
ಬೆಂಗಳೂರು(ಮೇ.06) ಕೇಂದ್ರ ಗೃಹ ಸಚಿವಾಲಯ ನೀಡಿದ ಸೂಚನೆಯಂತೆ ನಾಳೆ ದೇಶಾದ್ಯಂತ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ನಡೆಯಲಿದೆ. ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ನಡೆಸಲು ಭಾರತ ತಯಾರಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಭೀತಿ ಹೆಚ್ಚಾಗುತ್ತಿದೆ. ಇದರ ನಡುವೆ ಎಲ್ಲಾ ಜಿಲ್ಲೆಗಳಲ್ಲಿ ಯುದ್ಧ ಸನ್ನಿವೇಶದ ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಲಾಗಿದೆ. ಇದರಂತೆ ನಾಳೆ ದೇಶದ 224 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಮಾಕ್ ಡ್ರಿಲ್‌ನಿಂದ ನಾಳೆ ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಇದೆಯಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಹಲವರು ಗೊಂದಲಕ್ಕೀಡಾಗಿದ್ದಾರೆ. ಆದರೆ ಸದ್ಯದ ಮಾಹಿತಿ ಪ್ರಕಾರ ಯಾವುದೇ ರಜೆ ಘೋಷಿಸಿಲ್ಲ. ಕೆಲ ಗಂಟೆಗಳ ಕಾಲ ಮಾಕ್ ಡ್ರಿಲ್ ನಡೆಯಲಿದೆ. ಇಷ್ಟೇ ಅಲ್ಲ ಯುದ್ಧದ ಪರಿಸ್ಥಿತಿ, ತುರ್ತು ಸಂದರ್ಭದಲ್ಲಿ ನಾಗರೀಕರು ಹೇಗೆ ವರ್ತಿಸಬೇಕು, ಏನು ಮಾಡಬೇಕು ಅನ್ನೋದ ಪ್ರಾತ್ಯಕ್ಷಿಕೆ ಇದಾಗಿದೆ. ಹೀಗಾಗಿ ರಜೆ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.
ಯುದ್ಧದ ತುರ್ತು ಸಂದರ್ಭದ ಮಾಕ್ ಡ್ರಿಲ್
ಯುದ್ಧ ಸಂದರ್ಭದ ಜಾಗೃತಿ ಹಾಗೂ ನಾಗರೀಕರ ಜವಾಬ್ದಾರಿ ಕುರಿತು ಈ ಮಾಕ್ ಡ್ರಿಲ್ ನಡೆಯಲಿದೆ. ಹೀಗಾಗಿ ತುರ್ತು ಸಂದರ್ಭಗಳು ಎದುರಾಗುವುದು ಮನೆಯಲ್ಲಿರುವಾಗ ಅಲ್ಲ. ಯಾವುದೇ ಸಂದರ್ಭದಲ್ಲಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮಾಕ್ ಡ್ರಿಲ್ ವೇಳೆ ಯಾವುದೇ ಘಟಕಗಳಿದೆ ರಜೆ ನೀಡುವ ಸಾಧ್ಯತೆಗಳು ಇಲ್ಲ. ಸದ್ಯದ ವರದಿ ಪ್ರಕಾರ, ಇದುವರೆಗೆ ಕೇಂದ್ರ ಸರ್ಕಾವಾಗಲಿ, ಸಂಬಂಧ ಪಟ್ಟ ಇಲಾಖೆಯಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ರಜೆ ಘೋಷಣೆ ಮಾಡಿಲ್ಲ.
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು: ನಾಳೆ ಯುದ್ಧದ ಡ್ರಿಲ್!
ಕರ್ನಾಟಕದಲ್ಲಿ ಮಾಕ್ ಡ್ರಿಲ್
ಕರ್ನಾಟದಲ್ಲಿ ಹಲವು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ನಗರ, ಕಾರವಾರ, ರಾಯಚೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಅಣಕು ಕವಾಯತು ನಡೆಯಲಿದೆ. ಯುದ್ಧ ಸಂದರ್ಭ, ಜನರ ಸಹಕಾರ, ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮ, ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿ ಸೇರಿದಂತೆ ಹಲವು ವಿಚಾರಗಳನ್ನು ಈ ಮಾಕ್ ಡ್ರಿಲ್ ಮೂಲಕ ಜಾಗೃತಿ ನೀಡಲಾಗುತ್ತದೆ.ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.
ಮಾಕ್ ಡ್ರಿಲ್ ಪ್ರಮುಖವಾಗಿ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಸಲಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಾಗುತ್ತದೆ. ಪಂಜಾಬ್, ಗುಜರಾತ್, ರಾಜಸ್ತಾನ, ಪಶ್ಚಿಮ ಬಂಗಾಳ, ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಮಾಕ್ ಡ್ರಿಲ್ ನಡೆಯಲಿದೆ.
ಪೆಹಲ್ಗಾಂ ಉಗ್ರ ದಾಳಿಗೆ ಆಕ್ರೋಶ ಹೆಚ್ಚು
ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿ ಅಮಾಯಕ ಹಿಂದೂಗಳನ್ನು ಟಾರ್ಗೆಟ್ ಮಾಡಿ ನಡೆಸಲಾಗಿತ್ತು. ಧರ್ಮ ಕೇಳಿ ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ ನೋಡಲು ತೆರಳಿದ್ದ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಉಗ್ರರು ದಾಳಿ ಮಾಡಿದ್ದರು. ಯಾವುದೇ ಆಯುಧವಿಲ್ಲದೆ ತೆರಳಿದ್ದ ಪ್ರವಾಸಿಗರು ಬಲಿಯಾಗಿದ್ದರು. ಈ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತೀಕಾರ ತೀರಿಸಲು ಭಾರತ ತಯಾರಿ ನಡೆಸುತ್ತಿದೆ. ಉಗ್ರರ ಸದೆಬಡಿಯುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದರಂತೆ ಪ್ರಧಾನಿ ಮೋದಿ ಸತತ ಸಭೆ ನಡೆಸುತ್ತಿದ್ದರೆ. ರಕ್ಷಣಾ ಇಲಾಖೆ, ಭದ್ರತಾ ಅಧಿಕಾರಿಗಳ ಜೊತೆ ಸತತವಾಗಿ ಸಭೆ ನಡೆಸಿದ್ದಾರೆ. ಇತ್ತ ಪಾಕಿಸ್ತಾನದ ಜೊತೆಗಿನ ಹಲವು ಒಪ್ಪಂದಗಳನ್ನು ರದ್ದು ಮಾಡಲಾಗಿದೆ.ಸಿಂಧು ನದಿ ಒಪ್ಪಂದ, ವಾಘ ಘಡಿ, ಆಮದು ನಿಷೇಧ ಸೇರಿದಂತೆ ಹಲವು ಸೇರಿವೆ.
ದೇಶದ ಮೇಲೆ ಯುದ್ಧದ ಕಾರ್ಮೋಡ, ಮಾಕ್ ಡ್ರಿಲ್ಸ್ ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ