
ನವದೆಹಲಿ(ಆ.10) ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳಿಗೆ ಪ್ರಧಾನಿ ಮೋದಿ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ. ಮಣಿಪುರ ಹಿಂಸಾಚಾರ ಸೇರಿದಂತೆ ವಿಪಕ್ಷಗಳ ಪ್ರತಿ ಆರೋಪಕ್ಕೆ ಉತ್ತರಿಸಿದ ಮೋದಿ, ವಿಪಕ್ಷಗಳ ಒಕ್ಕೂಟವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿ ನೋವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ವಿಪಕ್ಷಗಳು ಒಗ್ಗಟ್ಟಾಗಿ ಬೆಂಗಳೂರಿನಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಎಲ್ಲಾ ವಿಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದ ಅಂತ್ಯಸಂಸ್ಕಾರ ಮಾಡಿದ್ದಾರೆ. ಎಲ್ಲಾ ಪಕ್ಷಗಳು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇಂತಹ ದೌರ್ಭಾಗ್ಯ ಕಾಂಗ್ರೆಸ್‌ಗೆ ಬಂದಿದೆ ಎಂದು ಮೋದಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೈತ್ರಿ ಒಕ್ಕೂಟ ಮಾಡಿದೆ. ಈ ಮೂಲಕ ಬಿಜೆಪಿ ಮಣಿಸಲು ಸಜ್ಜಾಗಿದೆ. ವಿಪಕ್ಷಗಳ ಹೊಸ ಒಕ್ಕೂಟವನ್ನು ತಿವಿದ ಮೋದಿ, ಕಾಂಗ್ರೆಸ್ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ. ಪಾಟ್ನಾ ಬಳಿಕ ವಿಪಕ್ಷಗಳ ಒಕ್ಕೂಟ ಬೆಂಗಳೂರಿನಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಂತ್ಯಕ್ರಿಯೆ ನಡೆಸಿದೆ.
ಕಾಂಗ್ರೆಸ್ ಅತೀವ ಉತ್ಸಾಹದಲ್ಲಿ ಈ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದೆ. ಜೊತೆಗೆ ಕಾಂಗ್ರೆಸ್ ಉತ್ಸವದ ರೂಪದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಕಾರಣ ಯುಪಿಎ ಒಕ್ಕೂಟದ ಅಂತ್ಯಸಂಸ್ಕಾರ ನಡೆಸಿದ ವಿಪಕ್ಷಗಳು, ಹೊಸ ಪೈಂಟ್ ಬಳಿದಿದೆ. ಇದನ್ನು ಕಾಂಗ್ರೆಸ್ ಉತ್ಸವನ್ನಾಗಿ ಕೊಂಡಾಡಿದೆ. ಜೊತೆಗೆ ಈ ವಿಪಕ್ಷಗಳ ಒಕ್ಕೂಟದಲ್ಲೂ ಭಾರತವನ್ನು ವಿಭಜಿಸಿದೆ ಎಂದು ಮೋದಿ ಹೇಳಿದ್ದಾರೆ.
ತುಕಡೆ, ತುಕಡೆ ಗ್ಯಾಂಗ್ ಜೊತೆ ಸೇರಿ ಭಾರತವನ್ನು ತುಕಡೆ ಮಾಡಲು ಹೊರಟ ಕಾಂಗ್ರೆಸ್ ಹಾಗೂ ವಿಪಕ್ಷ ಇದೀಗ ಒಕ್ಕೂಟದಲ್ಲೂ ಭಾರತವನ್ನು ಒಗ್ಗೂಡಿಸು ಕೆಲಸ ಮಾಡಲಿಲ್ಲ. ವಿಪಕ್ಷಗಳು ಒಕ್ಕೂಟದ ಹೆಸರನ್ನು I.N.D.I.A ಎಂದಿಟ್ಟಿದ್ದಾರೆ. ಇಲ್ಲೂ ಕೂಡ ಇಂಡಿಯಾ ಒಗ್ಗೂಡಲಿಲ್ಲ. ಡಾಟ್ ಮೂಲಕ ಬೇರ್ಪಡಿಸುವ ಕೆಲಸ ಮಾಡಿದ್ದಾರೆ ಎಂದು ಮೋದಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ