ಉತ್ತರ ಭಾರತದಲ್ಲಿ ಮುಂದುವರೆದ ಮೈಕೊರೆವ ಚಳಿ: ದಿಲ್ಲಿಯಲ್ಲಿ 1.8 ಡಿಗ್ರಿ ಉಷ್ಣಾಂಶ

By Kannadaprabha NewsFirst Published Jan 7, 2023, 8:15 AM IST
Highlights

ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಇನ್ನೂ ಮುಂದುವರೆದಿದ್ದು, ರಾಷ್ಟ್ರರಾಜಧಾನಿ ವಲಯದಲ್ಲಿ ಮುಸುಕಿರುವ ದಟ್ಟಮಂಜಿನಿಂದ ಸಂಚಾರ ವ್ಯತ್ಯಯವಾಗಿದೆ. ದೆಹಲಿಯಲ್ಲಿ ಶುಕ್ರವಾರ ಉಷ್ಣಾಂಶ 1.8 ಡಿಗ್ರಿ ಸೆ.ಗೆ ಕುಸಿದಿದೆ. ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಹಿಮಪಾತ ಮುಂದುವರೆದಿದೆ.

ನವದೆಹಲಿ (ಜ.07): ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಇನ್ನೂ ಮುಂದುವರೆದಿದ್ದು, ರಾಷ್ಟ್ರರಾಜಧಾನಿ ವಲಯದಲ್ಲಿ ಮುಸುಕಿರುವ ದಟ್ಟಮಂಜಿನಿಂದ ಸಂಚಾರ ವ್ಯತ್ಯಯವಾಗಿದೆ. ದೆಹಲಿಯಲ್ಲಿ ಶುಕ್ರವಾರ ಉಷ್ಣಾಂಶ 1.8 ಡಿಗ್ರಿ ಸೆ.ಗೆ ಕುಸಿದಿದೆ. ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಹಿಮಪಾತ ಮುಂದುವರೆದಿದೆ.

ಹರ್ಯಾಣ, ಪಂಜಾಬ್‌ ಮತ್ತು ರಾಜಸ್ಥಾನದಲ್ಲೂ ಚಳಿ ಮುಂದುವರೆದಿದೆ. ಶುಕ್ರವಾರ ರಾಷ್ಟ್ರ ರಾಜಧಾನಿ ವಲಯದ ಫತೇಪುರ್‌ ಸಿಕ್ರಿಯಲ್ಲಿ ಕನಿಷ್ಠ 0.7 ಡಿಗ್ರಿ ಸೆ. ಹಾಗೂ ರಾಜಸ್ಥಾನದ ಚುರುವಿನಲ್ಲಿ 1 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಡಾಲ್‌ಹೌಸಿಯಲ್ಲಿ 8.7 ಡಿಗ್ರಿ ಸೆ., ಧರ್ಮಶಾಲಾದಲ್ಲಿ 5.4 ಡಿಗ್ರಿ ಸೆ., ಶಿಮ್ಲಾದಲ್ಲಿ 6.2 ಡಿಗ್ರಿ ಸೆ., ಡೆಹರಾಡೂನ್‌ನಲ್ಲಿ 4.4 ಡಿಗ್ರಿ ಸೆ., ಮುಸ್ಸೂರಿಯಲ್ಲಿ 6.4 ಡಿಗ್ರಿ ಸೆ. ಮತ್ತು ನೈನಿತಾಲ್‌ನಲ್ಲಿ 6.5 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಈಶಾನ್ಯ ಭಾರತದಲ್ಲಿ ದಟ್ಟಮಂಜು ಕವಿದಿದ್ದು, ಇದು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಬದಲು ರಾಮನ ಹೊಸ ವಿಗ್ರಹ

ಕೆಟ್ಟ ಹವಾಮಾನದಿಂದಾಗಿ 30ಕ್ಕೂ ಹೆಚ್ಚು ವಿಮಾನಗಳು ಹಾಗೂ 26 ರೈಲುಗಳು ವಿಳಂಬಗೊಂಡಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಷ್ಣಾಂಶ ಮೈನಸ್‌ನಲ್ಲೇ ಮುಂದುವರೆದಿದ್ದು, ಗುರುವಾರಕ್ಕೆ ಹೋಲಿಸಿದರೆ ಸ್ವಲ್ಪ ಸುಧಾರಿಸಿದೆ. ಇಲ್ಲಿ ಕನಿಷ್ಠ ಉಷ್ಣಾಂಶ -5.5 ಡಿಗ್ರಿ ಸೆ. ದಾಖಲಾಗಿದ್ದರೆ, ಗರಿಷ್ಠ -4.3 ಡಿಗ್ರಿ ಸೆ.ನಷ್ಟು ದಾಖಲಾಗಿದೆ.

ಚಳಿಗೆ ಥರಗುಟ್ಟಿದ ಉತ್ತರ ಭಾರತ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟುಹೆಚ್ಚಾಗಿದ್ದು, ಜನರು ಮೈಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದಾರೆ. ದೆಹಲಿಯಲ್ಲಿ ಜನವರಿ ತಿಂಗಳಲ್ಲೇ 2 ವರ್ಷದ ಕನಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಳಿತಾಳಲಾರದೇ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ದೆಹಲಿಯಲ್ಲಿ ಉಷ್ಣಾಂಶ 3 ಡಿಗ್ರಿ ಸೆ.ಗೆ ಕುಸಿದಿದೆ. ಇದು ಜನವರಿ ತಿಂಗಳಿನಲ್ಲೇ 2 ವರ್ಷದ ಕನಿಷ್ಠವಾಗಿದೆ. ಬಹಳಷ್ಟು ಜನರು ಮನೆಯಿಂದ ಹೊರಗೇ ಬಾರದೇ ಹೀಟರ್‌ಗಳ ಮೊರೆ ಹೋಗಿದ್ದಾರೆ. ಅಲ್ಲದೇ ದೆಹಲಿಯಲ್ಲಿ ತೀವ್ರ ಮಂಜು ಮುಸುಕಿದ್ದು, ಗೋಚರತೆ 0-5 ಮೀ.ಗೆ ಕುಸಿದಿದೆ. ಹಾಗಾಗಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ನಿರಾಶ್ರಿತರಿಗೆ ಟೆಂಟ್‌ ತೆರೆಯಲಾಗಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಅರ್ಜಿ ತನಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ !

ಪಂಜಾಬ್‌ ಮತ್ತು ಹರ್ಯಾಣದಲ್ಲೂ ಸಹ ಉಷ್ಣಾಂಶ 2.2 ಡಿಗ್ರಿ ಸೆ.ವರೆಗೆ ಕುಸಿದಿದೆ. ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ತಾಪ 5 ಡಿಗ್ರಿಗಿಂತ ಕಡಿಮೆ ಇದೆ. ಜಮ್ಮು-ಕಾಶ್ಮೀರದಲ್ಲಿ ಉಷ್ಣಾಂಶ ಮೈನಸ್‌ಗೆ ತಲುಪಿದೆ. ಶ್ರೀನಗರದಲ್ಲಿ -6.4 ಡಿಗ್ರಿ ಸೆ., ಕುಪ್ವಾರದಲ್ಲಿ -6.2 ಡಿಗ್ರಿ ಸೆ., ಪಹಲ್ಗಾಂನಲ್ಲಿ - 9.2 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಈ ಶೀತಹೆವೆ ಇನ್ನೂ ಎರಡು ಮೂರು ದಿನ ಮುಂದುವರೆಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಸ್ಥಾನದಲ್ಲೂ ಸಹ ಹಲವು ಕಡೆ ಉಷ್ಣಾಂಶ -1.8 ಡಿಗ್ರಿ ಸೆ.ಗೆ ಕುಸಿದಿದೆ. ಚುರುವಿನಲ್ಲಿ ಅತಿ ಕಡಿಮೆ -1.5 ಡಿಗ್ರಿ ಸೆ.ಗೆ ಇಳಿಕೆಯಾಗಿದೆ.

click me!