ಈದ್‌ಗೂ ಮುನ್ನ ಯೋಗಿ ಖಡಕ್ ಆದೇಶ, ಆಚರಣೆ ನೆಪದಲ್ಲಿ ರಸ್ತೆ, ಸಂಚಾರ ಅಡ್ಡಿಗೆ ಅವಕಾಶವಿಲ್ಲ!

By Suvarna NewsFirst Published Apr 19, 2023, 9:01 PM IST
Highlights

ಈದ್ ಆಚರಣೆಗೆ ತಯಾರಿ ನಡೆಯುತ್ತಿದೆ. ಇದಕ್ಕೂ ಮೊದಲೇ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಆದೇಶ ಜಾರಿ ಮಾಡಿದ್ದಾರೆ. ಯಾವುದೇ ಧಾರ್ಮಿಕ ಕಾರ್ಯಕ್ರಮ ಆಚರಣೆ ನೆಪದಲ್ಲಿ ರಸ್ತೆಗಳು, ಸಂಚಾರಕ್ಕೆ ಅಡ್ಡಿಪಡಿಸಲು ಅವಕಾಶವಿಲ್ಲ ಎಂದಿದ್ದಾರೆ.
 

ಲಖನೌ(ಏ.19): ಉತ್ತರ ಪ್ರದೇಶದಲ್ಲಿ ಪ್ರತಿ ಹಬ್ಬ, ಪ್ರತಿ ಆಚರಣೆಗೂ ಮುನ್ನ ಸರ್ಕಾರ ಖಡಕ್ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದೆ. ಇದರಿಂದ ಇತರ ರಾಜ್ಯಗಳಲ್ಲಿ ಸೃಷ್ಟಿಯಾಗುತ್ತಿರುವ ಗಲಭೆಗಳು ಉತ್ತರ ಪ್ರದೇಶದಲ್ಲಿ ಆಗುತ್ತಿಲ್ಲ. ಇದೀಗ ಈದ್ ಹಾಗೂ ಅಕ್ಷಯ ತೃತೀಯ ಹಬ್ಬ ಆಚರಣೆಗೆ ದೇಶ ಸಜ್ಜಾಗುತ್ತಿದೆ.ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಖಡಕ್ ಆದೇಶ ನೀಡಿದ್ದಾರೆ. ಯಾವುದೇ ಹಬ್ಬದ ಆಚರಣೆ, ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ರಸ್ತೆಗಳನ್ನು ಬಂದ್ ಮಾಡುವಂತಿಲ್ಲ, ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಯಾವುದೇ ಅಚರಣೆಗಳನ್ನು ನಿಗದಿತ ಸ್ಥಳಗಳಲ್ಲೇ ಮಾಡಬೇಕು. ರಸ್ತೆ ಅಡ್ಡಗಟ್ಟಿ ಯಾವುದೇ ಆಚರಣೆಗೆ ಅವಕಾಶವಿಲ್ಲ ಎಂದಿದ್ದಾರೆ.

ಈದ್ ಹಬ್ಬದ ಆಚರಣೆಗೆ ಕೆಲ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಇದಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇಂದು ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್, ಉತ್ತರ ಪ್ರದೇಶ ಡೈರೆಕ್ಟರ್ ಜನರಲ್ ಪೊಲೀಸ್ ವಿಶ್ವಕರ್ಮ ಸೇರಿದಂತೆ ಹಲವು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಯೋಗಿ ಆದಿತ್ಯನಾಥ್ ಖಡಕ್ ಸೂಚನೆ ನೀಡಿದ್ದಾರೆ.

Latest Videos

ಮಾಫಿಯಾ , ಕ್ರಿಮಿನಲ್ಸ್ ಕೆಮ್ಮಿದ್ರೆ...ಸರಣಿ ಎನ್‌ಕೌಂಟರ್ ಬಳಿಕ ಯೋಗಿ ಮತ್ತೊಂದು ವಾರ್ನಿಂಗ್!

ಧಾರ್ಮಿಕ ಕೇಂದ್ರಗಳ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲು ಯೋಗಿ ಸೂಚಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳು, ಕೋಮು ಸೌಹಾರ್ಧತೆ ಕದಡಬಲ್ಲ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಆಯಾ ನಿಗದಿತ ಸ್ಥಳಗಳಲ್ಲೇ ಮಾಡಬೇಕು. ಅದನ್ನು ರಸ್ತೆಯಲ್ಲಿ ಮಾಡಲು ಅವಕಾಶವಿಲ್ಲ. ಇನ್ನು ಧಾರ್ಮಿಕ ಮೆರವಣಿಗೆ ಸೇರಿದಂತೆ ಯಾವುದೇ ಮೆರವಣಿಗೆ ತೆರಳಲು ಪೂರ್ವವಾಗಿ ಅನುಮತಿ ಪಡೆದಿರಬೇಕು. ಈ ಮೆರವಣಿಗೆಯಲ್ಲಿ ಸೇರಲಿರುವ ಜನ, ಮರೆವಣಿಗೆ ಹೋಗುವ ದಾರಿ, ಮೆರವಣಿಗೆಯಲ್ಲಿ ಬಳಸುವ ಜಯಘೋಷಗಳು ಎಲ್ಲವೂ ಮೊದಲೇ ನಿರ್ಧರಿಸಿ ಸೂಚಿಸಬೇಕು. ನಿಗದಿಪಡಿಸಿದ ಘೋಷವಾಕ್ಯಕ್ಕಿಂತ ಬೇರೆ ಘೋಷವಾಕ್ಯಗಳನ್ನು ಕೂಗುವುದು, ಸೌಹಾರ್ಧತೆಗೆ ಅಡ್ಡಿಪಡಿಸುವುದಕ್ಕೆ ಉತ್ತರ ಪ್ರದೇಶದಲ್ಲಿ ಅವಕಾಶವಿಲ್ಲ ಎಂದು ಯೋಗಿ ಸೂಚಿಸಿದ್ದಾರೆ.

ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವ, ಇತಿಹಾಸವಿರುವ ಮೆರವಣಿಗೆಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೊಸ ಮೆರವಣಿಗೆ, ಹೊಸ ಆಚರಣಾ ಮೆರವಣಿಗೆ ಯಾವುದೇ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. 

ಮೇ.4ರಂದು ಉಡುಪಿಗೆ ಮಾಫಿಯಾ ಮಟ್ಟಹಾಕಿದ ಯೋಗಿ ಆದಿತ್ಯನಾಥ್, ಭಾರಿ ಬಿಗಿ ಭದ್ರತೆ!

ಮಾಫಿಯಾದವರು ಯಾರನ್ನು ಬೆದರಿಸಲು ಸಾಧ್ಯವಿಲ್ಲ, ಯೋಗಿ
ಈಗ ಉತ್ತರಪ್ರದೇಶದಲ್ಲಿ ಮಾಫಿಯಾದವರು ಯಾರನ್ನು ಬೆದರಿಸಲು ಸಾಧ್ಯವಿಲ್ಲ. ಮೊದಲು ಯಾರು ಯುಪಿಗೆ ಭಯ ಹುಟ್ಟಿಸಿದ್ದರೂ, ಅವರಿಗೆ ಇಂದು ಯುಪಿ ಭಯ ಹುಟ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ.ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರನ ಹತ್ಯೆಯ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ, ‘2017ಕ್ಕೂ ಮೊದಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆದರೆ 2017ರಿಂದ 2023ರವರೆಗೆ ರಾಜ್ಯದಲ್ಲಿ ಯಾವುದೇ ದಂಗೆಗಳು ನಡೆದಿಲ್ಲ. ನಿಷೇದಾಜ್ಞೆ ವಿಧಿಸಬೇಕಾದಂತಹ ಪರಿಸ್ಥಿತಿಗಳು ನಿರ್ಮಾಣವಾಗಿಲ್ಲ ಎಂದು ಹೇಳಿದರು.

click me!