ಅಸ್ಸಾಂ, ಪುದುಚೇರಿ ಮೋದಿಗೆ, ಬಂಗಾಳ ದೀದಿಗೆ: ಚುನಾವಣಾಪೂರ್ವ ಸಮೀಕ್ಷೆ!

By Kannadaprabha NewsFirst Published Mar 25, 2021, 8:26 AM IST
Highlights

ಅಸ್ಸಾಂನಲ್ಲಿ ಮೋದಿ, ಬಂಗಾಳದಲ್ಲಿ ದೀದಿ| ಟೀವಿ 9 ಚುನಾವಣಾ ಪೂರ್ವ ಸಮೀಕ್ಷೆ

ನವದೆಹಲಿ(ಮಾ.25): ದೀದಿ ಮತ್ತು ಪ್ರಧಾನಿ ಮೋದಿ ನಡುವಿನ ಪ್ರತಿಷ್ಠೆಯ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸ್ಪಷ್ಟಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಟೀವಿ 9 ನೆಟ್‌ವರ್ಕ್ ಮತ್ತು ಪೋಲ್‌ಸ್ಟ್ರಾಟ್‌ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ಇನ್ನು ಅಸ್ಸಾಂನಲ್ಲಿ ಪುನಃ ಬಿಜೆಪಿ ಸರ್ಕಾರ ಬರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ ಬಹುಮತಕ್ಕೆ 148 ಸ್ಥಾನ ಬೇಕು. ಟಿಎಂಸಿ 146 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಬಿಜೆಪಿ 122 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಪೈಪೋಟಿ ನೀಡಲಿದೆ. ಇನ್ನು ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸೇರಿ 23 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 3 ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.

ಇನ್ನು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 73 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲಿದೆ. ಇನ್ನು ಯುಪಿಎ 50 ಕ್ಷೇತ್ರಗಳಲ್ಲಿ, ಪಕ್ಷೇತತರು 3 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಅಸ್ಸಾಂನಲ್ಲಿ ಒಟ್ಟು 126 ಕ್ಷೇತ್ರಗಳಿದ್ದು, ಬಹುಮತಕ್ಕೆ 64 ಸ್ಥಾನ ಬೇಕು.

ಪಶ್ಚಿಮ ಬಂಗಾಳ

ಒಟ್ಟು ಕ್ಷೇತ್ರ 294 (ಬಹುಮತಕ್ಕೆ 148)

ಟಿಎಂಸಿ 146

ಬಿಜೆಪಿ 122

ಕಾಂಗ್ರೆಸ್‌+ಎಡರಂಗ 23

ಪಕ್ಷೇತರರು 3

ಅಸ್ಸಾಂ

ಒಟ್ಟು ಸ್ಥಾನ 126 (ಬಹುಮತಕ್ಕೆ 64)

ಬಿಜೆಪಿ 73

ಯುಪಿಎ 50

ಪಕ್ಷೇತರರು 3

click me!