ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿ​ಸು​ವಂತಿ​ಲ್ಲ!

By Suvarna News  |  First Published Jun 5, 2021, 11:15 AM IST

* ಕೇಂದ್ರೀಯ ತನಿಖಾ ತಂಡ​ (​ಸಿಬಿಐ) ಅಧಿ​ಕಾ​ರಿ​ಗಳು ಮತ್ತು ಸಿಬ್ಬಂದಿಗೆ ಹೊಸ ರೂಲ್ಸ್

* ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿ​ಸು​ವಂತಿ​ಲ್ಲ

* ಕರ್ತವ್ಯದ ಮೇಲಿದ್ದಾಗ ಜೀನ್ಸ್‌ ಮತ್ತು ಟೀ ಶರ್ಟ್‌ ಹಾಗೂ ಕ್ರೀಡಾ ಶೂಗ​ಳನ್ನು ಧರಿ​ಸಲೇಬಾ​ರದು ಎಂದು ಸಿಬಿಐ ನೂತನ ನಿರ್ದೇ​ಶಕ ಸುಬೋಧ್‌ ಕುಮಾರ್‌ ಜೈಸ್ವಾಲ್‌ ಆದೇಶ


ನವ​ದೆ​ಹ​ಲಿ(ಜೂ.05): ಕೇಂದ್ರೀಯ ತನಿಖಾ ತಂಡ​ (​ಸಿಬಿಐ) ಅಧಿ​ಕಾ​ರಿ​ಗಳು ಮತ್ತು ಸಿಬ್ಬಂದಿ ಇನ್ಮುಂದೆ ಕರ್ತವ್ಯದ ಮೇಲಿದ್ದಾಗ ಜೀನ್ಸ್‌ ಮತ್ತು ಟೀ ಶರ್ಟ್‌ ಹಾಗೂ ಕ್ರೀಡಾ ಶೂಗ​ಳನ್ನು ಧರಿ​ಸಲೇಬಾ​ರದು ಎಂದು ಸಿಬಿಐ ನೂತನ ನಿರ್ದೇ​ಶಕ ಸುಬೋಧ್‌ ಕುಮಾರ್‌ ಜೈಸ್ವಾಲ್‌ ಆದೇಶಿಸಿದ್ದಾರೆ.

ಅಲ್ಲದೆ ಸಿಬಿಐ ಅಧಿ​ಕಾ​ರಿ​ಗಳು ಮತ್ತು ಸಿಬ್ಬಂದಿ ಔಪ​ಚಾ​ರಿ​ಕ​ ಉಡು​ಗೆ​ಗಳಲ್ಲೇ ಕಚೇ​ರಿಗೆ ಆಗ​ಮಿ​ಸ​ಬೇಕು. ಅಂದರೆ ಪುರುಷ ಸಿಬ್ಬಂದಿಯು ಸಾಮಾನ್ಯ ಶರ್ಟ್‌, ಸಾಮಾನ್ಯ ಪ್ಯಾಂಟ್‌, ಫಾರ್ಮಲ್‌ ಶೂಗಳು ಮತ್ತು ಕ್ಲೀನ್‌ ಶೇವ್‌​ನ​ಲ್ಲಿ​ರ​ಬೇಕು. ಯಾವುದೇ ಕಾರ​ಣಕ್ಕೂ ಗಡ್ಡ ಬಿಡ​ಲೇ​ಬಾ​ರದು ಎಂದು ಸೂಚಿ​ಸಿ​ದ್ದಾ​ರೆ.

Tap to resize

Latest Videos

ಇನ್ನು ಮಹಿಳಾ ಸಿಬ್ಬಂದಿ​ ಸೀರೆ​ಗಳು, ಸೂಟ್‌​ಗ​ಳು, ​ಸಾ​ಮಾನ್ಯ ಅಂಗಿ ಮತ್ತು ಪ್ಯಾಂಟ್‌​ಗ​ಳನ್ನು ಧರಿಸಿ ಕಚೇ​ರಿಗೆ ಬರ​ಬೇಕು ಎಂದು ಆದೇ​ಶ​ದಲ್ಲಿ ತಿಳಿ​ಸ​ಲಾ​ಗಿದೆ. ದೇಶಾದ್ಯಂತ ಇರುವ ಸಿಬಿಐ ಕಚೇ​ರಿ​ಗ​ಳಿಗೆ ಈ ನಿಯಮ ಅನ್ವ​ಯ​ವಾ​ಗ​ಲಿದೆ.

click me!