ನಿರ್ಭಯಾ ಕೇಸ್‌: ಇಬ್ಬರು ದೋಷಿಗಳ ಕ್ಯುರೇಟಿವ್‌ ಜ.14ರಂದು ವಿಚಾರಣೆ

By Suvarna News  |  First Published Jan 12, 2020, 8:49 AM IST

ನಿರ್ಭಯಾ ಕೇಸ್‌: ಇಬ್ಬರು ದೋಷಿಗಳ ಕ್ಯುರೇಟಿವ್‌ ಜ.14ರಂದು ವಿಚಾರಣೆ| ವಿನಯ್‌ ಶರ್ಮಾ (26) ಹಾಗೂ ಮುಕೇಶ್‌ ಕುಮಾರ್‌ (32) ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿ


ನವದೆಹಲಿ[ಜ.12]: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇಬ್ಬರು ದೋಷಿಗಳು ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜ.14ರಂದು ವಿಚಾರಣೆ ನಡೆಸಲಿದೆ.

ನ್ಯಾ| ಎನ್‌.ವಿ. ರಮಣ, ನ್ಯಾ. ಅರುಣ್‌ ಮಿಶ್ರಾ, ನ್ಯಾ| ಆರ್‌ಎಫ್‌ ನಾರಿಮನ್‌ ಮತ್ತು ನ್ಯಾ| ಅಶೋಕ್‌ ಭೂಷಣ್‌ ಅವರು ವಿನಯ್‌ ಶರ್ಮಾ (26) ಹಾಗೂ ಮುಕೇಶ್‌ ಕುಮಾರ್‌ (32) ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ಈ ಪ್ರಕರಣದ ಇನ್ನಿಬ್ಬರು ದೋಷಿಗಳಾದ ಅಕ್ಷಯ್‌ ಕುಮಾರ್‌ ಸಿಂಗ್‌ (31) ಹಾಗೂ ಪವನ್‌ ಗುಪ್ತಾ (25) ಈವರೆಗೆ ಕ್ಯುರೇಟಿವ್‌ ಅರ್ಜಿ ಸಲ್ಲಿಕೆ ಮಾಡಿಲ್ಲ. ಈಗಾಗಲೇ ಈ ನಾಲ್ವರನ್ನೂ ಜ.22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೆ ಏರಿಸುವಂತೆ ದೆಹಲಿ ನ್ಯಾಯಾಲಯ ಡೆತ್‌ ವಾರಂಟ್‌ ಜಾರಿ ಮಾಡಿದೆ.]

Latest Videos

ನಿರ್ಭಯಾ ರೇಪಿಸ್ಟ್‌ಗಳ ಗಲ್ಲು ಮತ್ತೆ ಮುಂದಕ್ಕೆ?

ಏನಿದು ಕ್ಯುರೆಟಿವ್‌ ಅರ್ಜಿ?:

ಗಲ್ಲು ಶಿಕ್ಷೆಗೆ ಗುರಿಯಾದ ದೋಷಿಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ತಿರಸ್ಕೃತಗೊಂಡ ಬಳಿಕ ಇರುವ ಕೊನೆಯ ಕಾನೂನು ಆಯ್ಕೆ ಇದಾಗಿದೆ. ಸುಪ್ರೀಂಕೋರ್ಟ್‌ ಅಂತಿಮ ತೀರ್ಪಿನ ವಿರುದ್ಧ ಯಾವುದೇ ರೀತಿಯ ಕ್ಷಮೆಗೆ ದೋಷಿಗಳು ಅರ್ಹರೇ ಎಂಬುದುನ್ನು ಕೋರ್ಟ್‌ ಪರಿಶೀಲಿಸಲಿದೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡರೆ ಕ್ಷಮಾದಾನ ನೀಡುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ.

ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!

click me!