ಕಡಲೆ ಕಾಳು ಸ್ಟೌವ್‌‌ನಲ್ಲಿಟ್ಟು ಮರೆತ ಇಬ್ಬರಿಗೆ ಗಡದ್ ನಿದ್ದೆ, ನಡೆದೆ ಹೋಯಿತು ದುರಂತ!

Published : Jan 12, 2025, 11:29 AM IST
ಕಡಲೆ ಕಾಳು ಸ್ಟೌವ್‌‌ನಲ್ಲಿಟ್ಟು ಮರೆತ ಇಬ್ಬರಿಗೆ ಗಡದ್ ನಿದ್ದೆ, ನಡೆದೆ ಹೋಯಿತು ದುರಂತ!

ಸಾರಾಂಶ

ನಾಳೆ ಬೆಳಗ್ಗೆ ತಿಂಡಿಗೆ ಚೋಲೆ ಬಟುರೆ ಮಾಡಬೇಕು ಎಂದು ಕಡಲೆ ಕಾಳು ಸ್ಟೌವ್‌ನಲ್ಲಿ ಇಟ್ಟಿದ್ದಾರೆ. ಆದರೆ ಇಬ್ಬರಿಗೂ ಮರತೆ ಹೋಗಿದೆ. ಹಾಗೇ ಮಾತನಾಡುತ್ತಾ ನಿದ್ದೆಗೆ ಜಾರಿದ್ದಾರೆ. ಆದರೆ ಚೋಲೆ ಬಟುರೆ ಈ ಮಟ್ಟದ ದುರಂತಕ್ಕೆ ಕಾರಣಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ.

ನೋಯ್ಡ(ಜ.12) ಟಿಪಿಕಲ್ ಬ್ಯಾಚ್ಯುಲರ್ ರೂಂ. ಬೆಳಗ್ಗೆ ತಿಂಡಿ ಮಾಡಬೇಕು, ಕೆಲಸಕ್ಕೆ ಹೊರಡಬೇಕು. ಸದ್ಯ ಚಳಿ ನೋಡಿದರೆ ಬೆಳಗ್ಗೆ ಏಲಲು ಮನಸ್ಸಾಗುವುದಿಲ್ಲ. ಹೀಗಾಗಿ ಬೆಳಗಿನ ತಿಂಡಿಗೆ ರಾತ್ರಿಯ ಒಂದಷ್ಟು ಕೆಲಸ ಮಾಡಿದರೆ ಬೆಳಗ್ಗೆ ಎದ್ದು ಸುಲಭವಾಗಿ ತಿಂಡಿ ಮಾಡಿ ಕೆಲಸಕ್ಕೆ ತೆರಳಬಹುದು ಅನ್ನೋದು ಹಲವು ಬ್ಯಾಚುಲರ್ಸ್ ಮಂದಿಯ ಫಾರ್ಮುಲಾ. ಇದೇ ರೀತಿ ಇಬ್ಬರು ಬೆಳಗ್ಗೆ ಚೋಲೆ ಬಟುರೆ ಮಾಡಲು ರಾತ್ರಿಯೇ ಕಡಲೆ ಬೇಯಿಸಿದರೆ, ಬೆಳಗ್ಗೆ ಹೆಚ್ಚು ಹೊತ್ತುಬೇಕಿಲ್ಲ. ಹೀಗಾಗಿ ಇಬ್ಬರು ಕಡಲೆ ಕಾಳನ್ನು ತೊಳೆದು ಬೇಯಿಸಲು ಸ್ಟೌವ್ ಮೇಲೆ ಇಟ್ಟಿದ್ದಾರೆ. ಮಾತನಾಡುತ್ತಾ ಹಾಗೇ ಮರತೆ ನಿದ್ದೆಗೆ ಜಾರಿದ್ದಾರೆ. ಆದರೆ ಬೆಳಗ್ಗೆಯಾದಾಗ ಘನಘೋರ ದುರಂತ ನಡೆದಿತ್ತು. ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಚೋಲೇ ಬಟುರೆ ತಂದ ಸಾವು
22 ವರ್ಷದ ಉಪೇಂದ್ರ ಹಾಗೂ 23 ವರ್ಷದ ಶಿವಂ ಇಬ್ಬರು ಮೃತ ದುರ್ದೈವಿಗಳು. ಬಸಾಯಿ ವಲಯದಲ್ಲಿ ಬಾಡಿಗೆ ಮನೆಯಲ್ಲಿದ್ದ ಇಬ್ಬರು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದರು. ಸಂಜೆ ವರೆಗೂ ಕೆಲಸ, ಬಳಿಕ ಮನೆಗೆ ಮರಳಿ ರಾತ್ರಿಯ ಆಹಾರ ತಯಾರಿಸುತ್ತಿದ್ದರು. ಇದು ಎಂದಿನ ಪ್ರಕ್ರಿಯೆ ಆಗಿತ್ತು.  ಹೀಗೆ ಸಂಜೆ ಮನೆಗೆ ಮರಳುವಾಗ ಸೂಪರ್ ಮಾರ್ಕೆಟ್‌ನಿಂದ ಮರು ದಿನ ಬೆಳಗಿನ ತಿಂಡಿಗೆ ಚೋಲೆ ಕುಲ್ಚಾ ಹಾಗೂ ಬಟುರೆ ಖರೀದಿಸಿ ತಂದಿದ್ದಾರೆ. ಮನೆಗೆ ಬಂದ ಇಬ್ಬರು ರಾತ್ರಿಯ ಊಟ ತಯಾರಿಸಿದ್ದಾರೆ. ಬಳಿಕ ಊಟ ಮಾಡಿದ್ದಾರೆ. ಮರು ದಿನ ಬೆಳಗ್ಗೆ ಚೋಲೆ ಬಟುರೆ ತಯಾರಿಸಲು ಹೆಚ್ಚಿನ ಸಮಯ ಬೇಕಿದೆ. ಇದಕ್ಕಾಗಿ ತೀವ್ರ ಚಳಿಯಲ್ಲಿ ಅತೀ ಬೇಗನೆ ಎದ್ದು ತಿಂಡಿ ತಯಾರಿಸುವುದು ಪ್ರಯಾಸದ ಕೆಲಸ.

Vijayapura Highway: ಅಡುಗೆ ಸ್ಟೌವ್‌ ಸಿಡಿದು ಸುಟ್ಟು ಭಸ್ಮವಾದ ಪ್ಲೈವುಡ್ ಸಾಗಣೆ ಲಾರಿ!

ಇದಕ್ಕಾಗಿ ಇಬ್ಬರು ಕಡಲೆ ಕಾಳನ್ನು ತೊಳೆದು ರಾತ್ರಿಯೇ ಬೇಯಿಸಿಕೊಂಡರೆ, ಬೆಳಗ್ಗೆ ಕೆಲ ಹೊತ್ತಿನ ಕೆಲಸ ಮಾತ್ರ. ಹೀಗಾಗಿ ಗ್ಯಾಸ್ ಸ್ಟೌವ್‌ನಲ್ಲಿ ಚೋಲೆ ಬಟುರು ಬೇಯಲು ಇಟ್ಟಿದ್ದಾರೆ. ಕಡಲೆ ಕಾಳು ಬೇಯಲು ಒಂದಷ್ಟು ಹೊತ್ತು ಬೇಕಿದೆ. ಹೀಗಾಗಿ ಇಬ್ಬರು ಮಾತನಾಡುತ್ತಾ ಕುಳಿತಿದ್ದಾರೆ. ಆದರೆ ತೀವ್ರ ನಿದ್ದೆ ಹತ್ತುಬಿಟ್ಟಿದೆ. ಮಾತನಾಡುತ್ತಾ ನಿದ್ದೆಗೆ ಜಾರಿದ್ದರೆ. 

ಇತ್ತ ಸ್ಟೌವ್‌ನಲ್ಲಿ ಚೋಲೆ ಬಟುರೆ ಇಟ್ಟಿರುವುದು ಮರೆತಿದ್ದಾರೆ. ಗಡದ್ ನಿದ್ದೆಯಿಂದ ಇಬ್ಬರಿಗೂ ಎಚ್ಚರವಾಗಿಲ್ಲ. ಇತ್ತ ಚೋಲೆ ಬಟುರೆ ಬೇಯುತ್ತಾ ನೀರು ಆವಿಯಾಗಿದೆ. ಸುಡಲು ಆರಂಭಿಸಿದೆ. ಹೊಗೆ ಆವರಿಸಲು ಆರಂಭಿಸಿದೆ. ಬಾಡಿಕೆ ಕೋಣೆಯ ಕಿಟಕಿ ತೆರೆದಿದ್ದರೂ ದಟ್ಟ ಹೊಗೆ ಕಾಣಿಸಿಕೊಂಡಿದೆ. ತಡ ರಾತ್ರಿಯಾದ ಕಾರಣ ಅಕ್ಕ ಪಕ್ಕದ ಮನೆಯವರಿಗೂ ತಿಳಿಯಲಿಲ್ಲ. ಗ್ಯಾಸ್ ಸ್ಟೌವ್ ಕೂಡ ಬಿಸಿಯಾಗಿದೆ. ಇತ್ತ ಪಾತ್ರೆ ತಳ ಹಿಡಿದಿದೆ. ಹೊಗೆ ಇವೆಲ್ಲವೂ ವಿಷಪೂರಿತ ಗಾಳಿಯಾಗಿ ಮಾರ್ಪಟ್ಟಿದೆ. ಇದೇ ಗಾಳಿಯನ್ನು ನಿದ್ದೆಯಲ್ಲಿ ಸೇವಿಸಿದ ಇಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗುತ್ತಿದ್ದಂತೆ ಎಚ್ಚರಗೊಂಡರೂ ಮೇಲೆಳುವ, ಕೂಗಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಬೆಳಗಿನ ಜಾವ ಪಕ್ಕದ ಮನೆಯವರಿಗೆ ವಾಸನೆ ಬರಲು ಆರಂಭಿಸಿದೆ. ಎದ್ದು ನೋಡಿದಾಗ ದಟ್ಟ ಹೊಗೆ ಕಾಣಿಸಿಕೊಂಡಿದೆ. ಬಾಗಿಲು ಬಡಿದರೂ ಯಾರೂ ಏಳುತ್ತಿಲ್ಲ. ಹೀಗಾಗಿ ಬಾಗಿಲು ಮುರಿದು ಮನೆಯ ಒಳಗೆ ಪ್ರವೇಶಿಸಿದ್ದಾರೆ. ಈವೇಳೆ ಇಬ್ಬರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕಾಲ ಮಿಂಚಿತ್ತು. ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ವಿಷಪೂರಿತ ಹೊಗೆ ಸೇವನೆಯಿಂದ ಇಬ್ಬರು ಅಸ್ವಸ್ಥರಾಗಿದ್ದಾರೆ. ಇದು ದುರಂತಕ್ಕೆ ಕಾರಣಾಗಿದೆ ಎಂದಿದ್ದರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ,ಆಪತ್ತು ಗ್ಯಾರಂಟಿ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು