ಯೋಗಿ ಇಲ್ಲದೆ ಯುಪಿ ಇಲ್ಲ, ಸಂಜಯ್ ಹೇಳಿಕೆಯಿಂದ ಆಪ್ತ ರಾಹುಲ್ ಗಾಂಧಿ, ಅಖಿಲೇಶ್ ಯಾದವ್‌ಗೆ ದಿಗಿಲು

Published : Nov 27, 2026, 01:52 PM IST
UP Cannot Exist Without Yogi

ಸಾರಾಂಶ

ಉತ್ತರ ಪ್ರದೇಶ ನಿಂತಿರುವುದೇ ಯೋಗಿ ಆದಿತ್ಯನಾಥ್ ಮೇಲೆ. ಯೋಗಿ ಇಲ್ಲದೆ ಉತ್ತರ ಪ್ರದೇಶವಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಸದಾ ಮೋದಿ ಹಾಗೂ ಬಿಜೆಪಿ ವಿರುದ್ಧ ಹೇಳಿಕೆ ನೀಡುವ ಸಂಜಯ್ ಇದೀಗ ಯೋಗಿ ಪರ ಬ್ಯಾಟ್ ಬೀಸಿದ್ದೇಕೆ?

ಮುಂಬೈ (ನ.27) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇದರ ನಡುವೆ ಬಿಜೆಪಿ ಪಾಳಯದಲ್ಲಿ ಯೋಗಿ ಆದಿತ್ಯನಾಥ್ ಬದಲು ಹೊಸ ಮುಖ್ಯಮಂತ್ರಿ ಅಭ್ಯರ್ಥಿ ಚರ್ತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಶಿವಸೇನಾ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ. ಯೋಗಿ ಇಲ್ಲದೆ ಉತ್ತರ ಪ್ರದೇಶವೇ ಇಲ್ಲ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಹಿಂದುತ್ವತ ಅತ್ಯುನ್ನತ ಮುಖವಾಗಿದ್ದಾರೆ. ಚುನಾವಣೆ ಬಳಿಕ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗು ಮಂದುವರಿಯುವ ವಿಶ್ವಾಸವಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಮೂಲಕ ಶಿವಸೇನೆ ಉದ್ಧವ್ ಬಣದ ಮೈತ್ರಿ ಪಕ್ಷ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಭಾಗವಾಗಿರುವ ಸಮಾಜವಾದಿ ಪಾರ್ಟಿಗೆ ಶಾಕ್ ನೀಡಿದ್ದಾರೆ.

ಸಂಜಯ್ ರಾವತ್ ಸ್ಫೋಟಕ ಹೇಳಿಕೆ

ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಬೇಕು. ಯೋಗಿಜಿಯನ್ನು ಮುಖ್ಯಮಂತ್ರಿ ಮುಖವಾಗಿ ಘೋಷಿಸಿಕೊಂಡಿದ್ದರೆ ಉತ್ತಮವಾಗಿತ್ತು. ಯೋಗಿ ಆದಿತ್ಯನಾಥ್ ಸಮರ್ಥ ವ್ಯಕ್ತಿ. ಯೋಗಿ ಇಲ್ಲದಿದ್ದರೆ ಉತ್ತರ ಪ್ರದೇಶವಿಲ್ಲ. ನಮಗೆ ಯೋಗಿ ಮೇಲೆ ಪ್ರೀತಿ ಹಾಗೂ ಗೌರವವಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಹೊಸದಾಗಿ ಆಯ್ಕೆಯಾಗುವ ಶಾಸಕರು ಯೋಗಿ ಆದಿತ್ಯನಾಥ್ ಅವರನ್ನೇ ಮುಖ್ಯಮಂತ್ರಿಯಾಗಿ ಬೆಂಬಲಿಸುವ ವಿಶ್ವಾಸವಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ನೀಡಿದ ಹೇಳಿಕೆಯಿಂದ ಯುಪಿಯಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಉತ್ತರ ಪ್ರದೇಶ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಲಿದೆ ಅನ್ನೋ ಪ್ರಶ್ನೆ ಎದುರಾಗಿತ್ತು. ಈ ವೇಳೆ ಉತ್ತರಿಸಿದ ಕೇಶವ್ ಪ್ರಸಾದ್ ಮೌರ್ಯ, ಬಿಜೆಪಿ ವೈಯುಕ್ತಿಕ ಮುಖಗಳಲ್ಲ, ಬಿಜೆಪಿ ಕಮಲದ ಚಿಹ್ನೆ ಮುಖದ ಆಧಾರದಲ್ಲಿ ಚುನಾವಣೆ ಎದುರಿಸುತ್ತದೆ. ಚುನಾವಣೆ ಬಳಿಕ ಯುಪಿ ಸಿಎಂ ಯಾರು ಅನ್ನೋದು ನಿರ್ಧರಿಸಲಾಗುತ್ತದೆ ಎಂದಿದ್ದರು. ಇದೇ ವೇಳೆ ತಾವು ಯುಪಿ ಸಿಎಂ ಆಕಾಂಕ್ಷಿ ಅನ್ನೋ ಪ್ರಶ್ನೆಗೂ ಉತ್ತರಿಸಿದ್ದರು. ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಒಳಗಿಂದ ಒಳಗೆ ಆಸೆ ಬಿಚ್ಚಿಟ್ಟಿದ್ದರು.

ಈ ಹೇಳಿಕೆಯಿಂದ ಮುಂದಿನ ಚುನಾವಣೆಗೆ ಯೋಗಿ ಬದಲು ಹೊಸ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಂಜಯ್ ರಾವತ್ ಯೋಗಿ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಯೋಗಿ ಪರ ಹೇಳಿಕೆ ನೀಡುವ ಭರದಲ್ಲಿ ತಮ್ಮದೇ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿಯನ್ನು ಕಡೆಗಣಿಸಿದ್ದಾರೆ. ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ಯುಪಿ ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಸಂಜಯ್ ರಾವತ್ ನೇರವಾಗಿ ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೆನ್ಸನ್‌ ಬಳಿಕ ಎನ್‌ವಿಡಿಯಾದಲ್ಲಿ ಚೀನಾ ನಂಟಿನ ಹೊಸ ವಿವಾದ: ಸಿಇಒ ರೇಸ್‌ನಲ್ಲಿದ್ದ ಭಾರತೀಯ ಮೂಲದ ಜೈ ಪುರಿ ಜತೆ ಚೀನಿ ಮಹಿಳೆ ಮದುವೆ!
9ನೇ ವಯಸ್ಸಿನಲ್ಲಿ ಬಾತ್‌ರೂಮ್‌ನಲ್ಲಿ ವಿಡಿಯೋ, 16ಕ್ಕೆ ಪುಟಿನ್ ಜೊತೆ ಸೆಲ್ಫಿ; ಭಾರತದ AI ಕಿಡ್