'ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ, ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಸಿಎಂ'

Published : Mar 25, 2021, 09:13 AM IST
'ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ, ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಸಿಎಂ'

ಸಾರಾಂಶ

ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ: ಮೋದಿ| ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಮುಖ್ಯಮಂತ್ರಿ| ವಂದೇ ಮಾತರಂ ಎಂದ ನೆಲದಲ್ಲಿ ಇಂಥ ಹೇಳಿಕೆ| ದೀದಿಗೆ ಮೋದಿ ತಿರುಗೇಟು

ಕಾಂತಿ (ಮಾ.25): ‘ವಂದೇ ಮಾತರಂ’ ಹಾಡಿನ ಮೂಲಕ ಬಂಗಾಳ ಇಡೀ ದೇಶವನ್ನು ಒಂದುಗೂಡಿಸಿದೆ. ಆದರೆ ಇಂಥ ನೆಲದಲ್ಲಿ ನಿಂತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಹೊರಗಿನವರು’ ಎಂಬ ಪದ ಬಳಸಿದ್ದಾರೆ. ಆದರೆ ಯಾವೊಬ್ಬ ಭಾರತೀಯನೂ ಬಂಗಾಳದಲ್ಲಿ ಹೊರಗಿನವರಲ್ಲ ಎಂದು ಪ್ರಧಾನಿ ಮೋದಿ ಬುಧವಾರ ತಿರುಗೇಟು ನೀಡಿದರು.

ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಮಣ್ಣಿನ ಮಗನನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಘೋಷಿಸಿದರು.

ಪುರ್ಬಾ ಮೇದಿನಪುರ್‌ ಜಿಲ್ಲೆಯಲ್ಲಿ ನಡೆದ ಚುನಾವಣಾ ರಾರ‍ಯಲಿ ವೇಳೆ, ಮಮತಾ ಬ್ಯಾನರ್ಜಿ ಅವರ ‘ಹೊರಗಿನವರು ವರ್ಸಸ್‌ ಒಳಗಿನವರು’ ಹೇಳಿಕೆ ಖಂಡಿಸಿದ ಮೋದಿ ಅವರು, ‘ಬಂಗಾಳ ಬಂಕಿಮ ಚಂದ್ರ ಚಟರ್ಜಿ, ರವೀಂದ್ರನಾಥ್‌ ಠಾಗೋರ್‌ ಮತ್ತು ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮಭೂಮಿ. ಇಲ್ಲಿ ಯಾವೊಬ್ಬ ಭಾರತೀಯನೂ ಹೊರಗಿನವರಲ್ಲ. ಎಲ್ಲರೂ ಭಾರತಾಂಬೆಯ ಮಕ್ಕಳು’ ಎಂದು ಹೇಳಿದರು.

ಅಲ್ಲದೆ, ನಮ್ಮನ್ನು ಪ್ರವಾಸಿಗರು ಎಂದು ಹೀಗಳೆಯಲಾಗುತ್ತಿದೆ, ಅಪಹಾಸ್ಯ ಮಾಡಲಾಗುತ್ತಿದೆ. ದೀದಿ, ಬಂಗಾಳದ ಜನ ಯಾರನ್ನೂ ಹೊರಗಿನವರೆಂದು ಪರಿಗಣಿಸಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ