ಗಾಂಧಿ, ನೆಹರೂ ಸಾಕು, ನಮ್ಮದೆ ಮುಸ್ಲಿಂ ನಾಯಕರು ಬೇಕು, ಒವೈಸಿ ಕರೆಗೆ ಕಾಂಗ್ರೆಸ್‌ನಲ್ಲಿ ತಳಮಳ

Published : Oct 12, 2026, 12:05 PM IST
Asaduddin Owaisi

ಸಾರಾಂಶ

ಗಾಂಧಿ ಹಾಗೂ ನೆಹರೂ ಹಿಂದೆ ಹೋಗಿದ್ದು, ಅವರ ಬಾಲ ಹಿಡಿದದ್ದು ಸಾಕು. ನಮಗೆ ನಮ್ಮದೇ ಮುಸ್ಲಿಂ ನಾಯಕರು ಬೇಕು. ಗಾಂಧಿ ನೆಹರೂ ಹಿಂದೆ ಹೋಗಿ ಮುಸ್ಲಿಂ ಸಮುದಾಯಕ್ಕೆ ಸಿಕ್ಕಿದ್ದೇನು? ಒವೈಸಿ ಕೊಟ್ಟ ಕರೆಯಿಂದ ಕಾಂಗ್ರೆಸ್‌ನಲ್ಲಿ ಕೋಹಾಲ ಸೃಷ್ಟಿಯಾಗಿದೆ.

ನವದೆಹಲಿ (ಅ.12) ದೇಶದಲ್ಲಿ ಒಂದೆಡೆ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ, ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಕುರಿತು ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ, ಮತ್ತೊಂದೆಡೆ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ ಮಾಡುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಮಹತ್ವದ ಕರೆ ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ನೀಡಿದ ಕರೆಯಿಂದ ಕಾಂಗ್ರೆಸ್ ಕಂಗಾಲಾಗಿದೆ. ಇಷ್ಟು ವರ್ಷ ಗಾಂಧಿ, ನೆಹರೂ ಎಂದು ಅವರ ಹಿಂದೆ ಹೋಗಿದ್ದು ಸಾಕು. ನಮಗೆ ನಮ್ಮದೆ ಮುಸ್ಲಿಂ ನಾಯಕರು ಬೇಕು ಎಂದು ಒವೈಸಿ ಹೇಳಿದ್ದಾರೆ. ಮುಸ್ಲಿಂ ಸಮುದಾಯ ಸೇರಿದಂತೆ ಕೆಲ ಪ್ರಮುಖ ಸಮುದಾಯಗಳ ಭಾರಿ ಬೆಂಬಲದೊಂದಿಗೆ ಸಾಗುತ್ತಿರುವ ಕಾಂಗ್ರೆಸ್‌ಗೆ ಒವೈಸಿ ಕರೆ ನುಂಗಲಾರದ ತುಪ್ಪವಾಗಿ ಪರಿಣಿಮಿಸಿದೆ.

ಗಾಂಧಿ ನೆಹರೂಗಿಂತ ನಮ್ಮವರೇ ನಾಯಕರಾಗಬೇಕು

ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿರುವ ಅಸಾದುದ್ದೀನ್ ಒವೈಸಿ, ಮುಸ್ಲಿಂ ಸಮುದಾಯಗಳ ಮತ ಕ್ರೋಢೀಕರಿಸಲು ಮುಂದಾಗಿದ್ದಾರೆ. ಮುಸ್ಲಿಂ ಸಮುದಾಯದ ಕಷ್ಟಗಳು, ಸಮಸ್ಯೆಗಳ ಕುರಿತು ಯಾರು ಮಾತನಾಡುವುದಿಲ್ಲ. ನಾವು ಗಾಂಧಿ, ನೆಹರೂ ಎಂದು ಅವರಿಗೆ ಮತ ಹಾಕಿದ್ದೇವೆ. ಅವರನ್ನೇ ನಾಯಕರಾಗಿ ನಂಬಿದ್ದೇವೆ. ನಮ್ಮ ಸಮುದಾಯದ ಬೆಂಬಲದಿಂದ ಅವರು ಜನನಾಯಕರಾಗಿ ಬೆಳೆದರು. ನಮಗೆ ಮಾಡೆಲ್ ಬೇಕಿಲ್ಲ. ನಮ್ಮ ಸಮುದಾಯದವರೇ ನಾಯಕರಾಗಬೇಕು. ನಮ್ಮ ಮುಸ್ಲಿಂ ಸಮುದಾಯದ ಸಾಮಾನ್ಯ ವ್ಯಕ್ತಿಗಳೇ ನಾಯಕರಾದರೆ ಅವರಿಗೆ ಸಮಸ್ಯೆಗಳುು ಗೊತ್ತಿರುತ್ತದೆ, ಅದನ್ನು ಬಗೆಹರಿಸಲು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಒವೈಸಿ ಹೇಳಿದ್ದಾರೆ.

ನಾವು ಯಾರಿಗೂ ಜೀತದಾಳಲ್ಲ

ನಾವು ಯಾರಿಗೂ ಜೀತದಾಳಾಗಿ ಇರಬೇಕಿಲ್ಲ. ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ, ನಮಗೆ ಬೆಂಬಲ ಕೊಡುತ್ತಾರೆ ಎಂದು ಭಾವಿಸಿ ದಶಗಳಿಂದ ಮುಸ್ಲಿಂ ಸಮುದಾಯ ಮತ ಹಾಕುತ್ತಿದೆ. ಆದರೆ ಮುಸ್ಲಿಂ ಸಮುದಾಯಕ್ಕೆ ಸಿಕ್ಕೇದ್ದೇನು? ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲುತ್ತಾ ಬಂದಿದೆ.ಇದೀಗ ಸಮಯ ಬಂದಿದೆ. ನಮ್ಮದೇ ನಾಯಕರು ಬೆಳೆಯಬೇಕು. ನಮ್ಮ ನಾಯಕರಿಗೆ ಮತ ಹಾಕಬೇಕು. ಸಮುದಾಯವನ್ನು ಗಟ್ಟಿಗೊಳಿಸಬೇಕು, ನಾಯಕರನ್ನು ಬೆಳೆಸಬೇಕು ಎಂದು ಒವೈಸಿ ಕರೆ ನೀಡಿದ್ದಾರೆ.

ಮುಸ್ಲಿಂ ಸಮುದಾಯದ ವಿಚಾರವಿರಬಹುದು, ಯಾವುದೇ ಇರಬಹುದು, ಎಐಎಂಐಎಂ ಪಾರ್ಟಿ ಎಲ್ಲೂ ರಾಜೀ ಮಾಡಿಕೊಳ್ಳದೆ ಧ್ವನಿ ಎತ್ತಿದೆ. 2024ರಲ್ಲಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಿದಾಗ, ವೀಕ್ನೆಸ್, ಮುಂಬರುವ ಅಪಾಯದ ಕುರಿತು ಯಾರಿಗೂ ಅಂಜದೇ ಸಂಸತ್ತಿನಲ್ಲಿ ಗಟ್ಟಿಯಾಗಿ ಹೇಳಿದ್ದು ನಾನು ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದ್ರಾ ಜಿರಳೆ ದೀಪ್ಕೆ: ವಿಡಿಯೋ ರಿಲೀಸ್​ ಮಾಡಿ ಸಿಕ್ಕಿಹಾಕಿಸಿದ ಪೊಲೀಸರು
ಹಂಗಾಮ ಸೃಷ್ಟಿಸಲು ಮುಂದಾದ ಇಂಡಿಯಾ ಒಕ್ಕೂಟಕ್ಕೆ ಶಾಕ್, ನಿಯೋಗ ಭೇಟಿ ನಿರಾಕರಿಸಿದ ಸುಪ್ರೀಂ ಸಿಜೆಐ