ದೇಶದಲ್ಲಿ ಲಾಕ್‌ ಡೌನ್ ಸಂಪೂರ್ಣ ವಿಫಲ; ಕಾರಣ ಕೊಟ್ಟ ರಾಹುಲ್!

By Suvarna News  |  First Published Jun 4, 2020, 3:49 PM IST

ಭಾರತದಲ್ಲಿ ಲಾಕ್ ಡೌನ್ ಸಂಪೂರ್ಣ ವಿಫಲ/ ರಾಹುಲ್ ಗಾಂಧಿ ಮಾತು/ ಎರಡನೇ ಮಹಾಯುದ್ಧದ ಸಂದರ್ಭದಲ್ಲಿಯೂ ಇಂಥ ಸ್ಥಿತಿ ಬಂದಿರಲಿಲ್ಲ/ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ


ನವದೆಹಲಿ(ಜೂ. 04)  ಎರಡನೇ ಮಹಾಯುದ್ಧದ ಸಂದರ್ಭದಲ್ಲಿಯೂ ವಿಶ್ವ ಲಾಕ್ ಡೌನ್ ಪರಿಸ್ಥಿತಿ ಎದುರಿಸಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೊರೋನಾ ವೈರಸ್ ಕಾರಣಕ್ಕೆ ಲಾಕ್ ಡೌನ್ ಎದುರಿಸಬೇಕಾಗಿ ಬಂದಿದೆ.  ಇದೊಂದು ವಿಚಿತ್ರ ಸನ್ನಿವೇಶ. ಈ ರೀತಿ ಇಡೀ ವಿಶ್ವವೇ ಸ್ಥಬ್ಧವಾಗುತ್ತದೆ ಎಂದು ಯಾರೂ ಊಹೆ ಮಾಡಿರಲು ಅಸಾಧ್ಯ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿಯೂ ಇಂಥ ಪರಿಸ್ಥಿತಿ ಬಂದಿರಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.

Tap to resize

Latest Videos

ಈ ಒಂದು ಪದ ಬಳಕೆಗೆ ನಿತೀಶ್ ಕುಮಾರ್ ಕೆಂಡಾಮಂಡಲ

ಕಾಂಗ್ರೆಸ್ ಮಾಜಿ ಅಧ್ಯಕ್ಷರು ಉದ್ಯಮಿ, ಬಜಾಜ್ ಆಟೋ ನಿರ್ದೇಶಕ ರಾಜೀವ್ ಬಜಾಜ್ ಜತೆ ಸಂವಾದದಲ್ಲಿ ಅನೇಕ ವಿಚಾರ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೊರೋನಾ ವಿಚಾರದಲ್ಲಿ ಶೀಘ್ರವಾಗಿ ಸ್ಪಂದಿಸಬೇಕಿತ್ತು.  ರಾಜ್ಯದ ಮುಖ್ಯಂಂತ್ರಿಗಳಿಗೆ ಕೊರೋನಾ ವಿರುದ್ಧ ಹೋರಾಡಲು ತಿಳಿಸಬೇಕಾಗಿತ್ತು. ಆದರೆ ತಾನೇ ಮುಂದೆ ನಿಲ್ಲಲು ಹೋಗಿ ವಿಳಂಬ ಮಾಡಿಕೊಂಡಿದೆ ಎಂದು ರಾಹುಲ್ ಹೇಳಿದ್ದಾರೆ.

ಭಾರತದಲ್ಲಿ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ಲಾಕ್ ಡೌನ್ ಇದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ದೇಶ ಎಂದರೆ ಅದು ಭಾರತ ಎಂದಾಗಿದೆ ಎಂದು ರಾಹುಲ್ ಪರಿಸ್ಥಿತಿ ಮುಂದೆ ಇಟ್ಟಿದ್ದಾರೆ.

ರಾಷ್ಟ್ರನಾಯಕ ಪಟ್ಟ; ಮೋದಿಗೆ ಶೇ. 66, ರಾಹುಲ್ ಗೆ ಎಷ್ಟು?

ಏಪ್ರಿಲ್ 30 ರಂದು ರಾಹುಲ್ ರಿಸರ್ವ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಜತೆ ಮಾತುಕತೆ ನಡೆಸಿದ್ದರು.  ಇದಾದ ಮೇಲೆ ಗಾಂಧಿ ನೋಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಜತೆಯೂ ಸಂವಾದ ನಡೆಸಿದರು.   ಕಳೆದ ವಾರ ಗಾಂಧಿ ಪಬ್ಲಿಕ್ ಹೆಲ್ತ್  ತಜ್ಞರಾದ ಹಾವಾರ್ಡ್ ಗ್ಲೋಬಲ್ ಇಸ್ಟಿಟ್ಯೂಟ್ ನ ಅಶೀಶ್ ಝಾ ಅವರೊಂದಿಗೂ ಮಾತುಕತೆ ನಡೆಸಿದ್ದರು.

click me!