
ತಿರುವನಂತಪುರಂ(ನ.13): ಪ್ರಾಣಿ ಹಾಗೂ ಕಲುಷಿತ ನೀರು/ಆಹಾರದ ಮೂಲಕ ಹರಡುವ ನೋರೋವೈರಸ್ (Norovirus) ಕೇರಳದ ವಯನಾಡಿನ (Wayanad) 13 ಜನರಲ್ಲಿ ಪತ್ತೆಯಾಗಿದೆ.
ದರೆಮ ನೋರೋ ವೈರಸ್ ಬಗ್ಗೆ ಆತಂಕ ಪಡಬೇಕಿಲ್ಲ. ಆದರೆ ಈ ಬಗ್ಗೆ ಜಾಗೃತರಾಗಿರಬೇಕು. ಕುಡಿಯುವ ನೀರಿನ (Drinking Water) ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಿ 3-4 ದಿನಗಳಲ್ಲಿ ಗುಣಮುಖ ಮಾಡಬಹುದು ಎಂದು ಆರೋಗ್ಯ ಸಚಿವೆ ವೀಣಾ ಜಾಜ್‌ರ್ ಶುಕ್ರವಾರ ತಿಳಿಸಿದ್ದಾರೆ.
ಅಪರೂಪದ ನೋರೋವೈರಸ್ ಸೋಂಕು ವಯಾನಾಡ್ ಜಿಲ್ಲೆಯ ಪೂಕೋಡ್ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಲ್ಲಿ 2 ವಾರಗಳ ಹಿಂದೆ ಕಾಣಿಸಿಕೊಂಡಿತ್ತು.
ನೋರೋವೈರಸ್‌ಗೆ (Norovirus) ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೊಸದಾಗಿ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲವಾದರೂ, ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪಶುವೈದ್ಯಕೀಯ ವಿಜ್ಞಾನ ಕಾಲೇಜು (Acience College) ವಿದ್ಯಾರ್ಥಿಗಳ ಡೇಟಾ ಬೇಸ್‌ನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕ್ಯಾಂಪಸ್ ನಿಂದ ಹೊರಗೆ ಇರುವ ಹಾಸ್ಟೆಲ್ ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಪೈಕಿ ಮೊದಲ ಪ್ರಕರಣ ವರದಿಯಾಗಿದೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು, ಎನ್ ಐವಿ ಗೆ ಕಳಿಸಿದ್ದಾರೆ. ನೋರೋವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ನೋರೋವೈರಸ್ ಎಂಬುದು ವೈರಸ್ಸುಗಳ ಒಂದು ಗುಂಪು. ಇದು ಹೊಟ್ಟೆಮತ್ತು ಕರುಳನ್ನು ಹೆಚ್ಚಾಗಿ ಬಾಧಿಸುತ್ತದೆ. ತೀವ್ರ ತರದ ವಾಂತಿ ಮತ್ತು ಭೇದಿಗೆ ಕಾರಣವಾಗುತ್ತದೆ. ಇದು ಆರೋಗ್ಯವಂತರನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ಆದರೆ ಮಕ್ಕಳು ಮತ್ತು ವಿವಿಧ ಕಾಯಿಲೆ ಇರುವವರನ್ನು ಈ ವೈರಸ್ ಬೇಗ ಆಕ್ರಮಣ ಮಾಡುತ್ತದೆ. ಪ್ರಾಣಿಗಳ ಮೂಲಕ ಹರಡುವ ವೈರಸ್, ಸೋಂಕಿತರ ಮನುಷ್ಯರ ನೇರ ಸಂಪರ್ಕದ ಮೂಲಕವೂ ಹರಡುತ್ತದೆ.
ಲಕ್ಷಣಗಳೇನು?:
ಅತಿಸಾರ ಭೇದಿ, ಹೊಟ್ಟೆನೋವು, ವಾಂತಿ, ನಿಶ್ಯಕ್ತಿ, ಜ್ವರ, ತಲೆನೋವು, ಮೈಕೈ ನೋವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ