ನವೆಂಬರ್ 1 ರಿಂದ ಅನಾಮಿಕ ಕಾಲ್ ಇಲ್ಲ, ಕಾಲರ್ ಐಡಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

Published : Oct 15, 2026, 02:01 PM IST
unknown call

ಸಾರಾಂಶ

ನವೆಂಬರ್ 1 ರಿಂದ ಕಾಲರ್ ಐಡಿ ಕಡ್ಡಾಯ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಇನ್ಮುಂದೆ unknown ಕಾಲ್ ಸಮಸ್ಯೆ ತಪ್ಪಲಿದೆ. ಕಾಲ್ ಸ್ವೀಕರಿಸಬೇಕಾ? ಅಥವಾ ತಿರಸ್ಕರಿಸಬೇಕಾ ಅನ್ನೋ ಗೊಂದಲಕ್ಕೂ ಉತ್ತರ ಸಿಗಲಿದೆ. ಏನಿದು ಕಾಲರ್ ಐಡಿ ನೀತಿ

ನವದೆಹಲಿ (ಅ.15) ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಕಟ್ಟು ನೀತಿಗಳು ಜಾರಿಯಾಗುತ್ತಿದೆ. ಇದೀಗ ಕಾಲರ್ ಐಡಿ ಕಡ್ಡಾಯ ರೂಲ್ಸ್ ಜಾರಿಯಾಗಿದೆ. ನವೆಂಬರ್ 1 ರಿಂದ ಎಲ್ಲಾ ಟೆಲಿಕಾಂ ಆಪರೇಟರ್ ಕಾಲರ್ ಐಡಿ ಕಡ್ಡಾಯಗೊಳಿಸಬೇಕು. ಗ್ರಾಹಕರಿಗೆ ಸೇವೆ ನೀಡುವ ಟೆಲಿಕಾಂ ಆಪರೇಟರ್ ಕಟ್ಟು ನಿಟ್ಟಾಗಿ ನಿಮಯ ಪಾಲಿಸಲು ಸೂಚನೆ ನೀಡಿದೆ. ಕಾಲರ್ ಐಡಿ ನೀತಿಯಿಂದ ನವೆಂಬರ್ 1 ರಿಂದ ಗ್ರಾಹಕರಿಗೆ unknown (ಅನಾಮಿಕ) ಕಾಲ್ ಸಮಸ್ಯೆ ಇರುವುದಿಲ್ಲ. ಎಲ್ಲಾ ಟೆಲಿಕಾಂ ಗ್ರಾಹಕರಿಗೆ ಈ ಸೇವೆ ನೀಡುವಂತೆ ಕಡ್ಡಾಯಗೊಳಿಸಲಾಗಿದೆ.

ಏನಿದು ಕಾಲರ್ ಐಡಿ ನೀತಿ? unknown ಕಾಲ್

ಡಿಪಾರ್ಟ್‌ಮೆಂಟ್ ಆಫ್ ಟೆಲಿಕಮ್ಯೂನಿಕೇಶನ್ (DoT) ಈಗಾಗಲೇ ಟೆಲಿಕಾಂ ಆಪರೇಟರ್‌ಗೆ ಕಾಲರ್ ಐಡಿ ಕಡ್ಡಾಯಗೊಳಿಸಲು ಸೂಚಿಸಿದೆ. ಕಾಲಿಂಗ್ ನೇಮ್ ಪ್ರಸೆಂಟೇಶನ್ (CNAP)ನವೆಂಬರ್ 1 ರಿಂದ ಕಡ್ಡಾಯವಾಗಿದೆ. ಈಗಾಗಲೇ 4ಜಿ ಹಾಗೂ 5ಜಿ ಸ್ಮಾರ್ಟ್‌ಫೋನ್ ಬಳಸುವ ಗ್ರಾಹಕರು ಈ ಸೇವೆಯನ್ನು ಅನುಭವಿಸಿರುವ ಸಾಧ್ಯತೆ ಇದೆ. ಆದರೆ ನವೆಂಬರ್ 1 ರಿಂದ ಎಲ್ಲಾ ಫೋನ್ ಬಳಸುವ ಗ್ರಾಹಕರಿಗೂ ಈ ಸೇವೆ ಲಭ್ಯವಾಗಲಿದೆ.

ಸೇವ್ ಮಾಡದಿದ್ದರೂ ಹೆಸರು ಪತ್ತೆ

ಅನಾಮಿಕ ಅಥವಾ ಫೋನ್‌ನಲ್ಲಿ ಸೇವ್ ಮಾಡದ ನಂಬರ್ ಆಗಿದ್ದರೆ, ಅವರ ಹೆಸರು ಟೆಲಿಕಾಂ ಡೇಟಾದಲ್ಲಿರುವಂತೆ ಸ್ಕ್ರೀನ್ ಮೇಲೆ ತೋರಿಸಲಿದೆ. ಹೀಗಾಗಿ ಯಾವುದೇ ಅನಾಮಿಕ ಕರೆ ಮಾಡಿದರೂ ಅವರ ನಂಬರ್ ಹಾಗೂ ಹೆಸರು ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣಲಿದೆ. ಈ ನಂಬರ್ ಬಳಿಕ ಸೇವ್ ಮಾಡಿದ ಬಳಿಕ ಸೇವ್ ಮಾಡುವ ಹೆಸರಿನಲ್ಲಿ ಇರಲಿದೆ. ಆದರೆ ಸೇವ್ ಮಾಡದ ನಂಬರ್ ಟೆಲಿಕಾಂ ಡೇಟಾಗಳಲ್ಲಿ ನೀಡಿರು ದಾಖಲೆಗಳಲ್ಲಿ ಇರುವ ಹೆಸರನ್ನು ಸ್ಕ್ರೀನ್ ಮೇಲೆ ತೋರಿಸಲಿದೆ. ಇದರಿಂದ ಕರೆ ಮಾಡುವ ವ್ಯಕ್ತಿ ಯಾರು, ಆತನ ಹೆಸರೇನು ಅನ್ನೋದು ಗೊತ್ತಾಗಲಿದೆ. ಹೀಗಾಗಿ ನವೆಂಬರ್ 1 ರಿಂದ ಯಾವುದೇ ಅನ್‌ನೋನ್ ಕಾಲ್ ಇರುವುದಿಲ್ಲ.

ಸಾಮಾನ್ಯವಾಗಿ ಅನಾಮಿಕ ಕರೆ ಯಾರದ್ದು ಎಂದು ಪತ್ತೆ ಹಚ್ಚಲು ಟ್ರು ಕಾಲರ್ ಸೇರಿದಂತೆ ಇತರ ಆ್ಯಪ್ ಬಳಸಲಾಗುತ್ತಿತ್ತು. ಆದರೆ ಪ್ರತಿಯೊಬ್ಬ ಗ್ರಾಹಕರಿಗೂ ಕರೆ ಮಾಡುವ ವ್ಯಕ್ತಿಯ ಹೆಸರು ಸ್ಪಷ್ಟವಾಗಿ ಇರಬೇಕು ಅನ್ನೋ ನೀತಿಯಡಿಯಲ್ಲಿ ಇದೀಗ ಕಾಲರ್ ಐಡಿ ನೀತಿ ಕಡ್ಡಾಯ ಮಾಡಲಾಗಿದೆ.

ಗೌಪತ್ಯ ಹಾಗೂ ಭದ್ರತೆಗೂ ಆದ್ಯತೆ

ಕರೆ ಮಾಡುವಾಗ ಅನಾಮಿಕ ವ್ಯಕ್ತಿಯಾಗಿದ್ದರೆ ಅಥವಾ ಫೋನ್‌ನಲ್ಲಿ ನಂಬರ್ ಸೇವ್ ಆಗಿರದಿದ್ದರೆ ಅವರ ಟೆಲಿಕಾಂ ಡೇಟಾದಲ್ಲಿರುವ ಹೆಸರು ಮೊಬೈಲ್ ಸ್ಕ್ರೀನ್ ಮೇಲೆ ಕಾಣಲಿದೆ. ಗೌಪ್ಯತೆ ಹಾಗೂ ಭದ್ರತೆ ಕಾರಣದಿಂದ ಕರೆ ಬರುವಾಗ ಮಾತ್ರ ಹೆಸರು ಕಾಣಿಸಲಿದೆ. ಬಳಿಕ ಹೆಸರು ಕಾಣಿಸುವುದಿಲ್ಲ. ಬ್ಯೂಸಿನೆಸ್ ರಿಜಿಸ್ಟ್ರೇಶನ್ ಸೇರಿದಂತೆ ಇತರ ಕೆಲ ವಾಣಿಜ್ಯ ನೋಂದಣಿ ನಂಬರ್ ಹೆಸರು ಮತ್ತೆ ಕಾಣಿಸಲಿದೆ. ಆದರೆ ವೈಯುಕ್ತಿತ ನಂಬರ್ ಹೆಸರು ಫೋನ್ ಬರುವಾಗ ಮಾತ್ರ ಕಾಣಿಸಲಿದೆ. ಬಳಿಕ ಫೋನ್‌ನಲ್ಲಿ ಮಿಸ್ ಕಾಲ್ ಅಥವಾ ರಿಸೀವ್ ಕಾಲ್‌ ಲಿಸ್ಟ್‌ನಲ್ಲಿ ನಂಬರ್ ಮಾತ್ರ ಇರಲಿದೆ.

ಈ ಸೇವೆಯಿಂದ ಕರೆ ಮಾಡುವ ವ್ಯಕ್ತಿಯ ಹೆಸರು ಗೊತ್ತಾಗಲಿದೆ. ಹೀಗಾಗಿ ಕರೆಗೆ ಉತ್ತರಿಸಬೇಕೆ, ಅಥವಾ ತಿರಸ್ಕರಿಸಬೇಕಾ ಅನ್ನೋದು ಸ್ಪಷ್ಟವಾಗಲಿದೆ. ಇದರಿಂದ ಗ್ರಾಹಕರಿಗೆ ಸ್ಪಷ್ಟತೆ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ್ರಾ ಧ್ರುವ್ ರಾಠಿ? ಹಳೇ ಕೇಸ್ ಓಪನ್, ದೆಹಲಿ ಕೋರ್ಟ್‌ನಿಂದ ಸಮನ್ಸ್
Drinking Water: ಹಲಸಿನ ಸಾರದಿಂದ ನೀರಿನ ಫ್ಲೋರೈಡ್‌ ತೆಗೆಯುವ ಟೆಕ್‌ ಅವಿಷ್ಕರಿಸಿದ ಎನ್‌ಐಟಿ