ಬೆಡ್ ಸಿಗದೆ ಎಸ್‌ಐ ಸಾವು, ರಾಷ್ಟ್ರ ರಾಜಧಾನಿಯಲ್ಲೇ ಎಂಥ ಸ್ಥಿತಿ!

By Suvarna NewsFirst Published Apr 23, 2021, 9:31 PM IST
Highlights

ಕೊರೋನಾ ಕರಾಳ ಸ್ಥಿತಿ/ ಬೆಡ್ ಸಿಗದೆ  ದೆಹಲಿಯ ಸಬ್  ಇನ್ಸ್ ಪೆಕ್ಟರ್ ಅಂಕಿತ್ ಚೌಧರಿ ಕೊರೋನಾಕ್ಕೆ ಬಲಿ/ ದೆಹಲಿಯಲ್ಲಿ ಬೆಡ್ ಸಿಗಲಿಲ್ಲ ಎಂದು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು

ನವದೆಹಲಿ (ಏ. 23) ಕೊರೋನಾ ತನ್ನ ಕರಾಳ ಛಾಯೆಯನ್ನು ಹೆಚ್ಚು ಮಾಡಿಕೊಂಡು ಬಲಿ ಪಡೆದುಕೊಳ್ಳುತ್ತ ಸಾಗಿದೆ. 29  ವರ್ಷದ ದೆಹಲಿಯ ಸಬ್  ಇನ್ಸ್ ಪೆಕ್ಟರ್ ಅಂಕಿತ್ ಚೌಧರಿ ಕೊರೋನಾಕ್ಕೆ ಬಲಿಯಾಗಿದ್ದಾರೆ. 

ಏಪ್ರಿಲ್  15 ರಂದು ಅವರಿಗೆಬ ಪಾಸಿಟಿವ್ ಕಾಣಿಸಿಕೊಂಡಿತ್ತು.  ಮನೆಯಲ್ಲಿಯೇ ಐಸೋಲೇಶನ್ ನಲ್ಲಿದ್ದ ಅಂಕಿತ್ ಪರಿಸ್ಥಿತಿ ಗಂಭೀರವಾದ  ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಂಕಿತ್ ಅವರಿಗೆ ದೆಹಲಿಯಲ್ಲಿ ಬೆಡ್ ಸಿಗಲಿಲ್ಲ. ಅಲ್ಲಿಂದ ಉತ್ತರ ಪ್ರದೇಶಕ್ಕೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಯಿತು.

ಮಗನ ಕಳೆದುಕೊಂಡ ತಾಯಿಯ ಆಕ್ರಂದನ, ನೋವು ಕೇಳುವವರು ಯಾರು? 

ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದ  ಅಂಕಿತ್ ಅವರಿಗೆ  ದೆಹಲಿಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಬೆಡ್ ಸಿಗಲಿಲ್ಲ. ಕೊನೆಗೆ ಗಜಿಯಾಬಾದ್ ನ ಆಸ್ಪತ್ರೆಯೊಂದಕ್ಕೆ  ಕರೆದುಕೊಂಡು ಹೋಗಿ ದಾಖಲಿಸಿದೆವು.  ಆದರೆ ಕಾಲ ಮಿಂಚಿತ್ತು... ವೈರಸ್ ಅವರ ಶ್ವಾಸಕೋಶ ಆವರಿಸಿದೆ ಎಂದು ವೈದ್ಯರು ಹೇಳಿದ್ದರು..ಹೆಸರು ಹೇಳಲು ಬಯಸದ ಸ್ನೇಹಿತ ಕರಾಳತೆಯನ್ನು ವಿವರಿಸುತ್ತಾರೆ.

ಕೆಲವು ಕಾಲದಿಂದಲೂ ಚೌಧರಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ.  ಚೌಧರಿ ಅವರನ್ನು ಉಳಿಸಿಕೊಳ್ಳಲು ಪ್ಲಾಸ್ಮಾ ಅಗತ್ಯ ಇತ್ತು.  ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇದ್ದು ಡೋನರ್ ಬಗ್ಗೆಯೂ ಹೇಳಿದ್ದವು ಆದರೆ ಕುಟುಂಬ ನಿರಾಕರಿಸಿತ್ತು ಎಂದು ಪೊಲೀಸ್ ಇಲಾಖೆ ಹೇಳುತ್ತದೆ.

ಕಳೆದ ಎಂಟು ವರ್ಷಗಳಿಂದ ದೆಹಲಿ ಪೊಲೀಸ್ ನಲ್ಲಿ  ಕೆಲಸ ಮಾಡುತ್ತಿದ್ದ ಅಂಕಿತ್ ಭರತ್ ನಗರ್ ಇನ್ಸ್ ಪೆಕಟ್ರ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದರು.  ಅಂಕಿತ್ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಅಗಲಿದ್ದಾರೆ. 

 

 

This video of SI Ankit is heart breaking but I wanted to share it because we need to understand the value of life.🙏🏻🙏🏻 pic.twitter.com/WeBCwMeZfG

— Dp cop shekhar choudhary (@ajatboy111)
click me!