Munugode Bypoll: ಮತ ಹಾಕದಿದ್ದರೆ ಕಲ್ಯಾಣ ಯೋಜನೆ ಇಲ್ಲ ಎಂದಿದ್ದ ಸಚಿವರಿಗೆ ಚುನಾವಣಾ ಆಯೋಗ ಶಾಕ್..!

Published : Oct 29, 2022, 10:01 PM ISTUpdated : Oct 29, 2022, 10:04 PM IST
Munugode Bypoll: ಮತ ಹಾಕದಿದ್ದರೆ ಕಲ್ಯಾಣ ಯೋಜನೆ ಇಲ್ಲ ಎಂದಿದ್ದ ಸಚಿವರಿಗೆ ಚುನಾವಣಾ ಆಯೋಗ ಶಾಕ್..!

ಸಾರಾಂಶ

ಜನರು ಬಿಆರ್‌ಎಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಸಚಿವರು ಬೆದರಿಕೆ ಹಾಕಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿತ್ತು. ಈ ಹಿನ್ನೆಲೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. 

ಮತ ಹಾಕದಿದ್ದರೆ (ಕಲ್ಯಾಣ) ಯೋಜನೆ ಇಲ್ಲ (No Vote No Scheme) ಎಂದು ಮತದಾರರಿಗೆ ಬೆದರಿಕೆ ಹಾಕಿದ್ದ ತೆಲಂಗಾಣದ (Telangana) ಸಚಿವರಿಗೆ ಚುನಾವಣಾ ಆಯೋಗ (Election Commission)  ಶಾಕ್‌ ನೀಡಿದೆ. ತೆಲಂಗಾಣ ಇಂಧನ ಸಚಿವ ಜಗದೀಶ್ ರೆಡ್ಡಿ (Telangana Energy Miniter Jagadish Reddy) ಅವರು ಮುನುಗೋಡು ಉಪಚುನಾವಣೆ (Munugode Bypoll) ಪ್ರಚಾರ ಮಾಡದಂತೆ ಚುನಾವಣಾ ಆಯೋಗವು ನಿಷೇಧಿಸಿ ಆದೇಶ ಹೊರಡಿಸಿದೆ. ಅಕ್ಟೋಬರ್ 29 ರಂದು ಸಂಜೆ 7.00 ರಿಂದ 48 ಗಂಟೆಗಳ ಕಾಲ ಜಗದೀಶ್ ರೆಡ್ಡಿ ಅವರು ಯಾವುದೇ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು, ರ್ಯಾಲಿ, ರೋಡ್ ಶೋಗಳು ಮತ್ತು ಸಂದರ್ಶನಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. 

ಅಕ್ಟೋಬರ್ 25 ರಂದು ನಡೆದಿದ್ದ ಸಾರ್ವಜನಿಕ ಭಾಷಣವೊಂದರಲ್ಲಿ  ಜಗದೀಶ್ ರೆಡ್ಡಿ ಅವರು ಮುನುಗೋಡು ಉಪಚುನಾವಣೆಯಲ್ಲಿ ಕಾರ್ ಚಿಹ್ನೆಗೆ (ಬಿಆರ್‌ಎಸ್ ಚುನಾವಣಾ ಚಿಹ್ನೆ) ಮತ ನೀಡದಿದ್ದರೆ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಹೇಳಿದ್ದರು. 

ಇದನ್ನು ಓದಿ: ಮೋದಿ ವಿರುದ್ಧ ರಣಕಹಳೆ ಊದಿದ TRSಗೆ ಹಿನ್ನಡೆ, ಪ್ರಮುಖ ನಾಯಕ ರಾಜೀನಾಮೆ!

ಅಲ್ಲದೆ, ‘’ಈ ಚುನಾವಣೆ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಮತ್ತು ರಾಜಗೋಪಾಲ್ ರೆಡ್ಡಿ ನಡುವೆ ಅಲ್ಲ, ಇದು 2 ಸಾವಿರ ಪಿಂಚಣಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ, ಇದು ರೈತ ಬಂಧು ಮುಂದುವರಿಸಬೇಕೋ ಬೇಡವೋ, 24 ಗಂಟೆಗಳ ಉಚಿತ ಕರೆಂಟ್ ಮುಂದುವರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಹಾಗೂ, ಅಂಗವಿಕಲರಿಗೆ 3,000 ರೂಪಾಯಿ ಪಿಂಚಣಿ ಮುಂದುವರಿಸಬೇಕೋ ಬೇಡವೋ, ಯೋಜನೆ ಮುಂದುವರಿಸಲು ಇಚ್ಛಿಸುವವರು ಕಾರಿಗೆ ಮತ ನೀಡಿ ಕೆಸಿಆರ್‌ ಜತೆ ನಿಲ್ಲಬಹುದು. ಮೋದಿ ಜೀ 3,000 ರೂ. ಪಿಂಚಣಿ ಬೇಡ ಎಂದಿದ್ದರೂ, ಖಂಡಿತ ಕೊಡುತ್ತೇನೆ ಎಂದು ಕೆಸಿಆರ್ ಹೇಳಿದರು. ಯಾರಿಗಾದರೂ ಪಿಂಚಣಿ ಬಗ್ಗೆ ಆಸಕ್ತಿಯಿಲ್ಲದಿದ್ದರೆ ಅವರು ಮೋದಿಗೆ ಮತ ಹಾಕಬಹುದು, ಯಾರಿಗಾದರೂ ಈ ಯೋಜನೆಗಳು ಬೇಕಿದ್ದರೆ ಕೆಸಿಆರ್‌ಗೆ ಮತ ನೀಡಿ ಎಂದೂ ಸಚಿವರು ವಿವಾದಾತ್ಮಕ ಭಾಷಣ ಮಾಡಿದ್ದರು. 

ಈ ಹಿನ್ನೆಲೆ, ಬಿಜೆಪಿಯ ಕಪಿಲವಾಯಿ ದಿಲೀಪ್ ಕುಮಾರ್ ಅವರು ಜಗದೀಶ್‌ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದರು. ಜನರು ಬಿಆರ್‌ಎಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಸಚಿವರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದರು. ಚುನಾವಣಾ ಆಯೋಗವು ಈ ದೂರನ್ನು ಪರಿಗಣಿಸಿದ್ದು, ಶನಿವಾರ ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಸಚಿವ ಜಗದೀಶ್‌ ರೆಡ್ಡಿಗೆ ನೋಟಿಸ್‌ ನೀಡಿತ್ತು. 

ಇದನ್ನೂ ಓದಿ: ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷ ‘BRS’ ಉದಯ: ತೆಲಂಗಾಣ ಸಿಎಂ KCR ಜತೆ ಮಾಜಿ ಸಿಎಂ ಎಚ್‌ಡಿಕೆ ಭಾಗಿ..!

ಈ ಸಂಬಂಧ ತೆಲಂಗಾಣ ಸಚಿವ ಜಗದೀಶ್‌ ರೆಡ್ಡಿ ಕೆಂದ್ರ ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೂ, ಅವರ ಉತ್ತರದಿಂದ ತೃಪ್ತರಾಗದ ಆಯೋಗ 2 ದಿನಗಳ ಯಾವುದೇ ಭಾಷಣ, ಪ್ರಚಾರ ಮಾಡದಂತೆ ಆದೇಶ ಹೊರಡಿಸಿ ಶಾಕ್‌ ನೀಡಿದೆ.

ತೆಲಂಗಾಣದ ಮುನುಗೋಡಿನಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಕೆಸಿಆರ್‌ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್‌..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ