
ನವದೆಹಲಿ (ಏ. 23) ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ 11 ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ದಿನವೊಂದಕ್ಕೆ 3.32 ಲಕ್ಷ ಪ್ರಕರಣ ದಾಖಲಾಗಿದ್ದು ಆತಂಕ ಹೆಚ್ಚಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಾಂಕ್ರಾಮಿಕ ಮತ್ತು ಆಸ್ಪತ್ರೆಯಲ್ಲಿ ಆಕ್ಸಿಜನ್ ಬಿಕ್ಕಟ್ಟು ಕುರಿತಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ ವಿಡಿಯೋ ಟಿವಿಗಳಲ್ಲಿ ಪ್ರಸಾರವಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೇಜ್ರಿವಾಲ್ ಕಚೇರಿ ವಿಷಾದ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ವಿಕೇಂಡ್ ಲಾಕ್ ಡೌನ್ ; ಏನಿರುತ್ತೆ? ಏನಿರಲ್ಲ?
ಪ್ರಸಾರ ಮಾಡಿದ್ದಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳು ಕೇಜ್ರಿವಾಲ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಪರಿಹಾರಕ್ಕೆ ಸಲಹೆ ಕೊಡಿ ಎಂದರೆ ಇಲ್ಲಿಯೂ ರಾಜಕಾರಣ ಮಾಡುತ್ತೀರಾ ಎಂದು ಹೇಳಿದ್ದರು.
ಆಕ್ಸಿಜನ್ ಟ್ಯಾಂಕರ್ ಗಳು ದೆಹಲಿ ಪ್ರವೇಶ ಮಾಡದಂತೆ ತಡೆಯಲಾಗುತ್ತಿದೆ. ನಿಮಗೆ ಗೊತ್ತಿರುವಂತೆ ದೆಹಲಿಯಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲ. ಹೀಗೆ ತಡೆದರೆ ದೆಹಲಿ ನಾಗರಿಕರು ಏನು ಮಾಡಬೇಕು? ಕೇಂದ್ರ ಸರ್ಕಾರದೊಂದಿಗೆ ಹೇಗೆ ಮಾತುಕತೆ ಮಾಡಬೇಕು? ಎನ್ನುವುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದರು.
ಕೇಜ್ರಿವಾಲ್ ಕುಹಲದ ಮಾತುಗಳನ್ನು ಆಡುತ್ತ ಸಭೆಯ ಗಂಭೀರತೆಯನ್ನೇ ಹಾಳುಮಾಡಿದ್ದಾರೆ ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದರು. ಒಟ್ಟಿನಲ್ಲಿ ಕೇಂದ್ರದ ಎಚ್ಚರಿಕೆ ನಂತರ ಕೇಜ್ರಿವಾಲ್ ಕಚೇರಿ ವಿಷಾದ ವ್ಯಕ್ತಪಡಿಸಿದೆ ಆದರೆ, ಸಭೆಯ ವಿಡಿಯೋಗಳು ಪ್ರಸಾರವಾಗಿಹೋಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ