ಗಲ್ಲು ಜಾರಿಗೆ ತಡೆ ಕೋರಿದ ನಿರ್ಭಯಾ ಹಂತಕರು, ಪೊಲೀಸರಿಗೆ ಕೋರ್ಟ್‌ ನೋಟಿಸ್‌

By Kannadaprabha NewsFirst Published Mar 19, 2020, 10:56 AM IST
Highlights

ನಾಳೆ ನಿರ್ಭಯಾ ಹಂತಕರಿಗೆ ಗಲ್ಲು ಆಗುತ್ತಾ?| ಗಲ್ಲು ಶಿಕ್ಷೆ ಜಾರಿಗೆ ತಡೆ ಕೋರಿದ ಹಂತಕರು| ತಿಹಾರ್‌, ಪೊಲೀಸರಿಗೆ ಕೋರ್ಟ್‌ ನೋಟಿಸ್‌| ಈ ಕಾರಣ ಗಲ್ಲು ಜಾರಿಯಾಗುತ್ತಾ ಎಂಬ ಅನುಮಾನ

ನವದೆಹಲಿ[ಮಾ.19]: ನಿರ್ಭಯಾ ಪ್ರಕರಣದ ದೋಷಿ ಅಕ್ಷಯ್‌ ಸಿಂಗ್‌ ಸಲ್ಲಿಸಿರುವ 2ನೇ ಕ್ಷಮಾದಾನ ಅರ್ಜಿ ಇನ್ನು ಇತ್ಯರ್ಥವಾಗದ ಕಾರಣ, ಪ್ರಕರಣದ ನಾಲ್ವರು ದೋಷಿಗಳ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ದೋಷಿಗಳ ಪರವಾಗಿ ಬುಧವಾರ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ದಿಲ್ಲಿ ಪೊಲೀಸರು ಹಾಗೂ ತಿಹಾರ್‌ ಜೈಲಧಿಕಾರಿಗಳಿಗೆ ಗುರುವಾರ ಉತ್ತರ ನೀಡುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಿದೆ.

ಹೀಗಾಗಿ ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ನಾಲ್ವರು ದೋಷಿಗಳನ್ನು ಮಾಚ್‌ರ್‍ 20ರ ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸುವ ಬಗ್ಗೆ ಮತ್ತೊಮ್ಮೆ ಅನುಮಾನ ಮೂಡಿದೆ. ಕಾರಣ, ಒಂದು ವೇಳೆ ತಿಹಾರ ಜೈಲಿನ ಅಧಿಕಾರಿಗಳ ಉತ್ತರ ಪರಿಶೀಲಿಸಿದ ಬಳಿಕ ದೆಹಲಿ ಕೋರ್ಟ್‌ ಶಿಕ್ಷೆ ಜಾರಿಗೆ ತಡೆ ನೀಡದೇ ಹೋದಲ್ಲಿ, ದೋಷಿಗಳು ಹೈಕೋರ್ಟ್‌, ಬಳಿಕ ಸುಪ್ರೀಂಕೋರ್ಟ್‌ಗೆ ಹೋಗುವ ಅವಕಾಶವೂ ಇದ್ದೇ ಇದೆ. ಹೀಗಾಗಿ ಶುಕ್ರವಾರ ಬೆಳಗ್ಗೆ ಶಿಕ್ಷೆ ಜಾರಿ ಬಗ್ಗೆ ಅನುಮಾನಗಳು ಉಳಿದುಕೊಂಡಿವೆ.

ಅರ್ಜಿ ವಜಾ:

ಈ ನಡುವೆ, ಅತ್ಯಾಚಾರ ನಡೆದ 2012ರ ಡಿ.16ರಂದು ತಾನು ದಿಲ್ಲಿಯಲ್ಲೇ ಇರಲಿಲ್ಲ ಎಂದು ದೋಷಿ ಮುಕೇಶ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ಬುಧವಾರ ವಜಾ ಮಾಡಿದೆ. ಹೀಗಾಗಿ ಮುಕೇಶ್‌ಸಿಂಗ್‌ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆ ಇದೆ.

click me!