ಪಕ್ಷಗಳ ದೇಣಿಗೆ ವಿವರ ಬಹಿರಂಗ ಮಾಡಲ್ಲ: ಮಾಹಿತಿ ಹಕ್ಕು ಆಯೋಗ!

By Suvarna NewsFirst Published Dec 23, 2020, 9:12 AM IST
Highlights

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಗೊಳಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ| ಪಕ್ಷಗಳ ದೇಣಿಗೆ ವಿವರ ಬಹಿರಂಗ ಮಾಡಲ್ಲ| ಮಾಹಿತಿ ಹಕ್ಕು ಆಯೋಗ

ನವದೆಹಲಿ(ಡಿ.23): ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಗೊಳಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಹೇಳಿರುವ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ), ಈ ಸಂಬಂಧ ಸಲ್ಲಿಸಿದ್ದ ಅರ್ಜಿಯೊಂದನ್ನು ತಿರಸ್ಕರಿಸಿದೆ.

ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿಹಾರ್‌ ದುರ್ವೆ ಎನ್ನುವವರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದವರ ವಿವರ ಹಾಗೂ ಎಲೆಕ್ಟೋರಲ್‌ ಬಾಂಡ್‌ಗಳ ವಿವರಗಳನ್ನು ಒದಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಮುನ್ನ ಅವರಿಗೆ ಎಲೆಕ್ಟೋರಲ್‌ ಬಾಂಡ್‌ಗಳ ಮಾಹಿತಿಯನ್ನು ನೀಡಲು ಎಸ್‌ಬಿಐ ನಿರಾಕರಿಸಿತ್ತು. ಹೀಗಾಗಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಬಾಂಡ್‌ಗಳ ಮಾಹಿತಿಯನ್ನು ಎಸ್‌ಬಿಐ ಬಹಿರಂಗಪಡಿಸಬೇಕು ಎಂದು ಕೇಳಿದ್ದರು.

ಆದರೆ, ಬಾಂಡ್‌ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡುವುದು ಬ್ಯಾಂಕಿನ ಕರ್ತವ್ಯವಾಗಿದ್ದು, ವಿವರಗಳನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ಮಾಹಿತಿ ಆಯೋಗ ತಿಳಿಸಿದೆ.

click me!