ರಾಷ್ಟ್ರ ರಾಜಧಾನಿಯಲ್ಲಿ ಮೂರು ದಿನಗಳ ಮದ್ಯ ನಿಷೇಧ ಮಾಡಲಾಗಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ ಇದೀಗ ಹಲವರು ಮದ್ಯದ ಅಂಗಡಿಗಳತ್ತ ಧಾವಿಸುತ್ತಿದ್ದಾರೆ. ಇದರಿಂದ ಮದ್ಯದ ಅಂಗಡಿ ಫುಲ್ ರಶ್ ಆಗಿದೆ. ಮೂರು ದಿನಗಳ ಮದ್ಯ ಮಾರಾಟ ಇದೀಗ ಒಂದೇ ದಿನದಲ್ಲಿ ಆಗುವ ಹಂತಕ್ಕೆ ಬಂದಿದೆ.
ನವದೆಹಲಿ(ಡಿ.01): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಟ ನಿಷೇಧಿಸಲಾಗಿದೆ. ಶುಕ್ರವಾರದಿಂದ(ಡಿ.02) ಮೂರು ದಿನಗಳ ಕಾಲ ಅಂದರೆ ಭಾನುವಾರದವರಗೆ(ಡಿ.04) ಮದ್ಯ ಮಾರಾಟ ನಿಷೇಧಿಸಲಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಹಿನ್ನಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಳಿಕ ಮತ ಏಣಿಕೆ ದಿನವೂ ಮದ್ಯ ಮಾರಾಟ ನಿಷೇಧಿಸಲಾದಿದೆ. ಅಂದರೆ ಡಿಸೆಂಬರ್ 7 ರಂದು ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯಲಿದೆ. ಮದ್ಯ ಮಾರಾಟ ನಿಷೇಧ ಘೋಷಣೆ ಹೊರಬೀಳುತ್ತಿದ್ದಂತೆ ಇದೀಗ ಹಲವರು ಮದ್ಯದ ಅಂಗಡಿಗಳತ್ತ ಧಾವಿಸುತ್ತಿದ್ದಾರೆ. ನಿಷೇಧದ ಸಮಯದಲ್ಲೇ ವೀಕೆಂಡ್ ಕೂಡ ಇರುವದರಿಂದ ಜನರು ಇದೀಗ ಮದ್ಯ ಶೇಖರಿಸಲು ಮುಂದಾಗಿದ್ದಾರೆ. ಹೀಗಾಗಿ ಮದ್ಯದ ಅಂಗಡಿಗಳಲ್ಲಿ ಭಾರಿ ಜನಸಂದಣಿ ವ್ಯಕ್ತವಾಗಿದೆ.
ಡಿಸೆಂಬರ್ 2 ರಿಂದ ಸಂಜೆ 5.30 ರಿಂದ ಡಿಸೆಂಬರ್ 4 ಸಂಜೆ 5.30ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು ಮತ ಎಣಿಕೆಯ ದಿನವೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದೇ ವೇಳೆ ದೆಹಲಿ ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಮೂರು ದಿನ ಮದ್ಯ ನಿಷೇಧ ಕಾರಣ, ಚುನಾವಣೆಗಾಗಿ ಯಾರೂ ಮದ್ಯ ಶೇಖರಿವಂತಿಲ್ಲ. ಇನ್ನು ಮದ್ಯದ ಅಂಗಡಿಗೆ ತೆರಳಿ ಖರೀದಿ ಮಾಡುವವರಿಗೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಗೂ ಅವಕಾಶವಿಲ್ಲ. ಒಬ್ಬರಿಗೆ ನಿಗದಿ ಮಾಡಿದ ಮದ್ಯವನ್ನು ಮಾತ್ರ ಖರೀದಿ ಮಾಡಬೇಕು.
Alcohol Ban: ಆಲ್ಕೋಹಾಲ್ ಬ್ಯಾನ್ ವಿಚಾರದಲ್ಲಿ ಇಬ್ಬಗೆ ನೀತಿಗೆ ಫ್ಯಾನ್ಸ್ ಆಕ್ರೋಶ..!
ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದ್ಯ ಖರೀದಿಗೆ ಮುಂದಾಗಿದ್ದಾರೆ. ಹಲವು ಮದ್ಯ ಖರೀದಿ ಕೇಂದ್ರಗಳಲ್ಲಿ ಕ್ಯೂನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಮೂರು ದಿನಗಳ ಕಾಲ ಸಾಮಾನ್ಯವಾಗಿ ನಡೆಯುತ್ತಿದ್ದ ಮದ್ಯ ಮಾರಾಟ ಇದೀಗ ಒಂದೇ ದಿನದಲ್ಲಿ ಆಗುವ ಎಲ್ಲಾ ಸಾಧ್ಯತೆಗಳಿವೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.
ಬಿಜೆಪಿಗೆ 250ರ ಪೈಕಿ 170 ಸ್ಥಾನ: ಸಮೀಕ್ಷೆ
ಡಿ.4ರಂದು ನಡೆಯಲಿರುವ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 250 ಸೀಟುಗಳ ಪೈಕಿ 170 ಸೀಟು ಗೆಲ್ಲಲಿದೆ ಎಂದು ಪಕ್ಷ ನಡೆಸಿದ ಆಂತರಿಕ ಸಮೀಕ್ಷಾ ವರದಿ ಹೇಳಿದೆ. ನ.13ರಿಂದ 14ರವರೆಗೆ 43,750 ಮತದಾರರ ಸಮೀಕ್ಷೆ ನಡೆಸಲಾಗಿತ್ತು. 250 ವಾರ್ಡ್‌ಗಳ ಪೈಕಿ 150 ವಾರ್ಡ್‌ಗಳಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿದುಬಂದಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ತಿಳಿಸಿದ್ದಾರೆ. 2017ರಲ್ಲಿ ನಡೆದ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 181 ಸೀಟ್‌ಗಳನ್ನು ಗೆದ್ದಿತ್ತು. ಈ ನಡುವೆ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 200 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.
Alcohol Abuse: ಅಪರಿಚಿತ ಮಹಿಳೆ ಬೆಡ್‌ರೂಂನಲ್ಲಿ ಅರೆಬೆತ್ತಲೆ ಮಲಗಿದ ಕಂಪನಿಯ ಮುಖ್ಯ ಅಧಿಕಾರಿ ವಿರುದ್ದ ಕೇಸ್..!
ಟಿಕೆಟ್ ನೀಡದ್ದಕ್ಕೆ ಟವರ್ ಏರಿದ ಆಪ್ ಮುಖಂಡ!
ಮುಂಬರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಹಸೀಬ್ ಉಲ್ ಹಸನ್ ಎಂಬ ಆಪ್ ಮುಖಂಡನೊಬ್ಬ ಮೊಬೈಲ್ ಟವರ್ ಏರಿ ಕುಳಿತು ಫೇಸ್‌ಬುಕ್ ಲೈವ್ ಬಂದ ಘಟನೆ ಭಾನುವಾರ ನಡೆದಿದೆ. ಈ ವೇಳೆ ಲೈವ್‌ನಲ್ಲಿ ‘ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನನ್ನ ದಾಖಲೆಗಳು ಪಕ್ಷದ ಅತಿಶಿ ಮತ್ತು ದುರ್ಗೇಶ್ ಪಾಠಕ್ ಅವರ ಬಳಿ ಇವೆ. ನನ್ನ ಬ್ಯಾಂಕ್ ಖಾತೆ ಸೇರಿದಂತೆ ಅನೇಕ ದಾಖಲೆಗಳನ್ನು ಅವರು ಹಿಂದಿರುಗಿಸುತ್ತಿಲ್ಲ. ನಾನು ಸತ್ತರೆ ಅದಕ್ಕೆ ನೇರವಾಗಿ ಈ ಇಬ್ಬರು ಹಾಗೂ ಆಮ್ ಆದ್ಮಿ ಪಾರ್ಟಿಯೇ ಹೊಣೆ’ ಎಂದು ಹಸನ್ ಆರೋಪಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಅವರು ಕೆಳಗೆ ಇಳಿದಿದ್ದಾರೆ.