ಕೊರೋನಾ ತಡೆಗೆ ಮಹಾ ಸರ್ಕಾರದ ಮಾಸ್ಟರ್ ಪ್ಲಾನ್!

By Suvarna NewsFirst Published Dec 20, 2020, 2:53 PM IST
Highlights

ಕೊರೋನಾ ನಿಯಂತ್ರಣಕ್ಕೆ ಮುಂದಾದ ಮಹಾರಾಷ್ಟ್ರ ಸರ್ಕಾರ/ ಮುಂದಿನ ಆರು ತಿಂಗಳು ಕಾಲ ಮಾಸ್ಕ್ ಕಡ್ಡಾಯ/ ದೇಶದಲ್ಲಿ ಇಳಿಕೆ ಹಾದಿಯಲ್ಲಿ ಕೊರೋನಾ/ ಮಾಸ್ಕ್ ಧರಿಸದಿದ್ದರೆ ದಂಡ ಚಾಲ್ತಿಯಲ್ಲಿದೆ

ಮುಂಬೈ(ಡಿ. 20)  ಕೊರೋನಾ ವೈರಸ್  ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದ್ದು ಮುಂದಿನ ಆರು ತಿಂಗಳು ಕಾಲ ಮಾಸ್ಕ್ ಕಡ್ಡಾಯ ಎಂದು ಅಧಿಕೃತವಾಗಿ ತಿಳಿಸಿದೆ.  ಲಾಕ್ ಡೌನ್  ಘೋಷಣೆ ಮಾಡುವ ಇಲ್ಲ ಎಂದು ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಬಗ್ಗೆ ಘೋಷಣೆ ಮಾಡಿದ್ದು ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.  ಮಹಾರಾಷ್ಟ್ರದಲ್ಲಿ  62,218 ಕೊರೋನಾ ಸಕ್ರಿಯ ಪ್ರಕರಣಗಳಿವೆ. 

ಮಾಸ್ಕ್ ಧರಿಸದಿದ್ದರೆ ಐದು ಸಾವಿರ ರೂ. ದಂಡ

 ಕಳೆದ ಕೆಲವು ದಿನಗಳಿಂದ ಕರೋನಾವೈರಸ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆಯಾದರೂ ದೇಶದಲ್ಲಿ ಕರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ ಒಂದು ಕೋಟಿ ದಾಟಿದೆ.

ಕರೋನಾ ವೈರಸ್ ತಡೆಗಟ್ಟುವಿಕೆಗೆ ಅನ್ವಯವಾಗುವ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿರುವ ಗುಜರಾತ್ ಸರ್ಕಾರ ವಿವಾಹ ಸಮಾರಂಭವನ್ನು ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿತ್ತು. ಕರ್ನಾಟದಲ್ಲಿಯೂ ಮಾಸ್ಕ್ ಮೇಲೆ ಕಠಿಣ ಕಾನೂನು ತರಲಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 

 

click me!