
ಭೋಪಾಲ್/ಜಬಲ್ಪುರ (ಸೆಪ್ಟೆಂಬರ್ 24, 2023): ಕಾಂಗ್ರೆಸ್ ಶಾಸಕರ ವಿರುದ್ಧ ಅಸ್ವಾಭಾವಿಕ ಸೆಕ್ಸ್ ನಡೆಸಿರೋ ಆರೋಪ ಕೇಳಿಬಂದಿದೆ. ಎರಡನೇ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕತೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೈಕೋರ್ಟ್‌ವೊಂದು ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಅಡಿಯಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸಲಾಗಲ್ಲ ಎಂದು ಹೈಕೋರ್ಟ್ ಆರೋಪಿಗೆ ಬಿಗ್ ರಿಲೀಫ್ ನೀಡಿದೆ. ಏಕೆಂದರೆ ಪತಿ-ಪತ್ನಿಯರು ಸಾಂಪ್ರದಾಯಿಕ ಲೈಂಗಿಕತೆಯನ್ನು ಮೀರಿ ಹೋಗುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಅಂದ ಹಾಗೆ, ಈ ಆರೋಪದಲ್ಲಿ ಸಿಲುಕಿದ್ದು ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್.
ಇದನ್ನು ಓದಿ: ಸಂಗಾತಿ ಲೈಂಗಿಕ ಸಂಬಂಧ ನಿರಾಕರಿಸೋದು ಕ್ರೌರ್ಯಕ್ಕೆ ಸಮ: ಹೈಕೋರ್ಟ್
ಆದರೆ, ಶಾಸಕರಿಗೆ ರಿಲೀಫ್ ನೀಡಿದ ಮಧ್ಯ ಪ್ರದೇಶ ಹೈಕೋರ್ಟ್ ಯಾವುದೇ ಕೇಸನ್ನು ದಾಖಲಿಸದೆ ಎಫ್‌ಐಆರ್ ಅನ್ನೂ ರದ್ದುಗೊಳಿಸಿದೆ. ಉಮಂಗ್ ಸಿಂಘಾರ್ ಅವರು ಅಸಹಜ ಲೈಂಗಿಕತೆಯಲ್ಲಿ ತೊಡಗಿದ್ದಾರೆಂದು ಅವರ ಪತ್ನಿ ಆರೋಪಿಸಿದ್ದಾರೆ. ಕಾನೂನಿನ ಪ್ರಕಾರ, ವಿವಾಹಿತ ದಂಪತಿಗಳ ನಡುವಿನ ಲೈಂಗಿಕ ಕ್ರಿಯೆಗಳಿಗೆ ಒಪ್ಪಿಗೆ ಅಗತ್ಯವಿಲ್ಲ ಎಂದೂ ಹೈಕೋರ್ಟ್ ಹೇಳಿದೆ. 2022 ರ ನವೆಂಬರ್‌ನಲ್ಲಿ ಮಾಜಿ ಸಚಿವ ಉಮಂಗ್ ಸಿಂಘಾರ್ ವಿರುದ್ಧ ಮಧ್ಯ ಪ್ರದೇಶದ ಧರ್ ಜಿಲ್ಲೆಯ ನವೊಗಾಂವ್ ಪೊಲೀಸರು ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಅಶ್ಲೀಲತೆ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವಿಕೆ, ಕ್ರೌರ್ಯ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅವರ ಎರಡನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದರು. ಅವರು ನಿರೀಕ್ಷಣಾ ಜಾಮೀನಿಗಾಗಿ ಇಂದೋರ್‌ನ ಎಂಪಿ/ಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು, ಆದರೆ ಅದನ್ನು ತಿರಸ್ಕರಿಸಲಾಯಿತು. ನಂತರ, ಅವರು ಮಧ್ಯ ಪ್ರದೇಶ ಹೈಕೋರ್ಟ್‌ಗೆ ತೆರಳಿದರು. ಅದು ಮಾರ್ಚ್ 2023 ರಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು ಮತ್ತು ಈಗ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ಈ ಸಂಬಂಧ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ದ್ವಿವೇದಿ ಅವರು ತಮ್ಮ ತೀರ್ಪಿನಲ್ಲಿ, ದೂರುದಾರರು ಮತ್ತು ಅರ್ಜಿದಾರರು ತಾವು ಹೆಂಡತಿ ಮತ್ತು ಪತಿ ಎಂದು ಒಪ್ಪಿಕೊಂಡಿದ್ದಾರೆ ಎಂದು ಗಮನಿಸಿದರು. "... ಲೈಂಗಿಕ ಆನಂದವು ಪತಿ ಮತ್ತು ಹೆಂಡತಿಯ ಪರಸ್ಪರ ಬಂಧದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ, ಪತಿ ಮತ್ತು ಆತನ ಹೆಂಡತಿಯ ನಡುವಿನ ಲೈಂಗಿಕ ಸಂಬಂಧದ ಆಲ್ಫಾ ಮತ್ತು ಒಮೆಗಾದಲ್ಲಿ ಯಾವುದೇ ತಡೆಗೋಡೆ ಹಾಕಲಾಗುವುದಿಲ್ಲ. ಹೀಗಾಗಿ, ಪರಿಚ್ಛೇದ 375 ರ ತಿದ್ದುಪಡಿ ವ್ಯಾಖ್ಯಾನದಲ್ಲಿ, ಮತ್ತು ಸೆಕ್ಷನ್ 377ನಲ್ಲಿ ಪತಿ ಮತ್ತು ಪತ್ನಿಯ ನಡುವೆ ಅಪರಾಧಕ್ಕೆ ಯಾವುದೇ ಸ್ಥಾನವಿಲ್ಲ'' ಎಂದು ನ್ಯಾಯಮೂರ್ತಿ ಸಂಜಯ್ ದ್ವಿವೇದಿ ತಮ್ಮ ತೀರ್ಪಿನಲ್ಲಿ ಹೇಳಿದರು.
ಇದನ್ನೂ ಓದಿ: ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್ ಮಾಡಿದ ನೀಚ ತಂದೆ!
"ತಿದ್ದುಪಡಿ ಮಾಡಲಾದ ವ್ಯಾಖ್ಯಾನದ ಪ್ರಕಾರ, ಅಪರಾಧಿ ಮತ್ತು ಬಲಿಪಶು ಗಂಡ ಮತ್ತು ಹೆಂಡತಿಯಾಗಿದ್ದರೆ, ಸಮ್ಮತಿಯು ಅಪ್ರಸ್ತುತವಾಗುತ್ತದೆ ಮತ್ತು ಸೆಕ್ಷನ್ 375 ಅಡಿಯಲ್ಲಿ ಯಾವುದೇ ಅಪರಾಧವನ್ನು ಮಾಡಲಾಗುವುದಿಲ್ಲ ಹಾಗೂ ಐಪಿಸಿಯ 376 ಅಡಿಯಲ್ಲಿ ಯಾವುದೇ ಶಿಕ್ಷೆಯಿಲ್ಲ. ಇನ್ನು, 377 ರ ಅಪರಾಧಕ್ಕಾಗಿ, ನವತೇಜ್ ಸಿಂಗ್ ಜೋಹರ್‌ನಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವಂತೆ, ಒಪ್ಪಿಗೆ ಇದ್ದರೆ, ಇದರಡಿ ಅಪರಾಧವನ್ನು ಮಾಡಲಾಗುವುದಿಲ್ಲ.
"ಸುಪ್ರೀಂಕೋರ್ಟ್ ಹೇಳಿದಂತೆ, ಸಂತಾನಕ್ಕಾಗಿ ಅಲ್ಲದಿದ್ದರೆ, ಉಳಿದ ಯಾವುದೇ ಸಂಭೋಗವು ಅಸ್ವಾಭಾವಿಕವಾಗಿದೆ. ಆದರೆ ಸೆಕ್ಷನ್ 375 ರ ವ್ಯಾಖ್ಯಾನದ ಪ್ರಕಾರ ಅಪರಾಧವಲ್ಲದಿದ್ದರೆ, ಅದನ್ನು ಸೆಕ್ಷನ್ 377 IPC ಅಡಿಯಲ್ಲಿ ಹೇಗೆ ಅಪರಾಧ ಎಂದು ಪರಿಗಣಿಸಬಹುದು. ನನ್ನ ಅಭಿಪ್ರಾಯದಲ್ಲಿ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಅವರ ಲೈಂಗಿಕ ಸಂಬಂಧಕ್ಕೆ ಮಾತ್ರ ಸಂತಾನದ ಉದ್ದೇಶಕ್ಕಾಗಿ ಸೀಮಿತಗೊಳಿಸಲಾಗುವುದಿಲ್ಲ, ಆದರೆ ಸ್ವಾಭಾವಿಕ ಲೈಂಗಿಕ ಸಂಭೋಗದ ಹೊರತಾಗಿ ಅವರ ನಡುವೆ ಏನಾದರೂ ನಡೆದರೆ ಅದನ್ನು 'ಅಸ್ವಾಭಾವಿಕ' ಎಂದು ವ್ಯಾಖ್ಯಾನಿಸಬಾರದು" ಎಂದು ನ್ಯಾಯಾಧೀಶರು ಹೇಳಿದರು. ಪತಿ-ಪತ್ನಿಯರ ನಡುವಿನ ಲೈಂಗಿಕ ಸಂಬಂಧವು ಸಂತೋಷದ ದಾಂಪತ್ಯ ಜೀವನಕ್ಕೆ ಪ್ರಮುಖವಾಗಿದೆ ಮತ್ತು ಅದನ್ನು ಸಂಪೂರ್ಣ ಸಂತಾನದ ಮಟ್ಟಿಗೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದೂ ಹೈಕೋರ್ಟ್ ಆದೇಶ ಹೇಳಿದೆ.
ಇದನ್ನೂ ಓದಿ: ವಿಮಾನದ ಲೈಟ್ ಆಫ್ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ