ಮತ್ತು ಹರ್ಯಾಣದಲ್ಲೂ ಸಹ ಉಷ್ಣಾಂಶ 2.2 ಡಿಗ್ರಿ ಸೆ.ವರೆಗೆ ಕುಸಿದಿದೆ. ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ತಾಪ 5 ಡಿಗ್ರಿಗಿಂತ ಕಡಿಮೆ ಇದೆ. ಜಮ್ಮು ಕಾಶ್ಮೀರದಲ್ಲಿ ಉಷ್ಣಾಂಶ ಮೈನಸ್‌ಗೆ ತಲುಪಿದೆ. ಶ್ರೀನಗರದಲ್ಲಿ -6.4 ಡಿಗ್ರಿ ಸೆ., ಕುಪ್ವಾರದಲ್ಲಿ -6.2 ಡಿಗ್ರಿ ಸೆ., ಪಹಲ್ಗಾಂನಲ್ಲಿ - 9.2 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಈ ಶೀತಹೆವೆ ಇನ್ನೂ ಎರಡು ಮೂರು ದಿನ ಮುಂದುವರೆಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಸ್ಥಾನದಲ್ಲೂ ಸಹ ಹಲವು ಕಡೆ ಉಷ್ಣಾಂಶ -1.8 ಡಿಗ್ರಿ ಸೆ.ಗೆ ಕುಸಿದಿದೆ. ಚುರುವಿನಲ್ಲಿ ಅತಿ ಕಡಿಮೆ -1.5 ಡಿಗ್ರಿ ಸೆ.ಗೆ ಇಳಿಕೆಯಾಗಿದೆ.
ಇಂದೋರ್‌ನಲ್ಲಿ ಒಬ್ಬ ಬಲಿ:
ರಸ್ತೆಬದಿಯಲ್ಲಿ ಮಲಗುತ್ತಿದ್ದ ನಿರಾಶ್ರಿತ ಪೇಂಟರ್ ಒಬ್ಬ, ಚಳಿ ತಾಳಲಾರದೇ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ